ಮುಂಬೈ: Salman Khan To Transfer Money To 25000 Daily Wage Wokers Of Bollywood - ಕೊರೊನಾ ವೈರಸ್ (Covid-19) ಹಿನ್ನೆಲೆ ಕಳೆದ ವರ್ಷದಂತೆ ಈ ವರ್ಷವೂ ಕೂಡ ಹಾಹಾಕಾರ ಸೃಷ್ಟಿಯಾಗಿದೆ. ಮುಂಬೈ ಚಿತ್ರೋದ್ಯಮದ ವೇಗ ಕೂಡ ಕೊರೊನಾ ಹಿನ್ನೆಲೆ ಕಡಿಮೆಯಾಗಿದೆ. ಶೂಟಿಂಗ್ ನಿಂತುಹೋದ ಕಾರಣ ಚಿತ್ರೋದ್ಯಮದಲ್ಲಿ ಕೆಲಸ ಮಾಡುವ ದಿನಗೂಲಿ ನೌಕರರ ಮೇಲೆ ಸಂಕಷ್ಟಗಳ ಕಾರ್ಮೋಡಗಳೇ ಕುಸಿದಿವೆ. ಏತನ್ಮಧ್ಯೆ ಮತ್ತೊಮ್ಮೆ ಸಲ್ಮಾನ್ ಖಾನ್ ಈ ಕಾರ್ಮಿಕರ ನೆರವಿಗೆ ಧಾವಿಸಿದ್ದಾರೆ. ಕಳೆದ ವರ್ಷದಂತೆ ಈ ವರ್ಷವೂ ಕೂಡ ಸಲ್ಮಾನ್ ಖಾನ್ ಚಿತ್ರೋದ್ಯಮದ ಸುಮಾರು 25 ಸಾವಿರ ಸಿನಿ ಕಾರ್ಮಿಕರಿಗೆ ಆರ್ಥಿಕ ನೆರವು ಒದಗಿಸಲು ಮುಂದಾಗಿದ್ದಾರೆ. ಕೊರೊನಾ ವೈರಸ್ ಲಾಕ್ ಡೌನ್ (Lockdown) ನಿಂದ ಪೀಡಿತ ಚಿತ್ರೋದ್ಯಮದ ಕಾರ್ಮಿಕರ ಬ್ಯಾಂಕ್ ಖಾತೆಗೆ ರೂ.1500 ನೇರ ವರ್ಗಾವಣೆ ಮಾಡಲು ಮುಂದಾಗಿದ್ದಾರೆ.


COMMERCIAL BREAK
SCROLL TO CONTINUE READING

ಈ ಕುರಿತು ಮಾಹಿತಿ ನೀಡಿರುವ ಫೆಡರೇಶನ್ ಆಫ್ ವೆಸ್ಟೆರ್ನ್ ಇಂಡಿಯನ್ ಸಿನಿ ಎಂಪ್ಲಾಯೀಸ್ (FWICI) ಪ್ರಧಾನ ಸಚಿವ ಅಶೋಕ್ ದುಬೇ, " ಇದಕ್ಕೆ ಸಂಬಂಧಿಸಿದಂತೆ ಸಲ್ಮಾನ್ ಖಾನ್ (Salman Khan) ಮ್ಯಾನೇಜರ್, FWICI ಅಧ್ಯಕ್ಷ BN ತಿವಾರಿ ಅವರ ಜೊತೆಗೆ ಮಾತುಕತೆ ನಡೆಸಿದ್ದು, ಚಿತ್ರೋದ್ಯಮದ ಸುಮಾರು 25000 ಕಾರ್ಮಿಕರ ಖಾತೆಯ ಮಾಹಿತಿ ಹಂಚಿಕೊಳ್ಳಲು ಹೇಳಿದ್ದಾರೆ' ಎಂದಿದ್ದಾರೆ. ನಟ ಪ್ರತಿಯೊಬ್ಬರ ಖಾತೆಗೆ ರೂ.1500 ವರ್ಗಾವಣೆ ಮಾಡಲಿದ್ದಾರೆ. ಇದಕ್ಕೂ ಮೊದಲು ಕೂಡ ಕಳೆದ ವರ್ಷ ಸಲ್ಮಾನ್ ಕೊವಿಡ್ ಹೊಡೆತಕ್ಕೆ ತತ್ತರಿಸಿ ಹೋಗಿದ್ದ ಸಿನಿ ಕಾರ್ಮಿಕರಿಗೆ ನೆರವು ಒದಗಿಸಿದ್ದರು.


ಇದನ್ನೂ ಓದಿ- Yash Raj Films: 30 ಸಾವಿರ ಸಿನಿ ಕಾರ್ಮಿಕರ ಉಚಿತ ವ್ಯಾಕ್ಸಿನೇಷನ್ ಜವಾಬ್ದಾರಿ ಹೊತ್ತ YRF


'ನಮಗೆ ಈ ಸ್ಥಿತಿಯ ಕುರಿತು ಅಂದಾಜಿಸಿರಲಿಲ್ಲ. ಏಕೆಂದರೆ ಕಳೆದ ಡಿಸೆಂಬರ್ ನಿಂದ ಕೆಲಸ ಆರಂಭಗೊಂಡಿತ್ತು. ಫೆಬ್ರುವರಿವರೆಗೆ ನಮ್ಮ ಹಲವು ಕಾರ್ಮಿಕರಿಗೆ ಕೆಲಸ ಕೂಡ ಸಿಗಲು ಆರಂಭಿಸಿತ್ತು ಮತ್ತು ಎಲ್ಲರೂ ಖುಷಿಯಾಗಿದ್ದರು. ಕೊವಿಡ್ ಹೆಮ್ಮಾರಿಯ ಎರಡನೇ ಅಲೆಯ (Coronavirus Second Wave) ಹಿನ್ನೆಲೆ ಮತ್ತೆ ಕಾರ್ಮಿಕರು ತಮ್ಮ ಕೆಲಸ ಕಳೆದುಕೊಂಡರು. ಮತ್ತೆ ಎಲ್ಲ ಸಂಗತಿಗಳು ಯಾವಾಗ ಹಳಿಗೆ ಮರಳಲಿವೆ ಮತ್ತು ಯಾವಾಗ ಮೊದಲಿನ ರೀತಿ ಕೆಲಸ ಆರಂಭವಾಗಲಿದೆ ಎಂಬುದರ ಅಂದಾಜು ವ್ಯಕ್ತಪಡಿಸುವುದು ಸ್ವಲ್ಪ ಕಷ್ಟಸಾಧ್ಯ' ಎಂದು ಅಶೋಕ್ ದುಬೆ ಹೇಳಿದ್ದಾರೆ.


ಇದನ್ನೂ ಓದಿ-ತನ್ನ ಚಿಕ್ಕಮ್ಮನಿಗೆ ಆಕ್ಸಿಜನ್ ಸಿಲಿಂಡರ್ ಕೋರಿದ ರೈನಾ ನೆರವಿಗೆ ಧಾವಿಸಿದ ಸೋನು ಸೂದ್


ಆದರೆ, ಪ್ರಸ್ತುತ ಕೊವಿಡ್ ಮಹಾಮಾರಿ ಮರುಕಳಿಸಿದ ಹಿನ್ನೆಲೆ ಸಲ್ಮಾನ್ ಖಾನ್ ಮತ್ತೆ ಸಹಾಯಹಸ್ತ ಚಾಚಿದ್ದಾರೆ. ಕಳೆದ ವರ್ಷ ರಾಷ್ಟ್ರವ್ಯಾಪಿ ಲಾಕ್ ಡೌನ್ ವಿಧಿಸಿದ ಬಳಿಕ ಎಲ್ಲ ಉದ್ಯಮಗಳಂತೆ ಚಿತ್ರೋದ್ಯಮಕ್ಕೂ ಕೂಡ ಭಾರಿ ಹಾನಿ ತಲುಪಿತ್ತು. ಇದಾದ ಬಳಿಕ ಉದ್ಯಮ ಪುನಃ ಹಳಿಗೆ ಮರಳಿತ್ತು. ದಿನಗೂಲಿ ಕಾರ್ಮಿಕರಿಗೂ ಕೂಡ ಫೆಬ್ರುವರಿ ತಿಂಗಳಿನಲ್ಲಿ ಕೆಲಸ ಸಿಗಲು ಆರಂಭಗೊಂಡಿತ್ತು. ಆದರೆ, ಕೊವಿಡ್ -19 ಎರಡನೇ ಅಲೆ ಪರಿಸ್ಥಿತಿಯನ್ನು ಮತ್ತೊಮ್ಮೆ ಹದಗೆಡಸಿವೆ.


ಇದನ್ನೂ ಓದಿ- #FightAgainstCorona : ಕರೋನಾ ವಿರುದ್ಧ ಹೊಸ ಅಭಿಯಾನ ಆರಂಭಿಸಿದ ವಿರುಷ್ಕಾ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.