Mithun chakraborty: ಬಾಲಿವುಡ್‌ನಲ್ಲಿ ಸಾಕಷ್ಟು ಪ್ರಾಣಿ ಪ್ರಿಯರಿದ್ದಾರೆ. ಅನೇಕ ಕಲಾವಿದರು ತಮ್ಮೊಂದಿಗೆ ಮುದ್ದಾದ ನಾಯಿಗಳನ್ನು ಸಾಕುತ್ತಾರೆ. ನಾಯಿಗಳು ಒತ್ತಡವನ್ನು ಕಡಿಮೆ ಮಾಡುತ್ತವೆ.. ಮಾನಸಿಕ ಸಂತೋಷ ನೀಡುತ್ತವೆ.. ಎಂದು ಹೇಳಲಾಗುತ್ತದೆ. ಯಾರ ಮನೆಯಲ್ಲಾದರೂ ಒಂದು ಅಥವಾ ಎರಡು ನಾಯಿಗಳು ಇರುವುದು ಸಾಮಾನ್ಯ ಆದರೆ ಈ ಒಬ್ಬ ಬಾಲಿವುಡ್‌ ಸ್ಟಾರ್‌ ಮನೆಯಲ್ಲಿ ಮನೆಯಲ್ಲಿ 116 ನಾಯಿಗಳಿವೆ.. ಅಷ್ಟೇ ಅಲ್ಲ, ಆ ನಾಯಿಗಳಿಗೂ ಐಷಾರಾಮಿ ಜೀವನದ ಸವಿಯನ್ನು ನೀಡುತ್ತಿದ್ದಾರೆ. ನಾವು ಹೇಳುತ್ತಿರುವ ಈ ಶ್ವಾನ ಪ್ರೇಮಿ ಬೇರಾರೂ ಅಲ್ಲ ಬಾಲಿವುಡ್ ಸೂಪರ್ ಸ್ಟಾರ್ ಮಿಥುನ್ ಚಕ್ರವರ್ತಿ. 


COMMERCIAL BREAK
SCROLL TO CONTINUE READING

ಮಿಥುನ್ ಚಕ್ರವರ್ತಿ ಶ್ವಾನಪ್ರೇಮಿ ಎಂಬುದಕ್ಕೆ ಇದಕ್ಕಿಂತ ದೊಡ್ಡ ಸಾಕ್ಷಿ ಬೇರೊಂದಿಲ್ಲ. ಬಾಲಿವುಡ್‌ನಲ್ಲಿ ಮಿಥುನ್ ಚಕ್ರವರ್ತಿ ಎಷ್ಟು ದೊಡ್ಡ ಸ್ಟಾರ್ ನಟ ಎಂದು ಎಲ್ಲರಿಗೂ ತಿಳಿದಿದೆ, ಆದರೆ ಕೆಲವೇ ಕೆಲವು ಜನರಿಗೆ ಅವರು ದೊಡ್ಡ ನಾಯಿ ಪ್ರೇಮಿ ಎಂದು ತಿಳಿದಿದೆ.. ಮುಂಬೈ ಮತ್ತು ಭಾರತದ ಇತರ ಭಾಗಗಳಲ್ಲಿನ ಅವರ ವಿವಿಧ ಆಸ್ತಿಗಳಲ್ಲಿ ಅವರು 116 ನಾಯಿಗಳನ್ನು ಹೊಂದಿದ್ದಾರೆ. ವರದಿಗಳ ಪ್ರಕಾರ, ಮುಂಬೈ ಬಳಿಯ ಮಡ್ ಐಲ್ಯಾಂಡ್‌ನಲ್ಲಿರುವ ತಮ್ಮ 1.5 ಎಕರೆ ಆಸ್ತಿಯಲ್ಲಿ ನಟ 76 ನಾಯಿಗಳನ್ನು ಸಾಕುತ್ತಿದ್ದಾರೆ. ಆ ನಾಯಿಗಳಿಗೆ ಮಂಜೂರು ಮಾಡಲಾದ ಆಸ್ತಿ ಸುಮಾರು 45 ಕೋಟಿ ಎಂದು ಅಂದಾಜಿಸಲಾಗಿದೆ.  


ಇದನ್ನೂ ಓದಿ-ಡಿವೋರ್ಸ್ ಬೆನ್ನಲ್ಲೇ ಗೂಡ್ ನ್ಯೂಸ್ ಕೊಟ್ಟ ಚಂದನ ಶೆಟ್ಟಿ!! ಏನದು ಗೊತ್ತಾ?


ಮಿಥುನ್ ಚಕ್ರವರ್ತಿ ಅವರ ಸೊಸೆ ನಟಿ ಮದಾಲ್ಸಾ ಶರ್ಮಾ ಕಳೆದ ವರ್ಷ ಸಂದರ್ಶನವೊಂದರಲ್ಲಿ ನಾಯಿಗಳ ಬಗ್ಗೆ ಮಾತನಾಡಿದ್ದರು. ನಾಯಿಗಳಿಗೆ ಪ್ರತ್ಯೇಕ ಕೊಠಡಿಗಳಿವೆ. ನಾಯಿಗಳ ಆರೈಕೆಗೆ ಸಿಬ್ಬಂದಿಯನ್ನು ನೇಮಿಸಲಾಗಿದೆ. ನಾಯಿಗಳನ್ನು ಮಕ್ಕಳಂತೆ ನೋಡಿಕೊಳ್ಳಬೇಕು. ಸಮಯಕ್ಕೆ ಸರಿಯಾಗಿ ಆಹಾರವನ್ನು ನೀಡಬೇಕು.. ಈ ವಿಚಾರವಾಗಿ ಮಿಥುನ್‌ ಯಾವ ನಿರ್ಧಾರವನ್ನಾದರೂ ತೆಗದುಕೊಳ್ಳುತ್ತಾರೆ ಎಂದಿದ್ದಾರೆ.. 


ಇದನ್ನೂ ಓದಿ-ಯುವ ವಿಚ್ಛೇದನ ವಿಚಾರದಲ್ಲಿ ಸಪ್ತಮಿ ಗೌಡ ಹೆಸರು ಬಳಕೆ... ಕೋರ್ಟ್‌ನಿಂದ ಹೊರಬಿತ್ತು ಮಹತ್ವದ ಆದೇಶ


ನಟ ಮಿಥುನ್ ಚಕ್ರವರ್ತಿ ಒಂದು ಕಾಲದಲ್ಲಿ ಬಾಲಿವುಡ್ ನಲ್ಲಿ ಸ್ಟಾರ್ ಹೀರೋ ಆಗಿ ಮಿಂಚಿದ್ದರು. ಆದರೆ ಬಾಲಿವುಡ್ ಪ್ರವೇಶಕ್ಕೂ ಮುನ್ನ ಅವರು  ಬಡ ಕುಟುಂಬದಿಂದ ಬಂದವರು. ಸಿನಿಮಾ ಅವಕಾಶ ಅರಸಿ... ರೈಲ್ವೇ ನಿಲ್ದಾಣ, ಫುಟ್ ಪಾತ್ ಗಳಲ್ಲಿ ಮಲಗಿದ ಈ ಮಟ್ಟಕ್ಕೆ ಏರಿದವರು ಮಿಥುನ್ ಚಕ್ರವರ್ತಿ..  ಸದ್ಯ ಮಿಥುನ್ ಸುಮಾರು 400 ಕೋಟಿ ಆಸ್ತಿ ಹೊಂದಿದ್ದಾರೆ.. 


ಇನ್ನು ನಟ ಮಿಥುನ್ ಚಕ್ರವರ್ತಿ ಯೋಗಿತಾ ಬಾಲಿ ಅವರನ್ನು ವಿವಾಹವಾದರು.. ಆದರೆ ಅದಕ್ಕೂ ಮುನ್ನ ಅವರು ನಟಿ ಶ್ರೀದೇವಿ ಅವರೊಂದಿಗೆ ಮದುವೆಯಾಗಿದ್ದರು ಎನ್ನುವ ಮಾತುಗಳೂ ಕೇಳಿಬಂದಿದ್ದವು..  ನಟನೆಯಲ್ಲಿ ಮಾತ್ರವಲ್ಲದೆ ವೈಯಕ್ತಿಕ ಜೀವನದಲ್ಲೂ ಮಿಥುನ್ ಒಳ್ಳೆಯ, ಸೌಮ್ಯ, ವಿವಾದರಹಿತ ವ್ಯಕ್ತಿ ಎಂದು ಖ್ಯಾತಿ ಗಳಿಸಿದ್ದಾರೆ.
 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.