Bollywood Actress Janhvi Kapoor: ಬಾಲಿವುಡ್‌ ನಟಿ ಜಾನ್ವಿ ಕಪೂರ್‌ ಮೇ 31 ರಂದು ಬಿಡುಗಡೆಯಾದ 'ಮಿಸ್ಟರ್ ಅಂಡ್ ಮಿಸಸ್ ಮಹಿ' ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇದೇ ವೇಳೆ ನಟಿ ಇತ್ತೀಚೆಗೆ ತಮ್ಮ ಜೀವನದಲ್ಲಿ ನಡೆದ ಆಘಾತಕಾರಿ ಘಟನೆಯ ಬಗ್ಗೆ ಮಾತನಾಡಿದ್ದಾರೆ.


COMMERCIAL BREAK
SCROLL TO CONTINUE READING

ಜಾನ್ವಿ ಕಪೂರ್ ದಿವಂಗತ ನಟಿ ಶ್ರೀದೇವಿ ಮತ್ತು ನಿರ್ಮಾಪಕ ಬೋನಿ ಕಪೂರ್ ಅವರ ಪುತ್ರಿ. ಇಂಡಸ್ಟ್ರಿಗೆ ಬಂದ ಮೇಲೆ ಆಕೆಗೆ ವಿಶೇಷ ಮನ್ನಣೆ ಸಿಕ್ಕಿತು. ಆದರೆ ಒಂದು ದಿನ ತನ್ನ ಮಲಗುವ ಕೋಣೆಯಲ್ಲಿ ಬಾಯ್‌ಫ್ರೆಂಡ್‌ ಜೊತೆ ತಂದೆಗೆ ಸಿಕ್ಕ ನಂತರ ಅವರು ವಿಧಿಸಿದ ಶಿಕ್ಷೆಯ ಬಗ್ಗೆ ಸ್ವಾರಸ್ಯಕರವಾದ ಸಂಗತಿಯನ್ನು ವಿವರಿಸಿದ್ದಾರೆ.. 


ಇದನ್ನೂ ಓದಿ-Actor Ramkrishna: ಮನೆ ಕೆಲಸದವಳನ್ನೇ ಮದುವೆಯಾದ ಹಿರಿಯ ನಟ ರಾಮಕೃಷ್ಣ! ಇವರ ಮಗ ಕೂಡ ಸಖತ್‌ ಫೇಮಸ್!!


“ಒಂದು ದಿನ ಮನೆಯಲ್ಲಿ ಯಾರೂ ಇಲ್ಲದಿದ್ದಾಗ, ನಾನು ನನ್ನ ಸ್ನೇಹಿತನೊಂದಿಗೆ ಮಲಗುವ ಕೋಣೆಯಲ್ಲಿ ಕುಳಿತು ಮಾತನಾಡುತ್ತಿದ್ದಾಗ, ಇದ್ದಕ್ಕಿದ್ದಂತೆ ನನ್ನ ತಂದೆ ಬಂದರು. ನಾನು ತಕ್ಷಣ ಹುಡುಗನನ್ನು ಕಿಟಕಿಯಿಂದ ಹೊರಗೆ ನೂಕಿದೆ.. ನನ್ನ ತಂದೆಗೆ ಈ ವಿಷಯ ತಿಳಿದಿಲ್ಲ ಎಂದು ನಾನು ಭಾವಿಸಿದ್ದೆ. ಆದರೆ ನನ್ನ ತಂದೆ ಸಿಸಿಟಿವಿ ಕ್ಯಾಮೆರಾದಲ್ಲಿ ಎಲ್ಲವನ್ನೂ ನೋಡಿದ್ದರು... ಇದು ಅವರಿಗೆ ತುಂಬಾ ಕೋಪ ತಂದಿತು. ಇದಕ್ಕಾಗಿ ನನ್ನ ತಂದೆ ನನ್ನನ್ನು ಗದರಿ.. ಕಠಿಣ ಶಿಕ್ಷೆ ನೀಡಿದರು. ಈ ಘಟನೆಯ ನಂತರ ನಮ್ಮ ಮನೆಯ ಎಲ್ಲಾ ಕಿಟಕಿಗಳನ್ನು ಗ್ರಿಲ್‌ಗಳಿಂದ ಮುಚ್ಚಲಾಗಿದೆ" ಎಂದು ಹೇಳಿಕೊಂಡಿದ್ದಾರೆ..


ಜಾನ್ವಿ ಕಪೂರ್ ಮತ್ತು ರಾಜಕುಮಾರ್ ರಾವ್ ಅಭಿನಯದ 'ಮಿಸ್ಟರ್ ಅಂಡ್ ಮಿಸಸ್ ಮಹಿ' ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಬಾಕ್ಸ್ ಆಫೀಸ್‌ನಲ್ಲಿ ಒಳ್ಳೆಯ ಕಲೆಕ್ಷನ್ ಮಾಡುತ್ತಿದೆ.. ಈ ಚಿತ್ರದಲ್ಲಿ ನಟಿಸಲು ಜಾನ್ವಿ ಕಪೂರ್ 4 ಕೋಟಿ ಸಂಭಾವನೆ ತೆಗೆದುಕೊಂಡಿದ್ದಾರೆ.


ಇದನ್ನೂ ಓದಿ-ದಿನಕ್ಕೆ 100 ಸಿಗರೇಟ್ ಹೊಡಿತಾರಂತೆ ಈ ಸ್ಟಾರ್‌ ನಟ! ಯಾರು ಗೊತ್ತಾ?


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.