Sunil Gavaskar was Madhuri Dixit crush: 90 ರ ದಶಕದ ಅತ್ಯುತ್ತಮ ನಟಿ ಮಾಧುರಿ ದೀಕ್ಷಿತ್ ತಮ್ಮ ನಟನೆ ಮತ್ತು ಸೌಂದರ್ಯದಿಂದಲೇ ಅಪಾರ ಅಭಿಮಾನಿಗಳನ್ನು ಗಳಿಸಿದವರು.. ದಶಕಗಳ ಕಾಲ ಚಿತ್ರರಂಗವನ್ನು ಆಳಿದ ಈ ಚೆಲುವೆಯೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗನೊಂದಿಗೆ ಪ್ರೀತಿಯಲ್ಲಿ ಬಿದ್ದಿದ್ದರಂತೆ.. ಹಾಗಾದ್ರೆ ಯಾರದು?
 
ಮಾಧುರಿ ದೀಕ್ಷಿತ್ ಶ್ರೀರಾಮ್ ಮಾಧವ್ ಅವರನ್ನು ಮದುವೆಯಾಗುವ ಮುನ್ನ ಅನೇಕ ಬಾಲಿವುಡ್‌ ಸ್ಟಾರ್‌ಗಳೊಂದಿಗೆ ಡೇಟಿಂಗ್‌ ಮಾಡಿದ್ದರು.. ಆದರೆ ಆ ಯಾವ ಸಂಬಂಧವೂ ಮದುವೆಯವರೆಗೂ ಬರದೇ ಮುರಿದುಬಿದ್ದಿದ್ದವು.. 


COMMERCIAL BREAK
SCROLL TO CONTINUE READING

ಇದನ್ನೂ ಓದಿ-ನಾನು ಮದ್ಯ ಮತ್ತು ಮಾದಕ ವ್ಯಸನಿಯಾಗಿದ್ದೇನೆ.. ಸ್ಟಾರ್ ನಟಿಯ ಶಾಕಿಂಗ್‌ ಸ್ಟೇಟ್‌ಮೆಂಟ್!‌


ನಟನೆ ಕಾಲಿಡುವ ಮುನ್ನ ಮಾಧುರಿ ಅವರಿಗೆ ಕ್ರಿಕೆಟಿಗನೊಬ್ಬನ ಮೇಲೆ ಅತೀಯಾದ ಪ್ರೀತಿ ಇದ್ದು, ಅವರು ನಟಿಯ ಕನಸ್ಸಲ್ಲಿಯೂ ಬರುತ್ತಿದ್ದರಂತೆ.. ಆದರೆ ಪಡ್ಡೆ ಹುಡುಗರ ಡ್ರೀಮ್‌ ಗರ್ಲ್‌ ಮಾಧುರಿಯ ಆಸೆಗಳು ಬರೀ ಕನಸಿಗೆ ಮಾತ್ರ ಸೀಮಿತವಾಗಿತ್ತು.. 


ಇದನ್ನೂ ಓದಿ-ʼನನಗೆ ಇನ್ನೊಬ್ಬ ಮಗಳಿದ್ದಾಳೆʼ ಜಾನ್ವಿ.. ಖುಷಿ.. ಬಿಟ್ಟು ನಟಿ ಶ್ರೀದೇವಿಗೆ ಮತ್ತೊಬ್ಬ ಮಗಳಿದ್ದಾಳಾ?


ಧಕ್‌-ಧಕ್‌ ಬೆಡಗಿಯ ಹೃದಯ ಕದ್ದ ಕ್ರಿಕೆಟಿಗ ಬೇರಾರೂ ಅಲ್ಲ.. ಟೀಂ ಇಂಡಿಯಾ ಆಟಗಾರ ಸುನಿಲ್ ಗವಾಸ್ಕರ್.. ವಾಸ್ತವವಾಗಿ ಸುನಿಲ್ ಗವಾಸ್ಕರ್ ಮಾಧುರಿಗಿಂತಲೂ 18 ವರ್ಷ ದೊಡ್ಡವರಾಗಿದ್ದರು. ಈ ಬಗ್ಗೆ ಸ್ವತಃ ಮಾಧುರಿಯೇ ಬಹಿರಂಗಪಡಿಸಿದ್ದರು.


1992ರಲ್ಲಿ ನಟಿ ಮಾಧುರಿ ದೀಕ್ಷಿತ್‌ ಸಿನಿರಂಗದಲ್ಲಿ ಉತ್ತುಂಗದಲ್ಲಿದ್ದರು.. ಆ ವೇಳೆ ಸಂದರ್ಶನವೊಂದರಲ್ಲಿ ಭಾಗವಹಿಸಿದ ಅವರು "ನಾನು ಸುನೀಲ್‌ ಗವಾಸ್ಕರ್‌ ಹಿಂದೆ ಬಿದ್ದಿದ್ದೆ.. ಅವರು ನಿಜವಾಗಿಯೂ ನನಗೆ ಬಲು ಇಷ್ಟ.. ನಾನು ಆಗ್ಗಾಗೆ ಅವರ ಬಗ್ಗೆ ಕನಸು ಕಾಣುತ್ತೇನೆ" ಎಂದಿದ್ದರು.. ಮಾಧುರಿ ಈ ಸಂದರ್ಶನ ನೀಡಿದಾಗ ಅವರಿಗೆ 25 ವರ್ಷ, ಸುನಿಲ್ ಗವಾಸ್ಕರ್ ಅವರಿಗೆ 43 ವರ್ಷ. ಒಟ್ಟಿನಲ್ಲಿ ಮಾಧುರಿ ಸುನಿಲ್ ಗವಾಸ್ಕರ್ ಅವರ ದೊಡ್ಡ ಅಭಿಮಾನಿಯಾಗಿದ್ದರು. ಈ ವಿಚಾರವನ್ನು ಸಂದರ್ಶನದಲ್ಲಿ ಹೇಳಿದ್ದರು.. 



 
 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.