ಮದುವೆಗೂ ಮುನ್ನ ತಾಯಿಯಾಗ್ತಾರಂತೆ ತಮನ್ನಾ! ಬಾಯ್ ಫ್ರೆಂಡ್ ಜೊತೆ ʼಆʼ ಒಪ್ಪಂದ ಮಾಡಿಕೊಂಡಿದ್ಯಾಕೆ ಮಿಲ್ಕಿ ಬ್ಯೂಟಿ?
Actress Tamannah: ತಮನ್ನಾ ಭಾಟಿಯಾ ಮದುವೆಯಾಗದೆ ತಾಯಿಯಾಗಲಿದ್ದಾರೆ ಎಂಬ ಸುದ್ದಿ ಸಖತ್ ವೈರಲ್ ಆಗಿದ್ದು.. ಮಿಲ್ಕಿ ಬ್ಯೂಟಿ ತೆಗೆದುಕೊಂಡ ಈ ನಿರ್ಧಾರ ಕೇಳಿ ಎಲ್ಲರೂ ಶಾಕ್ ಆಗಿದ್ದಾರೆ.
Bollywood Star Actress Tamannah: ತಮನ್ನಾ ಭಾಟಿಯಾ ಚಿತ್ರರಂಗಕ್ಕೆ ಕಾಲಿಟ್ಟು ಎರಡು ದಶಕಗಳೇ ಕಳೆದಿವೆ. ಬಹುಕಾಲದಿಂದ ಬೆಳ್ಳಿತೆರೆಯನ್ನು ಆಳುತ್ತಿರುವ ಈಕೆ ಟಾಲಿವುಡ್ ನಲ್ಲಿ ಸ್ಟಾರ್ ಹೀರೋಯಿನ್ ಆಗಿ ಬೆಳೆದು ಇಡೀ ಸೌತ್ ಇಂಡಿಯಾದಲ್ಲಿ ಖ್ಯಾತಿ ಗಳಿಸಿದ್ದಾರೆ..
ಆದರೆ ಇವರು ಬಾಲಿವುಡ್‌ಗೆ ಎಂಟ್ರಿ ಕೊಟ್ಟಾಗಿನಿಂದ ಅವರ ಖ್ಯಾತಿ ತೆಕುಗಿನಲ್ಲಿ ಅಷ್ಟಾಗಿ ಇಲ್ಲ. ಇತ್ತೀಚೆಗೆ ನಟಿ ಹೆಚ್ಚಾಗಿ ವೆಬ್ ಸಿರೀಸ್ ಮೇಲೆ ಹೆಚ್ಚು ಗಮನ ಹರಿಸುತ್ತಿದ್ದಾರೆ.. ಕಳೆದ ವರ್ಷ ನಟಿ ಜೀ ಕರ್ದಾ ಹಾಗೂ ಲಸ್ಟ್ ಸ್ಟೋರಿಸ್ ಮುಂತಾದ ವೆಬ್ ಸರಣಿಗಳಲ್ಲಿ ಭರ್ಜರಿ ಬೋಲ್ಡ್ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದರು..
ಇನ್ನು ನಟ ವಿಜಯ್ ವರ್ಮಾ ಹಾಗೂ ನಟಿ ತಮನ್ನಾ ಇಬ್ಬರೂ ರಿಲೇಷನ್‌ಶಿಪ್‌ನಲ್ಲಿರುವುದು ಎಲ್ಲರಿಗೂ ಗೊತ್ತು.. ಲಸ್ಟ್ ಸ್ಟೋರಿಸ್ ವೆಬ್ ಸಿರೀಸ್‌ನಲ್ಲಿ ಜೋಡಿಯಾಗಿ ನಟಿಸಿದ್ದ ಈ ಜೋಡಿ ಪ್ರೀತಿಯಲ್ಲಿ ಬಿದ್ದಿದೆ..
ಇದನ್ನೂ ಓದಿ-ಇಂದಿನ ಕಥೆ ಹೇಳಲು ಬಂತು “ಎಂಥಾ ಕಥೆ ಮಾರಾಯ”
ಆರಂಭದಲ್ಲಿ ತಮನ್ನಾ ಮತ್ತು ವಿಜಯ್ ವರ್ಮಾ ತಮ್ಮ ಸಂಬಂಧದ ವದಂತಿಗಳನ್ನು ಇಗ್ನೋರ್ ಮಾಡಿದ್ದರು.. ಬಳಿಕ ಸ್ಪಷ್ಟನೆ ಸಿಕ್ಕಿತ್ತು.. ಹೌದು ನಾವಿಬ್ಬರೂ ಪ್ರೀತಿಸುತ್ತಿದ್ದೇವೆ ಎಂದು ಸ್ವತಃ ಅವರೇ ಒಪ್ಪಿಕೊಂಡಿದ್ದರು.. ತಮನ್ನಾ ಮತ್ತು ವಿಜಯ್ ವರ್ಮಾ ಈ ವರ್ಷ ವಿವಾಹವಾಗಲಿದ್ದಾರೆ ಎಂಬ ವರದಿಗಳು ಇದ್ದಾಗಲೇ ಆಘಾತಕಾರಿ ಸುದ್ದಿಯೊಂದು ಹೊರಬಿದ್ದಿದೆ. ತಮನ್ನಾ ಮದುವೆಗೂ ಮುನ್ನವೇ ತಾಯಿಯಾಗಲು ನಿರ್ಧರಿಸಿದ್ದು.. ಈಗಾಗಲೇ ಫ್ಯಾಮಿಲಿ ಪ್ಲ್ಯಾನಿಂಗ್ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ..
ಇತ್ತೀಚೆಗೆ ಮಾತನಾಡಿದ ತಮನ್ನಾ ಮದುವೆಯಾದ ಮೇಲೆ ಮಕ್ಕಳಾದರೇ ಜವಾಬ್ದಾರಿ ಜಾಸ್ತಿಯಾಗುತ್ತವೆ ಎಂದಿದ್ದಾರೆ.. ಈ ಬಗ್ಗೆ ವಿಜಯ್ ವರ್ಮಾ ಮತ್ತು ತಮನ್ನಾ ನಡುವಿನ ಒಪ್ಪಂದವೂ ಆಗಿದ್ದು ತಮನ್ನಾ ಮದುವೆಗೆ ಮುಂಚೆಯೇ ಗರ್ಭಿಣಿಯಾಗುತ್ತಾರೆ ಎಂದು ಬಾಲಿವುಡ್ ಮಾಧ್ಯಮಗಳಲ್ಲಿ ವರದಿಯಾಗಿದೆ.
ಇತ್ತೀಚೆಗೆ ಈ ಸಂಸ್ಕೃತಿ ಹೆಚ್ಚಾಗಿದೆ. ಮದುವೆಗೂ ಮುನ್ನವೇ ನಟಿ ಆಲಿಯಾ ಭಟ್ ಗರ್ಭಿಣಿಯಾಗಿದ್ದರು. ಅದರಂತೆ ಗೋವಾ ಬ್ಯೂಟಿ ಇಲಿಯಾನಾ ಕೂಡ ಮದುವೆಗೂ ಮೊದಲೇ ತಾಯಿಯಾದರು. ಇದೀಗ ತಮನ್ನಾ ಕೂಡ ಅವರನ್ನು ಫಾಲೋ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ..
ಇದನ್ನೂ ಓದಿ-ಸೂಪರ್ ಸ್ಟಾರ್ ರಜನಿಕಾಂತ್ ಜೀವನದಲ್ಲಿ ʼಗುರು ರಾಯರʼ ಪವಾಡ..! ಆತ್ಮಹತ್ಯೆಗೆ ಯತ್ನಿಸಿದ್ದ ನಟ ಬದುಕ್ಕಿದ್ದೇಗೆ..?
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.