Akshay Kumar Wife Twinkle Khanna: ಈ ಖ್ಯಾತ ನಟಿಯ ಪೋಷಕರು ಇಬ್ಬರೂ ಸೂಪರ್ಸ್ಟಾರ್.. ಆದರೆ ಆಕೆಯ ಸಿನಿಮಾ ಕರಿಯರ್ ಫ್ಲಾಪ್ ಆಗಿತ್ತು..  ಸ್ಟಾರ್‌ ನಟನನ್ನು ಮದುವೆಯಾದ ನಂತರ ಸಂಪೂರ್ಣವಾಗಿ ಸಿನಿರಂಗದಿಂದ ಕಣ್ಮರೆಯಾದರು.. ಆಕೆ ಬೇರೆ ಯಾರೂ ಅಲ್ಲ ಬಾಲಿವುಡ್‌ ನಟ ಅಕ್ಷಯ್‌ ಕುಮಾರ್‌ ಪತ್ನಿ ಟ್ವಿಂಕಲ್ ಖನ್ನಾ..  


COMMERCIAL BREAK
SCROLL TO CONTINUE READING

ಟ್ವಿಂಕಲ್ ಖನ್ನಾ ಸೂಪರ್ ಸ್ಟಾರ್ ರಾಜೇಶ್ ಖನ್ನಾ ಅವರ ಪುತ್ರಿ. ಟ್ವಿಂಕಲ್ ತಾಯಿ ಡಿಂಪಲ್ ಕಪಾಡಿಯಾ ಕೂಡ ಸೂಪರ್ ಹಿಟ್ ನಟಿ... ಟ್ವಿಂಕಲ್ ಖನ್ನಾ ಕೂಡ ತನ್ನ ತಂದೆ ತಾಯಿಯಂತೆ ಸೂಪರ್ ಸ್ಟಾರ್ ಆಗುವ ಕನಸು ಕಂಡಿದ್ದಳು. ಆದರೆ ಅವರು ತನ್ನ ವೃತ್ತಿಜೀವನವನ್ನು ಪ್ರಾರಂಭಿಸಿದ ಕೆಲವೇ ವರ್ಷಗಳಲ್ಲಿ ಸೂಪರ್ ಫ್ಲಾಪ್ ನಟಿ ಎನಿಸಿಕೊಂಡರು.. 


ಇದನ್ನೂ ಓದಿ-ಭಾರತದ ಅತಿದೊಡ್ಡ ಫ್ಲಾಪ್ ಸಿನಿಮಾ ಯಾವುದು ಗೊತ್ತೆ..? ಸೋನು ನಿಗಮ್‌ ಈ ಚಿತ್ರದಲ್ಲಿದ್ದರು..


ಟ್ವಿಂಕಲ್ ಖನ್ನಾ 1995 ರಲ್ಲಿ ಬಾಬಿ ಡಿಯೋಲ್ ಜೊತೆ ಬರ್ಸಾತ್ ಚಿತ್ರದ ಮೂಲಕ ಪಾದಾರ್ಪಣೆ ಮಾಡಿದರು. ಇವರ ಮೊದಲ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಯಶಸ್ವಿಯಾಯಿತು. ಇದರ ನಂತರ.. ಆಕೆಗೆ ಸಾಲು ಸಾಲು ಆಫರ್‌ಗಳು ಬಂದವು. ಬರ್ಸಾತ್ ನಂತರ, ಟ್ವಿಂಕಲ್ ಖನ್ನಾ 'ಜಾನ್ʼ ಸಿನಿಮಾ ಮಾಡಿದರು.  


ಇದನ್ನೂ ಓದಿ-Ram Charan : ಪಾಕಿಸ್ತಾನದಲ್ಲಿ ರಾಮ್‌ ಚರಣ್‌ ಬಗ್ಗೆ ಹೆಚ್ಚುತ್ತಿದೆ ಚರ್ಚೆ..! ವಿಡಿಯೋ ವೈರಲ್ 


ಆದರೆ ಇದಾದ ನಂತರ ಟ್ವಿಂಕಲ್ ಅದೃಷ್ಟ ತಿರುವು ಪಡೆಯಿತು. 1996 ರಲ್ಲಿ, ಅವರ ಚಿತ್ರ ದಿಲ್ ತೇರಾ ದೀವಾನಾ ಗಲ್ಲಾಪೆಟ್ಟಿಗೆಯಲ್ಲಿ ಯಶಸ್ಸು ಗಳಿಸಲಿಲ್ಲ.. ಇದರ ನಂತರ, ಟ್ವಿಂಕಲ್ ನಟಿಸಿದ ಚಿತ್ರಗಳೆಲ್ಲ ಪ್ಲಾಪ್‌ ಆದವು..    ಹೀಗಾಗಿ ಟ್ವಿಂಕಲ್ ಖನ್ನಾಗೆ ಸೂಪರ್ ಫ್ಲಾಪ್ ನಾಯಕಿ ಎಂಬ ಟ್ಯಾಗ್ ಕೂಡ ಸಿಕ್ಕಿದೆ. ಮುಂದೆ ನಟಿ ಬಾಲಿವುಡ್ ಗೆ ಶಾಶ್ವತವಾಗಿ ವಿದಾಯ ಹೇಳಿದರು.


ಟ್ವಿಂಕಲ್ ಖನ್ನಾ 17 ಜನವರಿ 2001 ರಂದು ಅಕ್ಷಯ್ ಕುಮಾರ್ ಅವರನ್ನು ವಿವಾಹವಾದರು. ನಂತರ ನಟಿ ಬಾಲಿವುಡ್‌ಗೆ ಹಿಂತಿರುಗಿ ನೋಡಲೇ ಇಲ್ಲ. ಟ್ವಿಂಕಲ್ ಖನ್ನಾ ಈಗ ಬರಹಗಾರರಾಗಿದ್ದಾರೆ ಮತ್ತು ಅವರ ಪುಸ್ತಕಗಳು ಸಹ ಪ್ರಕಟವಾಗಿವೆ.  


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.