Bhairathi Rangal Cinema Rights: ಹ್ಯಾಟ್ರಿಕ್ ಹೀರೊ ಶಿವರಾಜಕುಮಾರ್ ಅವರ ‘ಭೈರತಿ ರಣಗಲ್’ ಚಿತ್ರ ಭರ್ಜರಿಯಾಗಿ ಹಿಟ್ ಆಗಿದೆ. ಕರ್ನಾಟಕದಲ್ಲಿ ಮಾತ್ರವಲ್ಲದೆ ತಮಿಳುನಾಡಿನಲ್ಲೂ ಸೈ ಎನಿಸಿಕೊಂಡಿದೆ. ಇದೀಗ ಬಾಲಿವುಡ್ ನಿಂದಲೂ ಬೇಡಿಕೆ ಬರುತ್ತಿದೆ ಎಂದು ತಿಳಿದುಬಂದಿದೆ. ಸದ್ಯದ ಮಾಹಿತಿಗಳ ಪ್ರಕಾರ ಬಾಲಿವುಡ್ ನ ಖ್ಯಾತ ನಟ ರಣಬೀರ್ ಕಪೂರ್ ‘‘ಭೈರತಿ ರಣಗಲ್’ ಚಿತ್ರದ ಹಕ್ಕುಗಳ ಖರೀದಿಗೆ ತುದಿಗಾಲಲ್ಲಿ ನಿಂತಿದ್ದಾರಂತೆ.


COMMERCIAL BREAK
SCROLL TO CONTINUE READING

ಶಿವರಾಜಕುಮಾರ್ ‘ಭೈರತಿ ರಣಗಲ್’ ಮೂಲಕ ಮತ್ತೊಮ್ಮೆ ಸಂಪೂರ್ಣವಾದ ಆ್ಯಕ್ಷನ್ ಸಿನಿಮಾ ನೀಡಿದ್ದಾರೆ. ಶಿವಣ್ಣ ಅವರ ಅಭಿಮಾನಿಗಳಂತೂ ‘ಭೈರತಿ ರಣಗಲ್’ ಚಿತ್ರಕ್ಕೆ ನೂರಕ್ಕೆ ನೂರು ಮಾರ್ಕ್ಸ್ ಕೊಟ್ಟಿದ್ದಾರೆ. ಚಿತ್ರದ ನಿರ್ದೇಶಕ ನರ್ತನ್ ಬಗ್ಗೆಯೂ ಅಪಾರವಾದ ಮೆಚ್ಚುಗೆ ವ್ಯಕ್ತವಾಗಿದೆ. ಸಿನಿಮಾ ಕರ್ನಾಟಕದ ಹೊರೆಗೂ ದೊಡ್ಡ ಮಟ್ಟದ ಸದ್ದು ಮಾಡುತ್ತಿದ್ದು ಇದೀಗ ಬಾಲಿವುಡ್ ನಿಂದಲೂ ಬೇಡಿಕೆ ಬಂದಿದೆ. 


ಇದನ್ನೂ ಓದಿ- ‘ಲಕ್ಷ್ಮೀ ನಿವಾಸ’ದ ಜಾಹ್ನವಿಗೆ ಕೂಡಿಬಂತು ಕಂಕಣಭಾಗ್ಯ; ಚಂದನಾ ಮತ್ತು ಭಾವಿ ಪತಿಯ ಕ್ವಾಲಿಫಿಕೇಷನ್ ಏನು?


ಗಾಂಧಿ ನಗರದ ಮೂಲಗಳ ಪ್ರಕಾರ, ಹಿಂದಿ ಚಿತ್ರರಂಗದ ಖ್ಯಾತ ನಟ ರಣಬೀರ್ ಕಪೂರ್ ‘ಭೈರತಿ ರಣಗಲ್’ ಸಿನಿಮಾ ನೋಡಿ ಫಿದಾ ಆಗಿದ್ದಾರಂತೆ. ಮೆಚ್ಚುಕೊಂಡಿರುವುದಷ್ಟೇಯಲ್ಲ, ‘ಭೈರತಿ ರಣಗಲ್’ ಹಕ್ಕುಗಳ ಖರೀದಿಗೂ ಅವರು ಮನಸ್ಸು ಮಾಡಿದ್ದಾರೆ. ಈಗಾಗಲೇ ಮಾತುಕತೆಗಳು ಆರಂಭವಾಗಿವೆ ಎಂದು ಹೇಳಲಾಗುತ್ತಿದೆ. 


ರಣಬೀರ್ ಕಪೂರ್ ಭೈರತಿ ರಣಗಲ್ ಸಿನಿಮಾದ ಹಕ್ಕುಗಳ ಖರೀದಿಗೆ ಉತ್ಸುಕರಾಗಿದ್ದಾರೆ, ಪ್ರಯತ್ನಿಸುತ್ತಿದ್ದಾರೆ’ ಎನ್ನುವ ಸುದ್ದಿಯೇನೋ ಜೋರಾಗಿ ಹರಿದಾಡುತ್ತಿದೆ. ಆದರೆ ‘ಭೈರತಿ ರಣಗಲ್’ ಹಿಂದಿಗೆ ಡಬ್ ಆಗುತ್ತೋ ಅಥವಾ ರಣಬೀರ್ ಕಪೂರ್ ನಾಯಕತ್ವದಲ್ಲಿ ರಿಮೇಕ್ ಆಗುತ್ತೋ ಎನ್ನುವ ಬಗ್ಗೆ ಮಾತ್ರ ಇನ್ನೂ ಯಾವುದೇ ಮಾಹಿತಿಗಳು ತಿಳಿದುಬಂದಿಲ್ಲ.


ಇದನ್ನೂ ಓದಿ- ಪುತ್ರಿ ಆರಾಧ್ಯಳೇ ಸ್ಫೂರ್ತಿ, ಧೈರ್ಯ: ಐಶ್ವರ್ಯ ರೈ ಜೊತೆಗಿನ ಡಿವೋರ್ಸ್ ವದಂತಿ ನಡುವೆ ಅಭಿಷೇಕ್ ಬಚ್ಚನ್ ಹೇಳಿಕೆ ವೈರಲ್


ಒಂದೊಮ್ಮೆ ಈಗಿರುವ ಸುದ್ದಿಯ ಪ್ರಕಾರ ‘ಭೈರತಿ ರಣಗಲ್’ ಹಿಂದಿಗೆ ರಿಮೇಕ್ ಆದರೆ ಅದು ಅಪರೂಪದ ಬೆಳವಣಿಗೆಯಾಗಲಿದೆ. ಪಾನ್ ಇಂಡಿಯಾ ಸಿನಿಮಾಗಳ ಕಾಲದಲ್ಲಿ ಕನ್ನಡದ ಚಿತ್ರ ಹಿಂದಿಗೆ ರಿಮೇಕ್ ಆದಂತಾಗುತ್ತದೆ. ಬರೀ ಡಬ್ ಆಗುತ್ತದೆ ಎಂದರೆ ಅದರಲ್ಲಿ ಅಷ್ಟೇನೂ ವಿಷೇಶತೆ ಇರುವುದಿಲ್ಲ.


ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ