ಜೀವನದಲ್ಲಿ ಯಾರಿಗೆ ಯಾವಾಗ "ಲಕ್" ಬರತ್ತೆ ಹೇಳಲಿಕ್ಕೆ ಆಗಲ್ಲ. ಕಳೆದ ಒಂಭತ್ತು ವರ್ಷಗಳಿಂದ ಕ್ಯಾರಾವ್ಯಾನ್ ಚಾಲಕನಾಗಿ ಕಾರ್ಯನಿರ್ವಹಿಸುತ್ತಿರುವ ಕ್ಯಾರಾವ್ಯಾನ್ ಸ್ಟಾರ್ ಸ್ಮೈಲ್ ಮಂಜು ಅವರು "ಲಕ್" ಚಿತ್ರದ ನಾಯಕನಾಗಿ ಅಭಿನಯಿಸಿದ್ದಾರೆ ಜೊತೆಗೆ ನಿರ್ಮಾಣವನ್ನು ಮಾಡಿದ್ದಾರೆ. ಇತ್ತೀಚೆಗೆ ಈ ಚಿತ್ರದ "90 ಕುಡಿ ಮಗ ಪಲ್ಟಿ ಹೊಡಿ" ಎಂಬ ಹಾಡಿನ ಲಿರಿಕಲ್ ವಿಡಿಯೋ ಬಿಡುಗಡೆಯಾಯಿತು. ಅಪ್ಪಿ ಹಾಗೂ ಹರೀಶ್ ಬರೆದಿರುವ ಈ ಹಾಡನ್ನು ನವೀನ್ ಸಜ್ಜು ಹಾಡಿದ್ದಾರೆ. ವಿಜಯ್ ಹರಿತ್ಸ ಸಂಗೀತ ನೀಡಿದ್ದಾರೆ. ಈ ಚಿತ್ರದ ಕುರಿತಾದ ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡದ ಸದಸ್ಯರು ಮಾಹಿತಿ ನೀಡಿದರು.


COMMERCIAL BREAK
SCROLL TO CONTINUE READING

ಇದನ್ನೂ ಓದಿ-ಮಧುಮೇಹಿಗಳಿಗೂ ಪಾರ್ಶ್ವವಾಯುವಾಗಬಹುದು ! ಈ ಲಕ್ಷಣಗಳಿದ್ದರೆ ಎಚ್ಚರವಿರಲಿ


ಚಿತ್ರಕ್ಕೆ ಮೊದಲೊಬ್ಬ ನಿರ್ದೇಶಕರಿದ್ದರು. ಹಾಗೆ ನಾಯಕರೂ ಬೇರೆಯೇ ಇದ್ದರು. ಅನಿವಾರ್ಯ ಕಾರಣದಿಂದ ಅವರು ಚಿತ್ರದಿಂದ ದೂರವಾದಾಗ ಈ ಚಿತ್ರಕ್ಕೆ ನಾನು ನಿರ್ದೇಶಕನಾದೆ. ಮಂಜು ನಾಯಕನಾದರು. ನನ್ನ ಜೀವದಲ್ಲೇ ನಡೆದಿರುವ  ಘಟನೆಯನ್ನು ಸಿನಿಮಾ ರೂಪದಲ್ಲಿ ಆಚೆ ತರುತ್ತಿದ್ದೇನೆ‌. ಈಗಾಗಲೇ ಬಹುತೇಕ ಚಿತ್ರೀಕರಣ ಮುಕ್ತಾಯವಾಗಿದೆ. ಡಾಲಿ ಧನಂಜಯ್ ಅವರು ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆ ಭಾಗದ ಚಿತ್ರೀಕರಣ ಮಾತ್ರ ಬಾಕಿಯಿದೆ. ಇದು ಒಂದು ದಿನ, ಅದರಲ್ಲೂ ಕೆಲವೇ ಗಂಟೆಗಳಲ್ಲಿ ನಡೆಯುವ ಕಥೆಯಾಗಿದೆ. ಪದ್ಮಜಾರಾವ್, ಕಡ್ಡಿಪುಡಿ ಚಂದ್ರು ಮುಂತಾದವರು ತಾರಾಬಳಗದಲ್ಲಿದ್ದಾರೆ.
 ಎಂದು ನಿರ್ದೇಶಕ ಹರೀಶ್ ಮಾಹಿತಿ ನೀಡಿದರು.


ಇದನ್ನೂ ಓದಿ-Sugar Patient ಗಳಿಗೆ ವರಕ್ಕೆ ಸಮಾನ ಈ ವಿಶಿಷ್ಠ ರೀತಿಯ ವೈಟ್ ರೈಸ್!


ನಾನು ಒಂಭತ್ತು ವರ್ಷಗಳಿಂದ ಕ್ಯಾರಾವ್ಯಾನ್ ಓಡುಸುತ್ತಿದ್ದೇನೆ. ಗೋಲ್ಡನ್ ಸ್ಟಾರ್ ಗಣೇಶ್, ಡಾಲಿ ಅವರ ಕ್ಯಾರಾವ್ಯಾನ್ ಗೆ ನಾನೇ ಚಾಲಕ. ಸಿನಿಮಾ ಮಾಡುವ ಆಸೆಯಿತ್ತು. ದುಡಿದ ಹಣ ಹಾಗೂ ಜಮೀನು ಮಾರಿದ ಹಣ ಎರಡೂ ಸೇರಿಸಿ ಈ ಚಿತ್ರ ನಿರ್ಮಾಣ ಮಾಡಿದ್ದೇನೆ ಜೊತೆಗೆ ನಾಯಕನಾಗೂ ಅಭಿನಯಿಸಿದ್ದೇನೆ. ನನ್ನ ಮೇಲೆ ಪ್ರೀತಿಯಿಟ್ಟು ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಅವರು ಸೇರಿದಂತೆ ಚಿತ್ರರಂಗದ ಅನೇಕ ನಾಯಕರು ಪೋಸ್ಟರ್ ಬಿಡುಗಡೆ ಮಾಡಿ ಶುಭ ಕೋರಿದ್ದಾರೆ‌. ಚಿತ್ರತಂಡದ ಸಹಕಾರಕ್ಕೆ ಧನ್ಯವಾದ ಎಂದರು ನಾಯಕ ಹಾಗೂ ನಿರ್ಮಾಪಕ ಕ್ಯಾರಾವ್ಯಾನ್ ಸ್ಟಾರ್ ಸ್ಮೈಲ್ ಮಂಜು.


ಚಿತ್ರದ ಪ್ರಮುಖಪಾತ್ರದಲ್ಲಿ ನಟಿಸಿರುವ ರೇಣು ಹಾಡು ಬರೆದಿರು ಅಪ್ಪಿ ಹಾಗೂ ಸಂಗೀತ ನಿರ್ದೇಶಕ ವಿಜಯ್ ಹರಿತ್ಸ ಚಿತ್ರದ ಕುರಿತು ಮಾತನಾಡಿದರು.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.