CCL Season 10 updates : ಭಾರತದ ಜನಪ್ರಿಯ ಒಟಿಟಿ ವೇದಿಕೆಯಗಿರುವ ಜಿಯೊಸಿನಿಮಾ, ಸೆಲೆಬ್ರಿಟಿ ಕ್ರಿಕೆಟ್‌ ಲೀಗ್‌ (ಸಿಸಿಎಲ್‌) ಜೊತೆಗೆ ಸಹಭಾಗಿತ್ವವನ್ನು ಘೋಷಿಸಿದೆ. ಇದರ ಭಾಗವವಾಗಿ, ಸೆಲೆಬ್ರಿಟಿ ಕ್ರಿಕೆಟ್‌ ಲೀಗ್‌ನ ಹತ್ತನೇ ಸೀಸನ್‌ ಅನ್ನು ಜಿಯೊಸಿನಿಮಾ ಎಕ್ಸ್‌ಕ್ಲ್ಯೂಸಿವ್ ಆಗಿ ನೇರಪ್ರಸಾರ ಮಾಡಲಿದೆ. ಕ್ರಿಡೆ ಮತ್ತು ಮನರಂಜನೆಗಳನ್ನು ಒಂದುಗೂಡಿಸಿ ಭಾರತದಲ್ಲಿ ರೂಪಿಸಿರುವ ಏಕಮಾತ್ರ ಪ್ರಯತ್ನ ಸೆಲೆಬ್ರಿಟಿ ಕ್ರಿಕೆಟ್ ಲೀಗ್‌ ಇದಾಗಿದೆ.


COMMERCIAL BREAK
SCROLL TO CONTINUE READING

ನಾಲ್ಕು ವಾರಾಂತ್ಯಗಳಲ್ಲಿ ನಡೆಯಲಿರುವ ಸಿಸಿಎಲ್‌ 10ನೇ ಸೀಸನ್‌ನಲ್ಲಿ ಒಟ್ಟೂ 20 ರೋಚಕ ಪಂದ್ಯಗಳು ನಡೆಯಲಿವೆ. ಕ್ರಿಕೆಟ್‌ ಅಭಿಮಾನಿಗಳಷ್ಟೇ ಅಲ್ಲದೆ, ಸಿನಿಮಾಪ್ರೇಮಿಗಳೂ ಕುತೂಹಲದಿಂದ ವೀಕ್ಷಿಸುವ ಈ ಕ್ರಿಕೆಟ್‌ ಲೀಗ್‌ ಅನ್ನು ವ್ಯಾಪಕವಾದ ಪ್ರೇಕ್ಷವರ್ಗಕ್ಕೆ ನೇರವಾಗಿ ತಲುಪಿಸಲು ಜಿಯೊಸಿನಿಮಾ ಮುಂದಾಗಿದೆ. ಇದೇ ಫೆಬ್ರುವರಿ 23ರಿಂದ ಎಕ್ಸ್‌ಕ್ಲ್ಯೂಸೀವ್ ಆಗಿ ಜಿಯೊಸಿನಿಮಾದಲ್ಲಿ ಸಿಸಿಎಲ್‌ ಪಂದ್ಯಗಳು ನೇರಪ್ರಸಾರವಾಗಲಿವೆ.


ಇದನ್ನೂ ಓದಿ:ಮಸೀದಿ ಅಗೆದರೆ ದೇವಸ್ಥಾನ.. ದೇಗುಲ ಅಗೆದರೆ..! ಪ್ರಕಾಶ್‌ ರಾಜ್‌ ಹೇಳಿಕೆ ವೈರಲ್‌


ಸೆಲೆಬ್ರಿಟಿ ಕ್ರಿಕೆಟ್ ಲೀಗ್‌ ಪ್ರಾರಂಭವಾಗಿದ್ದು 2011ರಲ್ಲಿ. ನಂತರದ ದಿನಗಳಲ್ಲಿ ಜನಪ್ರಿಯತೆಯನ್ನು ಹೆಚ್ಚಿಸಿಕೊಳ್ಳುತ್ತಲೇ ಬಂದಿರುವ ಸಿಸಿಎಲ್, ಇಂದು ಭಾರತದಲ್ಲಿ ಅತ್ಯಂತ ಹೆಚ್ಚು ಜನ ವೀಕ್ಷಕರನ್ನು ಹೊಂದಿರುವ ಕ್ರೀಡಾ-ಮನರಂಜನೆಯ ಇವೆಂಟ್ ಆಗಿ ಹೊರಹೊಮ್ಮಿದೆ. ಟೀವಿ ಮತ್ತು ಡಿಜಿಟಲ್‌ ಮಾಧ್ಯಮದ ಮೂಲಕ ಪ್ರಸಾರವಾಗಿದ್ದಕಳೆದ ವರ್ಷದ ಸಿಸಿಎಲ್‌ ಅನ್ನು, ದೇಶದಾದ್ಯಂತ 250 ಮಿಲಿಯನ್‌ಗೂ ಅಧಿಕ ಜನರು ವೀಕ್ಷಿಸಿದ್ದರು. 


ಯಾವ್ಯಾವ ತಂಡಗಳು?: ಭಾರತದ ಎಂಟು ಮುಖ್ಯ ಚಿತ್ರರಂಗವನ್ನು ಪ್ರತಿನಿಧಿಸುವ ತಂಡಗಳು ಈ ಬಾರಿಯ ಸಿಸಿಎಲ್‌ನಲ್ಲಿ ಭಾಗವಹಿಸುತ್ತಿವೆ. ಹಿಂದಿ, ಕನ್ನಡ, ತಮಿಳು, ತೆಲುಗು, ಮಲಯಾಳಂ, ಭೋಜಪುರಿ ಮತ್ತು ಪಂಜಾಬ್‌ ತಂಡಗಳು ಸೆಲೆಬ್ರಿಟಿ ಕ್ರಿಕೆಟ್‌ ಲೀಗ್‌ನಲ್ಲಿ ಭಾಗವಹಿಸುತ್ತಿವೆ. ಸಿಸಿಎಲ್‌ ಸೀಸನ್‌ 10ನಲ್ಲಿ ಬೇರೆ ಬೇರೆ ಚಿತ್ರರಂಗಗಳ ಇನ್ನೂರಕ್ಕೂ ಅಧಿಕ ಜನಪ್ರಿಯ ತಾರೆಗಳು, ಗಣ್ಯರು ಜೊತೆಯಾಗಿ, ಪ್ರೇಕ್ಷಕರಿಗೆ ಊಹಿಸಲಸಾಧ್ಯ ಮನರಂಜನೆಯ ರಸದೂಟವನ್ನು ಉಣಿಸಲಿದ್ದಾರೆ. 


ಇದನ್ನೂ ಓದಿ:ಖ್ಯಾತ ಬಾಲಿವುಡ್‌ ನಟಿ ಪೂನಂ ಪಾಂಡೆ ಹಠಾತ್ ನಿಧನ..!


ಯಾವ ತಂಡಕ್ಕೆ ಯಾರು ನಾಯಕರು?: ಸೆಲೆಬ್ರಿಟಿ ಕ್ರಿಕೆಟ್‌ ಲೀಗ್‌ನ ಮುಂಬೈ ಹೀರೋಸ್ ತಂಡಕ್ಕೆ ಸಲ್ಮಾನ್‌ ಖಾನ್‌ ಬ್ರಾಂಡ್ ಅಂಬಾಸಿಡರ್‍ ಆಗಿದ್ದಾರೆ. ರಿತೇಶ್‌ ದೇಶಮುಖ್ ಈ ತಂಡದ ನಾಯಕ. ಸೋಹೈಲ್ ಖಾನ್, ಮುಂಬೈ ಹೀರೊಸ್ ತಂಡದ ಮಾಲೀಕರಾಗಿದ್ದಾರೆ. ‘ತೆಲುಗು ವಾರಿಯರ್ಸ್‌’ ತಂಡಕ್ಕೆ ವೆಂಕಟೇಶ್‌ ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ. ಅಖಿಲ್ ಅಕ್ಕಿನೇನಿ ‘ತೆಲುಗು ವಾರಿಯರ್ಸ್‌’ ತಂಡದ ನಾಯಕ. ‘ಕರ್ನಾಟಕ ಬುಲ್ಡೋಜರ್ಸ್‌’ ತಂಡಕ್ಕೆ ಕಿಚ್ಚ ಸುದೀಪ್‌ ನಾಯಕನಾಗಿದ್ದಾರೆ. ಬಿಗ್‌ಬಾಸ್‌ ಕನ್ನಡ ಸೀಸನ್‌ 10 ಅನ್ನು ಈಗಷ್ಟೇ ಮುಗಿಸಿರುವ ಸುದೀಪ್‌, ಮತ್ತೊಮ್ಮೆ ಸಿಸಿಎಲ್‌ 10 ಮೂಲಕ ಜಿಯೊಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮೋಹನ್‌ಲಾಲ್‌ ಸಹಮಾಲೀಕರಾಗಿರುವ ‘ಕೇರಳ ಸ್ಟ್ರೈಕರ್ಸ್‌’ ತಂಡಕ್ಕೆ ಇಂದ್ರಜಿತ್ ನಾಯಕರಾಗಿದ್ದಾರೆ. ‘ಭೋಜಪುರಿ ದಬಾಂಗ್ಸ್‌’ ತಂಡಕ್ಕೆ ಮನೋಜ್‌ ತಿವಾರಿ ನಾಯಕರಾಗಿದ್ದಾರೆ. ‘ಪಂಜಾಬ್‌ ದೆ ಶೇರ್’ ತಂಡಕ್ಕೆ ಸೋನು ಸೂದ್‌ ನಾಯಕರಾಗಿದ್ದಾರೆ. ಬೋನಿ ಕಪೂರ್ ಮಾಲೀಕರಾಗಿರುವ ‘ಬೆಂಗಾಲ್ ಟೈಗರ್ಸ್‌’ ತಂಡಕ್ಕೆ ಜಿಸ್ಸು ಸೆನ್‌ಗುಪ್ತ ನಾಯಕರಾಗಿದ್ದಾರೆ. 


ಸಿಸಿಎಲ್‌ ಜೊತೆಗಿನ ಸಹಭಾಗಿತ್ವದ ಬಗ್ಗೆ ಪ್ರತಿಕ್ರಿಯಿಸಿರುವ ಜಿಯೊಸಿನಿಮಾದ ಬ್ಯುಸಿನೆಸ್‌ ಹೆಡ್‌ ಫರ್ಜಾದ್ ಪಾಲಿಯಾ, ‘ಜಿಯೊಸಿನಿಮಾ ವೇದಿಕೆಗೆ ಎಲ್ಲೆಡೆಯಿಂದ ಅದ್ಭುತವಾದ ಮೆಚ್ಚುಗೆ ದೊರಕುತ್ತಿದ್ದು, ಕ್ರಿಡೆ ಮತ್ತು ಮನರಂಜನೆಗೆ ಬೇರೆಲ್ಲೂ ಸಿಗದ ಅದ್ಭುತ ಪ್ರತಿಕ್ರಿಯೆ ಜಿಯೊಸಿನಿಮಾಗೆ ದೊರಕುತ್ತಿದೆ. ನಮಗೆ ಸಿಗುತ್ತಿರುವ  ಅಪ್ರತಿಮವಾದ ವ್ಯೂವರ್‍ಷಿಪ್‌ ಅದಕ್ಕೆ ಪುರಾವೆಯಾಗಿದೆ. ಸೆಲೆಬ್ರಿಟಿ ಕ್ರಿಕೆಟ್‌ ಲೀಗ್‌ ಎಂಬುದು ಕ್ರಿಡೆ ಮತ್ತು ಮನರಂಜನೆ ಎರಡೂ ಜಗತ್ತುಗಳನ್ನು ಒಂದೆಡೆ ಸೇರಿಸುತ್ತಿದ್ದು, ಇಂಡಿಯಾವನ್ನು ರಂಜಿಸುವ ಉದ್ದೆಶದಿಂದ ಸಿಸಿಎಲ್‌ ಜೊತೆಗೆ ಕೈಜೋಡಿಸುತ್ತಿರುವುದು ನಮಗೆ ಅತ್ಯಂತ ಸಂತೋಷದ ಸಂಗತಿಯಾಗಿದೆ’ ಎಂದು ಹೇಳಿದ್ದಾರೆ.


ಇದನ್ನೂ ಓದಿ:'ಅಪ್ಪಾ ಐ ಲವ್ ಯುʼ ಚಿತ್ರದ ಮೆಲೋಡಿ ಹಾಡು ಔಟ್‌ : ಪ್ರೇಮ್‌ಗೆ ಯಂಗ್ ರೆಬಲ್ ಸ್ಟಾರ್ ಸಾಥ್


ಸೆಲೆಬ್ರಿಟಿ ಕ್ರಿಕೆಟ್ ಲೀಗ್‌ನ (ಸಿಸಿಎಲ್) ಸಂಸ್ಥಾಪಕರಾದ ವಿಷ್ಣು ಇಂದುರಿ ಕೂಡ ಈ ಸಹಭಾಗಿತ್ವದ ಬಗ್ಗೆ ಉತ್ಸಾಹದ ಮಾತುಗಳಾಡಿದ್ದಾರೆ. ‘ಸೆಲೆಬ್ರಿಟಿ ಕ್ರಿಕೆಟ್‌ ಲೀಗ್, ಸಂಸ್ಕೃತಿಕ ಹೆಗ್ಗುರುತಾಗಿ ಹೊರಹೊಮ್ಮುತ್ತಿದೆ. ಇದರ ಹತ್ತನೇ ಸೀಸನ್‌ ಅನ್ನು ಇನ್ನಷ್ಟು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಜಿಯೊಸಿನಿಮಾ ಜೊತೆಗೆ ಕೈಜೋಡಿಸಿರುವುದು ನಿಜಕ್ಕೂ ನಮಗೆ ಸಂತೋಷದ ಸಂಗತಿ. ಕ್ರೀಡೆ ಮತ್ತು ಮನರಂಜನೆಯ ಈ ಸಂಯೋಜನೆಯ ಸಿಸಿಎಲ್‌ ಮೂಲಕ ದೇಶದಾದ್ಯಂತ ಅಭಿಮಾನಿಗಳ ಮನಸೂರೆಗೊಳ್ಳಲು ನಾವು ಕಾಯುತ್ತಿದ್ದೇವೆ’ ಎಂದು ಅವರು ಹೇಳಿದ್ದಾರೆ. 


ಕ್ರೀಡೆ ಮತ್ತು ಮನರಂಜನೆಯ ಅಪರೂಪದ ಸಂಯೋಜನೆಯಾಗಿರುವ ಸೆಲೆಬ್ರಿಟಿ ಕ್ರಿಕೆಟ್‌ ಲೀಗ್‌ನ (ಸಿಸಿಎಲ್) 10ನೇ ಸೀಸನ್‌ ಅನ್ನು ಫೆಬ್ರುವರಿ 23ರಿಂದ ಜಿಯೊಸಿನಿಮಾದಲ್ಲಿ ವೀಕ್ಷಿಸಿ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.