CCL 2023 : ಮುಂದಿನ ತಿಂಗಳು ಫೆಬ್ರವರಿ 18 ರಂದು ಸೆಲೆಬ್ರಿಟಿ ಕ್ರಿಕೆಟ್ ಲೀಗ್‌ (CCL) ಪ್ರಾರಂಭವಾಗಲಿದೆ. ಈ ವರ್ಷದ ಪಂದ್ಯಾವಳಿಯಲ್ಲಿ ಒಟ್ಟು 8 ತಂಡಗಳು ಭಾಗವಹಿಸಲಿವೆ. ಸೆಮಿಫೈನಲ್‌ಗೆ ನಾಲ್ಕು ತಂಡಗಳು ಅರ್ಹತೆ ಪಡೆಯುವ ಮೊದಲು 8 ತಂಡಗಳು ಮುಖಾಮುಖಿಯಾಗಲಿವೆ. ಒಟ್ಟು 16 ಪಂದ್ಯಗಳನ್ನು ಆಡಲಾಗುತ್ತದೆ. ಟೂರ್ನಿಯ ಅಂತಿಮ ಪಂದ್ಯ ಮಾರ್ಚ್ 19 ರಂದು ಹೈದರಾಬಾದ್‌ನಲ್ಲಿ ನಡೆಯಲಿದೆ.


COMMERCIAL BREAK
SCROLL TO CONTINUE READING

ಪಾರ್ಲೆ ಬಿಸ್ಕೆಟ್ಸ್ ಲೀಗ್‌ನ ಶೀರ್ಷಿಕೆ ಪ್ರಾಯೋಜಕರಾಗಿ ಒಪ್ಪಂದಕ್ಕೆ ಸಹಿ ಹಾಕಿದೆ. ಸಲ್ಮಾನ್ ಖಾನ್ ಮುಂಬೈ ತಂಡದ ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ. ತೆಲುಗು ತಂಡದ ಮೆಂಟರ್ ಆಗಿ ವೆಂಕಟೇಶ್, ಬಂಗಾಳ ತಂಡದ ಮಾಲೀಕ ಬೋನಿ ಕಪೂರ್ ಮತ್ತು ಮುಂಬೈ ತಂಡದ ಮಾಲೀಕ ಸೊಹೈಲ್ ಖಾನ್ ಆಗಿರುವುದರಿಂದ ಸಿಸಿಎಲ್ ಅಕ್ಷರಶಃ ಸ್ಟಾರ್ ಪಟ್ಟ ಅಲಂಕರಿಸಲಿದೆ. ಅಲ್ಲದೆ, ʼಕರ್ನಾಟಕ ಬುಲ್ಡೋಜರ್ಸ್ʼ ತಂಡದ ನಾಯಕತ್ವವನ್ನು ಕಿಚ್ಚ ಸುದೀಪ್ ಅವರು ವಹಿಸಿಕೊಂಡಿದ್ದಾರೆ, ಶ್ರೀ ಅಶೋಕ್ ಖೇಣಿಯವರ ಒಡೆತನದಲ್ಲಿದೆ ಹಾಗೂ ಶರ್ಮಿಳಾ ಮಾಂಡ್ರೆ, ಪಾರ್ವತಿ ನಾಯರ್ ಬ್ರಾಂಡ್ ಅಂಬಾಸಿಡರ್ಸ್ ಆಗಿದ್ದಾರೆ.


ತಂಡ ಮತ್ತು ನಾಯಕರ ಹೆಸರುಗಳು


  • ಬೆಂಗಾಲ್ ಟೈಗರ್ಸ್- ಜಿಶು ಸೆಂಗುಪ್ತ

  • ಮುಂಬೈ ಹೀರೋಸ್- ರಿತೇಶ್ ದೇಶಮುಖ್

  • ಪಂಜಾಬ್ ಡಿ ಶೇರ್- ಸೋನು ಸೂದ್

  • ಕರ್ನಾಟಕ ಬುಲ್ಡೋಜರ್ಸ್- ಕಿಚ್ಚ ಸುದೀಪ್

  • ಭೋಜ್‌ಪುರಿ ದಬಾಂಗ್ಸ್- ಮನೋಜ್ ತಿವಾರಿ

  • ತೆಲುಗು ವಾರಿಯರ್ಸ್- ಅಖಿಲ್ ಅಕ್ಕಿನೇನಿ

  • ಕೇರಳ ಸ್ಟ್ರೈಕರ್ಸ್- ಕುಂಚಾಕೊ ಬೋಬನ್

  • ಚೆನ್ನೈ ರೈನೋಸ್- ಆರ್ಯ.


ʼಕರ್ನಾಟಕ ಬುಲ್ಡೋಜರ್ಸ್ʼ ತಂಡ


  • ನಾಯಕ - ಸುದೀಪ್ (ಆಲ್ ರೌಂಡರ್)

  • ಧ್ರುವ್ - ಆಲ್ ರೌಂಡರ್

  • ರಾಜೀವ್ - ಆಲ್ ರೌಂಡರ್

  • ತರುಣ್ ಚಂದ್ರ - ಆಲ್ ರೌಂಡರ್

  • ತರುಣ್ ಸುಧೀರ್ - ಆಲ್ ರೌಂಡರ್

  • ವಿಶ್ವಾಸ್ - ಆಲ್ ರೌಂಡರ್

  • ಪ್ರದೀಪ್ - ಆಲ್ ರೌಂಡರ್

  • ರಾಹುಲ್ - ಆಲ್ ರೌಂಡರ್

  • ಚೇತನ್ - ಆಲ್ ರೌಂಡರ್

  • ಧರ್ಮ - ಬ್ಯಾಟ್ಸ್‌ಮನ್

  • ಸುನಿಲ್ ರಾವ್ - ಆಲ್ ರೌಂಡರ್

  • ಜಯರಾಮ್ ಕಾರ್ತಿಕ್ - ಆಲ್ ರೌಂಡರ್

  • ಮಹೇಶ್ - ಆಲ್ ರೌಂಡರ್

  • ರಾಜೇಶ್ - ಆಲ್ ರೌಂಡರ್

  • ಮಯೂರ್ ಪಟೇಲ್ - ಆಲ್ ರೌಂಡರ್

  • ಪ್ರಸನ್ನ - ಆಲ್ ರೌಂಡರ್

  • ಪ್ರತಾಪ್ - ಆಲ್ ರೌಂಡರ್


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.