Jawan : ಶಾರುಖ್ ಖಾನ್ ಅಭಿನಯದ ಅಟ್ಲಿ ನಿರ್ದೇಶನದಡಿಯಲ್ಲಿ ಮೂಡಿಬರುತ್ತಿರುವ ಜವಾನ್ ಚಿತ್ರದ ಸೆನ್ಸಾರ್ ಪೂರ್ಣಗೊಂಡಿದೆ. ಚಿತ್ರಕ್ಕೆ ಸೆನ್ಸಾರ್ ಮಂಡಳಿ ಯು/ಎ ಪ್ರಮಾಣ ಪತ್ರ ನೀಡಿದೆ. ಚಿತ್ರ ಸೆಪ್ಟೆಂಬರ್ 7 ರಂದು ಥಿಯೇಟರ್‌ಗೆ ಬರಲಿದೆ. ಯು/ಎ ಪ್ರಮಾಣ ಪತ್ರ ನೀಡಿರುವ ಸೆನ್ಸಾರ್ ಮಂಡಳಿ ಏಳು ಬದಲಾವಣೆಗಳನ್ನು ಸೂಚಿಸಿದೆ. ವರದಿಗಳ ಪ್ರಕಾರ, ಚಿತ್ರದ ಅವಧಿ 2 ಗಂಟೆ 49 ನಿಮಿಷಗಳಾಗಿವೆ. 


COMMERCIAL BREAK
SCROLL TO CONTINUE READING

ಕೆಲವು ಆತ್ಮಹತ್ಯೆಯ ದೃಶ್ಯಗಳಲ್ಲಿ ಬದಲಾವಣೆ ಮಾಡುವಂತೆ ಸೆನ್ಸಾರ್ ಮಂಡಳಿ ಸೂಚಿಸಿದೆ. ಇನ್ನೊಂದು ಗ್ರಾಫಿಕ್ಸ್ ಮೂಲಕ ತೋರಿಸಿರುವ ದೇಹದ ದೃಶ್ಯಗಳನ್ನು ಬದಲಾಯಿಸಲು ಸಹ ಸೂಚಿಸಲಾಗಿದೆ. ಜೊತೆಗೆ ಮುಖ್ಯ ಪಾತ್ರಗಳ ಕೆಲವು ಸಂಭಾಷಣೆಗಳಲ್ಲಿಯೂ ಸೆನ್ಸಾರ್‌ ಬದಲಾವಣೆಯನ್ನು ಸೂಚಿಸಿದೆ. 


ಈಗಾಗಲೇ ಅಮೆರಿಕದಲ್ಲಿ ಜವಾನ್ ಮುಂಗಡ ಬುಕ್ಕಿಂಗ್ ಆರಂಭವಾಗಿದೆ ಎಂದು ವರದಿಯಾಗಿದೆ. $151,000 ಮೌಲ್ಯದ 9,700 ಟಿಕೆಟ್‌ಗಳನ್ನು ಈಗಾಗಲೇ 367 ಸ್ಥಳಗಳಿಂದ ಮಾರಾಟ ಮಾಡಲಾಗಿದೆ. ಚಿತ್ರದ ಬಿಡುಗಡೆಗೂ ಮುನ್ನ ಪ್ರದರ್ಶನದ ಸ್ಥಳಗಳು ಮತ್ತು ಪ್ರದರ್ಶನಗಳ ಸಂಖ್ಯೆಯನ್ನು ಹೆಚ್ಚಿಸಲಾಗುವುದು.


ಇದನ್ನೂ ಓದಿ- Namratha Gowda : ಕೆಂಪು ಸೀರೆಯಲ್ಲಿ ಮಿಂಚಿದ ಕಿರುತೆರೆ ಸುಂದರಿ..ಪೋಟೋಸ್‌ ನೋಡಿ


ಇನ್ನು ಈ ಚಿತ್ರದಲ್ಲಿ ಶಾರುಖ್ ಖಾನ್ ಜೊತೆಗೆ ದೀಪಿಕಾ ಪಡುಕೋಣೆ, ಸನ್ಯಾ ಮಲ್ಹೋತ್ರಾ, ನಯನತಾರಾ ಮತ್ತು ವಿಜಯ್ ಸೇತುಪತಿ ನಟಿಸಿದ್ದಾರೆ. ಚಿತ್ರ ಘೋಷಣೆಯಾದಾಗಿನಿಂದಲೂ ವಿಜಯ್ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಸದ್ಯ ವಿಜಯ್ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ. 


ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಜವಾನ್‌ ಚಿತ್ರ ಬಿಡುಗಡೆಯಾಗಲಿದೆ. ಜವಾನ್ ಅಟ್ಲಿ ಅವರ ಚೊಚ್ಚಲ ಬಾಲಿವುಡ್ ಚಿತ್ರ. ವರದಿಗಳ ಪ್ರಕಾರ ಜವಾನ್ ಚಿತ್ರದಲ್ಲಿ ಶಾರುಖ್ ದ್ವಿಪಾತ್ರದಲ್ಲಿ ನಟಿಸಲಿದ್ದಾರೆ. ಜವಾನ್ ಚಿತ್ರವನ್ನು ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್ ಬ್ಯಾನರ್ ಅಡಿಯಲ್ಲಿ ಗೌರಿ ಖಾನ್ ನಿರ್ಮಿಸಿದ್ದಾರೆ. 


ಇದನ್ನೂ ಓದಿ- ಈ ಖ್ಯಾತ ಕನ್ನಡ ನಟಿಯ ಹೋಟೆಲ್‌ ರೂಮ್‌ನಲ್ಲಿತ್ತಂತೆ ಸೀಕ್ರೇಟ್‌ ಕ್ಯಾಮೆರಾ!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ