Kaatera Review By BJP Members: ರಾಜ್ಯದೆಲ್ಲೆಡೆ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ನಟಿಸಿರುವ ಕಾಟೇರ ಸಿನಿಮಾ ದೊಡ್ಡ ಮಟ್ಟದಲ್ಲಿಯೇ ರಿಲೀಸ್ ಆಗಿದ್ದು, ರಾಜ್ಯದ 389 ಥಿಯೇಟರ್‌ನಲ್ಲಿ ರಿಲೀಸ್ ಆಗಿ, 72 ಮಲ್ಟಿಪ್ಲೆಕ್ಸ್ ಥಿಯೇಟರ್‌ನಲ್ಲಿ ಪ್ರದರ್ಶನ ಕಂಡಿದೆ. 1544 ಹೌಸ್‌ಫುಲ್ ಶೋಗಳೂ ಆಗಿದ್ದು, ಹೀಗೆ ಸಿನಿಮಾದ ಮೊದಲ ದಿನ ಭರ್ಜರಿ ಶೋಗಳೂ ಆಗಿವೆ. ಭರ್ಜರಿ ಓಪನಿಂಗ್ ಕೂಡ ಪಡೆದಿದೆ. ಚಿತ್ರ ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ಬಾಕ್ಸ್ ಆಫೀಸ್‌ನಲ್ಲಿ ಕಾಟೇರ ಚಿತ್ರ ಕೋಟಿ ಕೋಟಿ ಕೊಳ್ಳೆ ಹೊಡೆಯುತ್ತಿದೆ. ಕಾಟೇರ ಸಿನಿಮಾ ಹೌಸ್​ಫುಲ್​ ಪ್ರದರ್ಶನ ಕಾಣುತ್ತಿದೆ. 


COMMERCIAL BREAK
SCROLL TO CONTINUE READING

ಕಾಟೇರ ಚಿತ್ರವನ್ನು ನೋಡಿದ ಪ್ರೇಕ್ಷಕರು ಮೆಚ್ಚುಗೆ ಸೂಚಿಸಿ, ಇದು ದರ್ಶನ್​ ದಿ ಬೆಸ್ಟ್ ಸಿನಿಮಾ ಎನ್ನುತ್ತಿರುವಾಗ, ಕಾಟೇರ ಕಥೆಯನ್ನು ಜನ ಸಾಮಾನ್ಯರಷ್ಟೇ ಅಲ್ಲದೇ ಇದೀಗ ರಾಜಕಾರಣಿಗಳ ಮನಗೆದ್ದಿದೆ. ಇತ್ತೀಚೆಗೆ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್​ ಜೋಶಿ ಮತ್ತು ಹುಬ್ಬಳ್ಳಿ ಶಾಸಕರಾದ ಮಹೇಶ್​ ಟೆಂಗಿನಕಾಯಿ ಕಾಟೇರ ಸಿನಿಮಾ ನೋಡಿದ್ದಾರೆ. ಕಾಟೇರ ಸಿನಿಮಾ ಇಂದಿರಾ ಗಾಂಧಿ ಸರ್ಕಾರದ ವೇಳೆ ಹಳ್ಳಿಯೊಂದರಲ್ಲಿ ನಡೆದ ಕಥೆಯನ್ನು ಆಧರಿಸಿದ್ದು, ಇದನ್ನು ಹುಬ್ಬಳ್ಳಿಯಲ್ಲಿ ವೀಕ್ಷಸಿದ ಬಿಜೆಪಿ ನಾಯಕರು  ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕಾಟೇರ ಸಿನಿಮಾ ನೋಡಿದ ಬಳಿಕ ಬಿಜೆಪಿ ನಾಯಕರು ದರ್ಶನ್​ ಸಿನಿಮಾವನ್ನು ಕೊಂಡಾಡಿ, ಚಿತ್ರದಲ್ಲಿ ಒಳ್ಳೆಯ ಸಂದೇಶ ನೀಡಲಾಗಿದೆ ಎಂದ್ರು.  


ಇದನ್ನೂ ಓದಿ: ದಳಪತಿ ಫ್ಯಾನ್ಸ್‌ಗೆ ಗುಡ್‌ನ್ಯೂಸ್‌: ವಿಜಯ್‌ 68ನೇ ಚಿತ್ರದ ಪೋಸ್ಟರ್‌ ಔಟ್‌!


ಪ್ರಲ್ಹಾದ್​ ಜೋಶಿ, "ಚಂದನವನದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಕ್‌ಲೈನ್ ವೆಂಕಟೇಶ ಅವರ ನಿರ್ಮಾಣದಲ್ಲಿ ತರುಣ್ ಸುಧೀರ್ ಅವರ ನಿರ್ದೇಶನದಲ್ಲಿ ಮೂಡಿಬಂದ ಕಾಟೇರ ಚಲನಚಿತ್ರವನ್ನು ಹುಬ್ಬಳ್ಳಿಯಲ್ಲಿ ವೀಕ್ಷಿಸಿದೆನು. ರೈತರಿಗೆ ಪ್ರತಿಯೊಬ್ಬರೂ ನೀಡಬೇಕಾದ ಪ್ರಾಮುಖ್ಯತೆ, ಸಮಾಜದಲ್ಲಿ ಸರ್ವರನ್ನೂ ಸಮಾನವಾಗಿ ಕಾಣಬೇಕೆನ್ನುವ ಸಂದೇಶವನ್ನು ಚಲನಚಿತ್ರದ ಮೂಲಕ ಅಚ್ಚುಕಟ್ಟಾಗಿ ಅದ್ಭುತವಾಗಿ ತೋರಿಸಲಾಗಿದೆ. ದರ್ಶನ್ ಅವರ ಅದ್ಭುತ ನಟನೆ ಅಭಿಮಾನಿಗಳನ್ನು ಚಲನಚಿತ್ರ ಪ್ರಿಯರನ್ನು ಮತ್ತೊಮ್ಮೆ ರಂಜಿಸುವುದರ ಜೊತೆಗೆ ಹೊಸ ಸಂದೇಶವನ್ನು ಸಾರಿದ್ದಾರೆ. ಚಲನಚಿತ್ರ ಯಶಸ್ಸು ಕಾಣಲಿ ಎಂದು ಕಾಟೇರ ಚಲನಚಿತ್ರ ತಂಡಕ್ಕೆ ಶುಭ ಹಾರೈಸುತ್ತೇನೆ" ಎಂದು ಸೋಷಿಯಲ್‌ ಮಿಡಿಯಾದಲ್ಲಿ ಬರೆದಿದ್ದಾರೆ.


ತರುಣ್ ಸುಧೀರ್ ನಿರ್ದೇಶನದ ಕಾಟೇರದಲ್ಲಿ, ದರ್ಶನ್‌ 2 ವಿಭಿನ್ನ ಶೇಡ್‌ಗಳಿರೋ ಪಾತ್ರದಲ್ಲಿ ನಟಿಸಿದ್ದು ಜೊತೆಗೆ ಮಾಲಾಶ್ರೀ ಪುತ್ರಿ ಆರಾಧನಾ ನಾಯಕಿಯಾಗಿ ಮಿಂಚಿದ್ದಾರೆ. ಮೊದಲ ಪ್ರಯತ್ನದಲ್ಲಿ ಸಕ್ಸಸ್ ಕಂಡಿದ್ದು, ಇನ್ನುಳಿದಂತೆ ಶ್ರುತಿ, ಕುಮಾರ್ ಗೋವಿಂದ್, ಜಗಪತಿ ಬಾಬು, ವಿನೋದ್ ಆಳ್ವ, ಬಿರಾದಾರ್ ಸೇರಿದಂತೆ ದೊಡ್ಡ ಕಲಾವಿದರ ದಂಡೇ ಚಿತ್ರದಲ್ಲಿದೆ. 3ನೇ ದಿನವೂ 'ಕಾಟೇರ' ಸಿನಿಮಾ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದ್ದು, ಮೊದಲ ದಿನ 19 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿದ್ದ ಸಿನಿಮಾ 2ನೇ ದಿನ 17.35 ಕೋಟಿ ರೂ. ಬಾಚಿದೆ. ಒಟ್ಟಾರೆ ಮೊದಲೆರಡು ದಿನ ಸಿನಿಮಾ 37.14 ಕೋಟಿ ರೂ. ಗಳಿಸಿದಂತಾಗಿ, ಮೂರನೇ ದಿನವೂ ಸಾಕಷ್ಟು ಕಡೆಗಳಲ್ಲಿ ಸಿನಿಮಾ ಹೌಸ್‌ಫುಲ್ ಕಲೆಕ್ಷನ್ ಆಗಿದ್ದು ಫಸ್ಟ್‌ ವೀಕೆಂಡ್‌ನಲ್ಲೇ ಸಿನಿಮಾ 50 ಕೋಟಿ ರೂ. ಗಡಿ ದಾಟುವ ಸುಳಿವು ಸಿಗುತ್ತಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ