Chaitra kundapura: ಬಿಗ್‌ಬಾಸ್‌ ಸೀಸನ್‌ 11ರ ಸ್ಪರ್ಧಿಗಳು ಫುಲ್‌ ಆಕ್ಟಿವ್‌ ಆಗಿ ಎಲ್ಲಾ ಟಾಸ್ಕ್‌ಗಳನ್ನು ಆಡುತ್ತಿದ್ದಾರೆ. ಹೀಗಿರುವಾಗ ಚೈತ್ರ ಕುಂದಾಪುರ ಅವರು ಇತ್ತೀಚೆಗೆ ನೀಡಿದ ಟಾಸ್ಕ್‌ ಒಂದನ್ನು ಆಡುತ್ತಾ, ತಮ್ಮ ಪ್ರೀತಿ ಪಾತ್ರರು ನೀಡಿದ್ದ ಉಂಗುರವನ್ನು ಕಳೆದುಕೊಂಡು ಕಂಗಾಲಾಗಿದ್ದರು, ಟಾಸ್ಕ್‌ನ ಸಮಯದಲ್ಲಿ ಮಣ್ಣು ಕಲಿಸುತ್ತಿರುವಾಗ ಚೈತ್ರ ಅವರ ಉಂಗುರ ಆ ಮಣ್ಣಿನಲ್ಲಿ ಮಿಸ್‌ ಆಗುತ್ತದೆ. ಉಂಗುರ ಕಳೆದುಕೊಂಡು ಗಾಬರಿಯಲ್ಲಿ ಚೈತ್ರ ಮನದಲ್ಲಿ ದೇವರನ್ನು ನೆನೆಯುತ್ತಾರೆ, ಹೀಗೆ ನಡೆದ ಕೆಲವೇ ಕ್ಷಣಗಳಲ್ಲಿ ಚೈತ್ರ ಕಳೆದುಕೊಂಡ ಉಂಗುರ ಅವರಿಗೆ ವಾಪಸ್‌ ಸಿಕ್ಕಿದೆ.


COMMERCIAL BREAK
SCROLL TO CONTINUE READING

ನಿನ್ನೆ ಬಿಗ್‌ಬಾಸ್‌ ಮನೆಯವರಿಗಾಗಿ ಒಂದು ಟಾಸ್ಕ್‌ ಅನ್ನು ನೀಡಿದ್ದರು, ಈ ಟಾಸ್ಕ್‌ನಲ್ಲಿ ಸ್ಪರ್ಧಿಗಳು ಕೆಸರಿನಲ್ಲಿ ಅಕ್ಷರಗಳನ್ನು ಬರೆದು ವಿರೋಧಿ ಸ್ಪರ್ಧಿಗಳು ಇದನ್ನು ಅಳಿಸದಂತೆ ಕಾಪಾಡಿಕೊಳ್ಳುವ ಜವಾಬ್ದಾರಿಯನ್ನು ನೀಡಲಾಗಿತ್ತು. ಇದರಲ್ಲಿ ಸಕ್ರಿಯರಾಗಿದ್ದ, ಚೈತ್ರ ಕುಂದಾಪುರ ಕೂಡ ಟಾಸ್ಕ್‌ ಅನ್ನು ತುಂಬಾ ಚೆನ್ನಾಗಿ ನಿಭಾಸುತ್ತಾರೆ, ಟಾಸ್ಕ್‌ನ ನಡುವೆ ಹಗ್ಗ ಜಗ್ಗಾಟ ಕೆಸರಿನಲ್ಲಿ ಬರೆದ ಅಕ್ಷರಗಳನ್ನು ಅಳಿಸದಂತೆ ಉಲಿಸಿಕೊಳ್ಳುವ ಪ್ರಯತ್ನದಲ್ಲಿ ಚೈತ್ರ ತಮ್ಮ ಉಂಗುರವನ್ನು ಕಳೆದುಕೊಳ್ಳುತ್ತಾರೆ.


ಹೌದು, ಹೀಗೆ ಚೈತ್ರ ಕುಂದಾಪುರ ತಮ್ಮ ಉಂಗುರವನ್ನು ಕಳೆದುಕೊಳ್ಳುವುದು ಕೆಸರಿನಲ್ಲಿ, ಸಾಮಾನ್ಯವಾಗಿ ಕೆಸರಿನಲ್ಲಿ ಒಂದು ಸಣ್ಣ ಗಾತ್ರದ ಉಂಗುರ ಮತ್ತೆ ಸಿಗುವುದು ಅಷ್ಟು ಸುಲಭದ ಮಾತಲ್ಲ ಎಂಬುದು ಎಲ್ಲರಿಗೂ ಗೊತ್ತಿದೆ, ಆದರೆ ಚೈತ್ರ ಕುಂದಾಪುರ ವಿಷಯದಲ್ಲಿ ಇಲ್ಲೊಂದು ಪವಾಡವೇ ನಡೆದಿದೆ. 


ಚೈತ್ರ ಅವರು ತಾವು ಧರಿಸಿದ ಉಂಗುರವನ್ನು ತೋರಿಸಿ ಸಾಕಷ್ಟು ಭಾರಿ ಆ ಉಂಗುರವನ್ನು ತೋರಿಸಿ ಅದು ತನಗೆ ತುಂಬಾ ವಿಶೇಷ ಎಂದು ಹೇಳಿಕೊಂಡಿದ್ದಾರೆ, ಹೀಗಿರುವಾಗ ಟಾಸ್ಕ್‌ ನಡೆಯುತ್ತಿದ್ದ ಸಂದರ್ಭದಲ್ಲಿ ಉಂಗುರವನ್ನು ಕಲೆದುಕೊಂಡ ಅವರು ತುಂಬಾ ಗಾಬರಿಯಾಗಿದ್ದರು, ಮತ್ತೆ ಉಂಗುರ ಸಿಗುತ್ತೋ ಇಲ್ಲವೋ ಎಂಬ ಭಯದಲ್ಲೆ ಮನದಲ್ಲಿ ಕೊರಗಜ್ಜನನ್ನು ನೆದಿದ್ದರು, ಹೀಗೆ ನಡೆದ ಕೆಲವೇ ಕ್ಷಣಗಳಲ್ಲಿ ಕಲೆದು ಹೋಗಿದ್ದ ಉಂಗುರ ಮತ್ತೆ ಸಿಕ್ಕಿದೆ, ಇದನ್ನು ನೋಡಿ ಚೈತ್ರ ತುಂಬಾ ಖುಷಿ ಪಟ್ಟಿದ್ದಾರೆ. 


ದಕ್ಷಿಣ ಕರ್ನಾಟಕ ಭಾಗದಲ್ಲಿ ಕೊರಗಜ್ಜನನ್ನು ಜನರು ನಂಬುತ್ತಾರೆ, ಕೊರಗಜ್ಜ ತಮ್ಮ ಕೈ ಬಿಡುವುದಿಲ್ಲ ಎಂಬ ನಂಬಿಕೆ ಈ ಭಾಗದ ಜನರಲ್ಲಿ ಸಾಕಷ್ಟಿದೆ, ಇದೀಗ ಬಿಗ್‌ಬಾಸ್‌ ಮನೆಯಲ್ಲಿ ನಡೆದಿರುವ ಈ ಘಟನೆ ಕೊರಗಜ್ಜನ ಕೃಪೆ ಎಂತಹದ್ದು ಎಂಬುದನ್ನು ತೋರಿಸಿಕೊಟ್ಟಿದೆ. ನಂಬಿದವರನ್ನು ಕೊರಗಜ್ಜ ಎಂದಿಗೂ ಕೈ ಬಿಡುವುದಿಲ್ಲ ಎಂಬ ನಂಬಿಕೆ ಮತ್ತೆ ಸಾಬೀತಾಗಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.