'ಮೆಜೆಸ್ಟಿಕ್'ನಲ್ಲಿ 'ಧ್ರುವ' ತಾರೆಯಾಗಿ ಮಿಂಚಿ ಎಲ್ಲರ 'ದಿಲ್' 'ನಿನಗೋಸ್ಕರ' 'ಕಿಟ್ಟಿ' ಎನ್ನುತ್ತಾ 'ಕರಿಯ'ನಿಗಾಗಿ 'ನೀನಂದ್ರೆ ಇಷ್ಟ' ಎಂದು 'ಲಾಲಿ ಹಾಡು' ಹಾಡಿ, 'ಕುಶಲವೇ ಕ್ಷೇಮವೇ' ಎಂದು 'ಲಂಕೇಶ್ ಪತ್ರಿಕೆ'ಯಲ್ಲಿ ಕೇಳಿದ 'ನಮ್ಮ ಪ್ರೀತಿಯ ರಾಮು' 'ದಾಸ'ನಿಗಿಂದು 42ನೇ ಹುಟ್ಟು ಹಬ್ಬದ ಸಂಭ್ರಮ.


COMMERCIAL BREAK
SCROLL TO CONTINUE READING

'ಅಣ್ಣಾವ್ರು', 'ಧರ್ಮ', 'ದರ್ಶನ್', 'ಭಗವಾನ್' ಚಿತ್ರಗಳ ಮೂಲಕ 'ಕಲಾಸಿಪಾಳ್ಯ'ದಲ್ಲಿ 'ಸರ್ದಾರ'ನಾಗಿ ಮೆರೆದ 'ಅಯ್ಯ' 'ಶಾಸ್ತ್ರೀ' 'ಸ್ವಾಮಿ' 'ಮಂಡ್ಯ'ದಲ್ಲಿ 'ಸುಂಟರ'ಗಾಳಿ ಎಬ್ಬಿಸಿದ 'ದತ್ತ', 'ತಂಗಿಗಾಗಿ' 'ಜೊತೆಜೊತೆಯಲಿ' 'ಸ್ನೇಹಾನ ಪ್ರೀತೀನಾ' ಎನ್ನುತ್ತಾ ನಿಂತ 'ಭೂಪತಿ' ಈ 'ಅರಸು'. 'ಅನಾಥರಿ'ಗಾಗಿ 'ಈ ಬಂಧನದ'ಲ್ಲಿ 'ಗಜ', 'ಇಂದ್ರ', 'ಅರ್ಜುನನಾಗಿ' 'ಅಭಯ' ನೀಡಿದ 'ನವಗ್ರಹ' 'ಯೋಧ'.  'ಪೊರ್ಕಿ'ಯಾಗಿ 'ಶೌರ್ಯ' ತೋರಿ 'ಬಾಸ್' ಆಗಿ ಮೆರೆದ 'ಪ್ರಿನ್ಸ್' 'ಸಾರಥಿ'. 


'ಚಿಂಗಾರಿ' 'ಸ್ನೇಹಿತರಿ'ಗೆ 'ಸಂಗೊಳ್ಳಿ ರಾಯಣ್ಣ'ನಾದ 'ಬುಲ್ ಬುಲ್'. 'ಬೃಂದಾವನ'ದ 'ಅಗ್ರಜ' 'ಅಂಬರೀಶ', 'ಮಿ. ಐರಾವತ'ದಲ್ಲಿ 'ಮುಮ್ತಾಜ್' ಗಾಗಿ 'ವಿರಾಟ' ರೂಪ ತಳೆದ 'ಜಗ್ಗು ದಾದ'. 'ಚೌಕ'ದಲ್ಲಿ 'ಚಕ್ರವರ್ತಿ'ಯಾಗಿ  ಚಂದನವನದಲ್ಲಿ 'ತಾರಖ್' 'ಕುರುಕ್ಷೇತ್ರ'ವನ್ನೇ ಸೃಷ್ಟಿಸುತ್ತಿರುವ 'ಯಜಮಾನ' ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು.