Viral Video : ನಿವೇದಿತಾ ಗೌಡ ಸೋಷಿಯಲ್‌ ಮೀಡಿಯಾದಿಂದಲೇ ನೇಮ್‌ ಫೇಮ್‌ ಪಡೆದು ಬಳಿಕ ಬಿಗ್‌ ಬಾಸ್‌ ಮನೆಗೆ ತೆರಳಿದ್ದರು. ಬಳಿಕ ಬಿಗ್‌ ಬಾಸ್‌ನಲ್ಲಿ ಅವರ ಸಹಸ್ಪರ್ಧಿಯಾಗಿದ್ದ ರ್ಯಾಪರ್‌ ಚಂದನ್‌ ಶೆಟ್ಟಿ ಅವರನ್ನೇ ಮದುವೆಯಾದರು. ಸಾಮಾಜಿಕ ಮಾಧ್ಯಮಗಳಲ್ಲಿ ನಿವೇದಿತಾ ಗೌಡ ಸದಾ ಆ್ಯಕ್ಟೀವ್ ಆಗಿರುತ್ತಾರೆ. ರೀಲ್ಸ್ ಮಾಡುತ್ತ, ವಿಭಿನ್ನ ವಿಡಿಯೋ ಮಾಡುತ್ತ ಅಭಿಮಾನಿಗಳನ್ನು ರಂಜಿಸುತ್ತಿರುತ್ತಾರೆ. ಆದರೆ ಇದೀಗ ನಿವೇದಿತಾ ಹಂಚಿಕೊಂಡಿರುವ ಹೊಸ ವಿಡಿಯೋ ಸಖತ್ ವೈರಲ್ ಆಗಿದ್ದು ಮಾತ್ರವಲ್ಲದ ಕೆಲ ನೆಟ್ಟಿಗರಿಂದ ಟೀಕೆಗೆ ಸಹ ಗುರಿಯಾಗಿದೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ : BBK 9 : ಐಶ್ವರ್ಯಾ ಪಿಸ್ಸೆ ಹೊರಹೋಗುವ ಮುನ್ನ ‌ಆರ್ಯವರ್ಧನ್ ರನ್ನು ನೇರ ನಾಮಿನೇಟ್ ಮಾಡಿದ್ದೇಕೆ?


ಹಸಿರು ಬಣ್ಣದ ಫ್ರಾಕ್‌ ತೊಟ್ಟಿರುವ ನಿವೇದಿತಾ,  ಬಂಗಾರದ ಬಣ್ಣದ ಟೀ ಶರ್ಟ್‌ ಧರಿಸುರುವ ಚಂದನ್ ಶೆಟ್ಟಿ ಹಾಡೊಂದಕ್ಕೆ ರೀಲ್ಸ್‌ ಮಾಡಿದ್ದಾರೆ. ' No ಎನ್ನದೆ Yes ಅಂದರೆ ಅಫೀಶಿಯಲ್ ಅಗಿ ಪಪ್ಪಿ ಕೊಡುವೆ' ಎನ್ನುವ ಸಾಲಿಗೆ ಹೆಜ್ಜೆ ಹಾಕಿದ್ದಾರೆ. ಈ ವೇಳೆ ಪಪ್ಪಿ ಎಂಬ ಪದ ಬರುತ್ತಿದ್ದಂತೆ ಇಬ್ಬರೂ ಕಿಸ್‌ ಮಾಡಿದ್ದಾರೆ. ಒಂದು ಕ್ಷಣಕ್ಕೆ ನಿವೇದಿತಾ ಗೌಡ ಅವರೇ ಶಾಕ್ ಆಗುತ್ತಾರೆ. ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿದ್ದು, ಲಕ್ಷಾಂತರ ಕಾಮೆಂಟ್‌ಗಳು ಬಂದಿವೆ. 


 



 


ಈ ವಿಡಿಯೋ ನೋಡಿದ ಕೆಲವರು ಇವರ ಡ್ಯಾನ್ಸ್‌ನ್ನು ಹೊಗಳಿದ್ದರೆ,  ಮತ್ತೆ ಕೆಲವರು ಟೀಕಿಸಿದ್ದಾರೆ. ಈ ರೀತಿಯ ವಿಡಿಯೋಗಳನ್ನು ಪೋಸ್ಟ್ ಮಾಡುವ ಅವಶ್ಯಕತೆ ಏನಿದೆ ಎಂದು ಅನೇಕರು ಅಸಮಾಧಾನ ಹೊರಹಾಕಿದ್ದಾರೆ. 


ಇದನ್ನೂ ಓದಿ : BBK 9 : ಮೊದಲ ವಾರ ಕಿಚ್ಚನ ಮೆಚ್ಚುಗೆಯ ಚಪ್ಪಾಳೆ ಪಡೆದವರು ಇವರೇ ನೋಡಿ.!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.