ನವದೆಹಲಿ: ಕನ್ನಡ ಸಿನಿಮಾಗಳು ಜಗತ್ತಿನಾದ್ಯಂತ ಸದ್ದು ಮಾಡುತ್ತಿದ್ದು, ಭಾರತದ ಮೂಲೆ ಮೂಲೆಯಲ್ಲೂ ಅಬ್ಬರಿಸುತ್ತಿವೆ. ಅದರಲ್ಲೂ ಕೊರೊನಾ ಕಂಟಕದ ಬಳಿಕ ಕನ್ನಡ ಸಿನಿಮಾ ಜಗತ್ತಿನಲ್ಲಿ ಹೊಸ ಮನ್ವಂತರವೇ ಶುರುವಾಗಿದೆ. 'ಜೇಮ್ಸ್', 'ಕೆಜಿಎಫ್‌-2' ಬಳಿಕ ಇದೀಗ '777 ಚಾರ್ಲಿ' ಹೊಸ ದಾಖಲೆ ಬರೆದಿದೆ. 450 ಥಿಯೇಟರ್‌ಗಳಲ್ಲಿ ಯಶಸ್ವಿಯಾಗಿ 25 ದಿನ ಪೂರೈಸಿ 150 ಕೋಟಿ ರೂ. ಕ್ಲಬ್‌ ಸೇರಿದೆ ಸ್ಯಾಂಡಲ್‌ವುಡ್‌ ಸಿನಿಮಾ '777 ಚಾರ್ಲಿ'.


COMMERCIAL BREAK
SCROLL TO CONTINUE READING

ಅಷ್ಟಕ್ಕೂ ಜಗತ್ತಿನಾದ್ಯಂತ 450 ಥಿಯೇಟರ್‌ಗಳಲ್ಲಿ ಯಶಸ್ವಿಯಾಗಿ 25 ದಿನ ಪೂರೈಸುವುದು ಸಾಮಾನ್ಯ ಮಾತಲ್ಲ. ಅದರಲ್ಲೂ ಕನ್ನಡ ಸಿನಿಮಾ ಇಂತಹ ಸಾಧನೆ ಮಾಡಿರುವುದು ಹೆಮ್ಮೆಯ ಸಂಗತಿ. ಇದೇ ಕಾರಣಕ್ಕೆ '777 ಚಾರ್ಲಿ' ತಂಡ ವಿಶೇಷ ಕಾರ್ಯಕ್ರಮ ಆಯೋಜಿಸಿತ್ತು. ನಟ ರಕ್ಷಿತ್‌ ಶೆಟ್ಟಿ ಮತ್ತು ತಂಡ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಆದರೆ, ಎಲ್ಲರ ಗಮನ ಮಾತ್ರ '777 ಚಾರ್ಲಿ' ಮೇಲೆ ಇತ್ತು. ಹೌದು, 'ಚಾರ್ಲಿ' ಹೊಸ ಫ್ರಾಕ್‌ ತೊಟ್ಟು ಮಿರ ಮಿರ ಮಿಂಚಿ ಎಲ್ಲರ ಗಮನ ಸೆಳೆದಳು.


ಇದನ್ನೂ ಓದಿ: ಖ್ಯಾತ ಹಾಸ್ಯನಟನಿಗೆ ಸಂಕಷ್ಟ ತಂದ ಒಪ್ಪಂದ: 7 ವರ್ಷಗಳ ಬಳಿಕ ವಿದೇಶದಲ್ಲಿ ಕೇಸ್‌ ದಾಖಲು


'ಚಾರ್ಲಿ'ಗೆ ಫ್ರಾಕ್..!‌


ರಕ್ಷಿತ್‌ ಶೆಟ್ಟಿ, ಈ ಬಾರಿ ಪಪ್ಪಿಯ ಕಥೆ ಹೇಳಿದ್ದರು. ಪ್ರೀತಿ, ಕಂಬನಿ, ಭಾವನೆಗಳ ಬೆಸುಗೆಯೇ '777 ಚಾರ್ಲಿ' ಆಗಿತ್ತು. ಈ ಮೂಲಕ '777 ಚಾರ್ಲಿ' ದಾಖಲೆಗಳ ಮೇಲೆ ದಾಖಲೆ ಬರೆದಿತ್ತು. ಇದೀಗ ಬಾಕ್ಸ್‌ ಆಫಿಸ್‌ ವಿಚಾರದಲ್ಲೂ '777 ಚಾರ್ಲಿ' ದೊಡ್ಡ ದಾಖಲೆ ನಿರ್ಮಿಸಿದೆ. ಹೀಗೆ ಕನ್ನಡ ಸಿನಿಮಾ ಜಗತ್ತು ಮತ್ತಷ್ಟು ಎತ್ತರಕ್ಕೆ ಬೆಳೆಯುತ್ತಿದ್ದು, ಜಾಗತಿಕ ಮಾರುಕಟ್ಟೆಯಲ್ಲಿ ಕನ್ನಡ ಸಿನಿಮಾಗಳಿಗೆ ಬೇಡಿಕೆ ಹೆಚ್ಚುತ್ತಿದೆ.


ಇದನ್ನೂ ಓದಿ: Liger : ಬೆತ್ತಲಾಗಿ ಟ್ರೋಲ್ಗೆ ಒಳಗಾದ ನಟ ವಿಜಯ್ ದೇವರಕೊಂಡ...!


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ