Priyanka Chopra: ನಟಿ ಪ್ರಿಯಾಂಕಾ ಚೋಪ್ರಾ ಯುಎಸ್‌ನಲ್ಲಿ ಲೇಟ್‌ ನೈಟ್‌ ಟಾಕ್ ಶೋನಲ್ಲಿ ಭಾಗಿಯಾದಾಗ ಹಲವು ಖಾಸಗಿ ವಿಚಾರಗಳ ಬಗ್ಗೆ ಮಾತನಾಡಿದ್ದರು. ಲಂಡನ್‌ನಲ್ಲಿ ವಾಸಿಸುತ್ತಿರುವಾಗ ಅವರು ಯುಎಸ್‌ನಲ್ಲಿ ಈ ಲೇಟ್‌ ನೈಟ್‌ ಟಾಕ್ ಶೋನಲ್ಲಿ ಭಾಗಿಯಾಗಿದ್ದರು. ಈ ಹಾಲಿವುಡ್‌ನ ಶೋನಲ್ಲಿ ತೀರ ಖಾಸಗಿ ವಿಷಯಗಳ ಬಗ್ಗೆ ಅವರಿಗೆ ಪ್ರಶ್ನೆಗಳನ್ನು ಕೇಳಲಾಯಿತು. 


COMMERCIAL BREAK
SCROLL TO CONTINUE READING

ಬಾಲಿವುಡ್‌ನಲ್ಲಿ ಮಿಂಚಿದ ಪ್ರಿಯಾಂಕಾ ಚೋಪ್ರಾ ಸದ್ಯ ಹಾಲಿವುಡ್‌ನ ಖ್ಯಾತ ನಟಿಯರಲ್ಲಿ ಒಬ್ಬರು. ಬಹುವರ್ಷಗಳಿಂದ ಹಾಲಿವುಡ್‌ನಲ್ಲೇ ಬ್ಯುಸಿಯಾಗಿರುವ ಪ್ರಿಯಾಂಕಾ ಚೋಪ್ರಾ ಅವರ ವೆಬ್ ಸರಣಿ ಸಿಟಾಡೆಲ್ ಅಮೆಜಾನ್ ಪ್ರೈಂನಲ್ಲಿ ಬಿಡುಗಡೆ ಆಗಿತ್ತು.  


ಪ್ರಿಯಾಂಕಾ ಮುಖ್ಯ ಪಾತ್ರದಲ್ಲಿ ನಟಿಸಿರುವ ಲವ್ ಅಗೇನ್ ಸಿನಿಮಾದ ಪ್ರಚಾರದ ಸಂದರ್ಶನದಲ್ಲಿ, ತೀರಾ ಖಾಸಗಿ ಎನಿಸುವ ಕೆಲವು ಪ್ರಶ್ನೆಗಳನ್ನು ಕೇಳಿದ್ದರು. ಈ ಹಾಲಿವುಡ್‌ ಲೇಟ್‌ ನೈಟ್‌ ಟಾಕ್‌ ಶೋ ಹೆಸರು ವಾಚ್ ವಾಟ್ ಹ್ಯಾಪೆನ್ಸ್ ಲೈವ್ ವಿತ್ ಆಂಡಿ ಕೊವೆನ್. ಇದರಲ್ಲಿ ಪ್ರಿಯಾಂಕಾ ಚೋಪ್ರಾಗೆ ಕೇಳಿದ ಪ್ರಶ್ನೆಯ ಜೊತೆಗೆ ಅದಕ್ಕೆ ಅವರು ಕೊಟ್ಟ ಉತ್ತರು ಭಾರಿ ಕ್ರೇಜಿಯಾಗಿತ್ತು. ಈ ಶೋನಲ್ಲಿ ಲವ್ ಅಗೇನ್ ಸಿನಿಮಾದ ಸಹನಟ ಸ್ಯಾಮ್ ಹ್ಯೂಗನ್ ಕೂಡ ಭಾಗವಹಿಸಿದ್ದರು. 


ಇದನ್ನೂ ಓದಿ: ವಿವಾದ ಸೃಷ್ಟಿಸಿದ ಏಕ್ತಾ ಕಪೂರ್ 'ಗಂಧೀಬಾತ್​' ಪೋಸ್ಟರ್..‌ ಲಕ್ಷ್ಮೀ ದೇವಿಗೆ ಇದೆಂಥ ಅವಮಾನ! ​


ಶೋನ ನಿರೂಪಕ ಆಂಡಿ ಕೊವೆನ್ ಕಾರ್ಯಕ್ರಮದಲ್ಲಿ, ಚೀಸ್ ಮತ್ತು ಓರಲ್ ಸೆಕ್ಸ್ ಇವೆರಡರಲ್ಲಿ ಯಾವುದಾದರೂ ಒಂದನ್ನು ಜೀವನ ಪರ್ಯಂತ ತೊರೆಯಬೇಕು ಎಂದರೆ ಯಾವುದನ್ನು ತ್ಯಜಿಸುವಿರಿ? ಎಂದು ಕೇಳುತ್ತಾರೆ. ಪ್ರಿಯಾಂಕಾ ಚೋಪ್ರಾ ಈ ಪ್ರಶ್ನೆ ಕೇಳಿದ ತಕ್ಷಣ ನಗಲು ಪ್ರಾರಂಭಿಸುತ್ತಾರೆ. ಆಗ ಸ್ಯಾಮ್ ಹ್ಯೂಗನ್, "ಚೀಸ್‌ ನನಗೆ ತುಂಬಾ ಇಷ್ಟ. ಆದರ್ರೂ ಸಹ ನಾನು ಚೀಸ್‌ ಅನ್ನೇ ತೊರೆಯುವೆ" ಎಂದು ಹೇಳುತ್ತಾರೆ. ಆಗ ಪ್ರಿಯಾಂಕಾ ಚೋಪ್ರಾ, "ಸ್ಯಾಮ್ ಅವರ ಅಭಿಪ್ರಾಯವನ್ನು ನಾನು ಸಹ ಒಪ್ಪುತ್ತೇನೆ" ಎನ್ನುತ್ತಾರೆ. ಹೀಗೆ ಹೇಳುವ ಮೂಲಕ ಪ್ರಿಯಾಂಕಾ ಚೀಸ್‌ ಅನ್ನೇ ತೊರೆಯುವೆ ಎನ್ನುತ್ತಾರೆ. 


ನಂತರ ಸೆಲೆಬ್ರಿಟಿ ಆದ ಮೇಲೆ BF ಅಥವಾ GF ಬೆತ್ತಲೆ ಚಿತ್ರಗಳನ್ನು ಕಳಿಸೋದು ನಿಮಗೆ ಓಕೆನಾ? ಎಂದು ನಿರೂಪಕ ಕೇಳುತ್ತಾರೆ. ಇದಕ್ಕೆ ಪ್ರಿಯಾಂಕಾ ಹಾಗೂ ಸ್ಯಾಮ್ ಓಕೆ ಎನ್ನುತ್ತಾರೆ. ಇಂತಹ ಇನ್ನೂ ಅನೇಕ ಫನ್ನಿ ಮತ್ತು ಕ್ರೇಜಿ ಪ್ರಶ್ನೆಗಳನ್ನು ಶೋನ ನಿರೂಪಕ ಆಂಡಿ ಕೊವೆನ್ ಅವರು ಪ್ರಿಯಾಂಕಾ ಹಾಗೂ ಸ್ಯಾಮ್ ಇಬ್ಬರೊಗೂ ಕೇಳಿದ್ದರು. 


ಇದನ್ನೂ ಓದಿ: ಸುಶಾಂತ್ ಸಿಂಗ್ ರಜಪೂತ್ ಪುಣ್ಯತಿಥಿ : ದುರಂತ ಅಂತ್ಯ ಕಂಡ ನಟನ ಅದ್ಭುತ ಸಿನಿಮಾಗಳಿವು..!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.