Chetan Ahimsa : ಸದಾ ತಮ್ಮ ಹೇಳಿಕೆಯ ಮೂಲಕ ವಿವಾದಕ್ಕೆ ಗುರಿಯಾಗುತ್ತಿರುವ ನಟ, ಚೇತನ್‌ ಅಹಿಂಸಾ ಇದೀಗ ಶ್ರೀರಾಮ ಮತ್ತು ರಾಮ ಜನ್ಮಭೂಮಿ ಬಗ್ಗೆ ನೀಡಿರುವ ಹೇಳಿಕೆಯೊಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. ಚೇತನ್‌ ಹೇಳಿಕೆಗೆ ವಿರೋಧ ವ್ಯಕ್ತವಾಗುತ್ತಿದೆ. ಕಳೆದ ಕೆಲವು ದಿನಗಳ ಹಿಂದೆ, ಚೇತನ್ ತಿರುಪತಿ ದೇವಸ್ಥಾನದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿ ವಿರೋಧಕ್ಕೆ ಕಾರಣವಾಗಿದ್ದರು. ಇದೀಗ ರಾಮಜನ್ಮಭೂಮಿ ಎನ್ನುವುದು ಅವೈಜ್ಞಾನಿಕ, ರಾಮ ಬರೀ ಕಾಲ್ಪನಿಕ ವ್ಯಕ್ತಿ ಎಂದು ಹೇಳುವ ಮೂಲಕ ಹೊಸ ವಿವಾದ ಹುಟ್ಟು ಹಾಕಿದ್ದಾರೆ.


COMMERCIAL BREAK
SCROLL TO CONTINUE READING

ಹೌದು.. ನ್ಯಾಷನಲ್‌ ಟಿವಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡುವ ವೇಳೆ, ಸಾರ್ವಕರ್ ಹೇಳುವಂತೆ ರಾಮ, ರಾವಣನನ್ನು ಸಾಯಿಸಿ ಅಯೋಧ್ಯೆಗೆ ಬಂದ, ಅಲ್ಲಿ ದೇಶ ಶುರುವಾಯಿತು ಎನ್ನುವುದನ್ನು ನಾನು ಒಪ್ಪುವುದಿಲ್ಲ. ಅದು ಸುಳ್ಳು. 1992 ದೊಡ್ಡ ಘಟನೆ ನಡೆದು ರಾಮಜನ್ಮಭೂಮಿ ಆಗುತ್ತದೆ. ಬಾಬ್ರಿ ಮಸೀದಿ ಒಡೆದು ಹಾಕುತ್ತಾರೆ. ರಾಮಜನ್ಮಭೂಮಿ ಎನ್ನುವುದು ಕೇವಲ ಒಂದು ಕಾನ್ಸೆಪ್ಟ್, ಅದು ಅವೈಜ್ಞಾನಿಕ. ರಾಮ ಅನ್ನೋದು ಕಾಲ್ಪನಿಕ ವ್ಯಕ್ತಿ ಅಷ್ಟೆ ಎಂದು ಹೇಳಿದರು.


ಇದನ್ನೂ ಓದಿ: Chandan Shetty : ಮಾತಿನಮನೆಯಲ್ಲಿ ʼಸೂತ್ರಧಾರಿʼ ಚಂದನ್‌ ಶೆಟ್ಟಿ..!


ಅಲ್ಲದೆ, ಸಾರ್ವಕರ್ ರಾಮ ಬೇರೆ, ಮಹಾತ್ಮ ಗಾಂಧಿಯವರ ರಾಮ ಬೇರೆ, ರಾಮಾಯಣದ ರಾಮ ಬೇರೆ. ರಾಮನ ಭಾವನೆ ಇಟ್ಟುಕೊಳ್ಳಿ ಪರವಾಗಿಲ್ಲ.. ರಾಮ, ಕೃಷ್ಟ, ಗಣೇಶ, ಇವರೆಲ್ಲ ನಂಬಿಕೆ ಮೇಲೆ ಕಟ್ಟಿರುವ ದೇವರುಗಳು, ವೈಜ್ಞಾನಿಕತೆ ಅಂತ ಬಂದಾಗ ಇತಿಹಾಸದಲ್ಲಿ ಬದುಕಿದವರು, ಅಂದ್ರೆ, ಜೀಸಸ್‌, ಮಹಮ್ಮದ್‌, ಬುದ್ದ ಬಸವಣ್ಣ, ಅಂಬೇಡ್ಕರ್‌, ಈ ರೀತಿ ಇವರೆಲ್ಲ ವೈಜ್ಞಾನಿಕವಾಗಿ ಸಾಭೀತಾದವರು, ಇವರುಗಳ ಕುರಿತು ದಾಖಲೆ ಇವೆ ಎಂದಿದ್ದಾರೆ.


ಇನ್ನು ಕಳೆದ ಕೆಲವು ದಿನಗಳ ಹಿಂದೆ ಹಿಂದುತ್ವದ ಬಗ್ಗೆ ಅವಹೇಳನಕಾರಿ ಪೋಸ್ಟ್ ಮಾಡಿದ್ದ ಕಾರಣ ಚೇತನ್ ಬಂಧನವಾಗಿತ್ತು. ʼಹಿಂದುತ್ವವನ್ನು ಸುಳ್ಳಿನ ಅಧಾರದ ಮೇಲೆ ಕಟ್ಟಲಾಗಿದೆʼ ಎಂದು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಬರೆದುಕೊಂಡು ವಿರೋಧಕ್ಕೆ ಕಾರಣವಾಗಿದ್ದರು. ಇದೇ ವಿಚಾರಕ್ಕೆ ಜೈಲು ಸೇರಿ ಜಾಮೀನು ಪಡೆದುಕೊಂಡು, ಹೊರ ಬಂದಿದ್ದಾರೆ.https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.