Chethan Ahimsa About 2023 World Cup: 2023ರ ಏಕದಿನ ವಿಶ್ವಕಪ್‌ನ ಸತತ ಎಲ್ಲಾ ಪಂದ್ಯಗಳಲ್ಲಿಯೂ ಗೆದ್ದು ಬೀಗಿದ್ದ ಟೀಂ ಇಂಡಿಯಾ, ಇನ್ನೇನು ವಿಶ್ವಕಪ್‌ಗೆ ಮುತ್ತಿಡಬೇಕು ಎನ್ನುವಷ್ಟಲ್ಲಿ ಆಸ್ಟ್ರೇಲಿಯಾ ಮುಂದೆ ಪಂದ್ಯದಲ್ಲಿ ವಿಶ್ವಕಪ್ ಸೋಲನ್ನು ಒಪ್ಪಿಕೊಂಡಿದೆ. ನವೆಂಬರ್ 19ರಂದು ಅಹಮದಾಬ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಭಾರತ ತಂಡ 6 ವಿಕೆಟ್ ಸೋಲು ಕಂಡಿದ್ದು, ಇದರ ಬೆನ್ನಲ್ಲೇ ಟೀಂ ಇಂಡಿಯಾ ಎಲ್ಲಿ ಎಡವಿದ್ದು ಎಂಬ ಪ್ರಶ್ನೆಗಳು ಬಂದಿವೆ. ಸೋಲಿನ ಪರಾಮರ್ಶೆ ನಡೆಯುತ್ತಿದ್ದು, ಇವುಗಳ ನಡುವೆ ಕನ್ನಡದ ನಟ ಚೇತನ್ ಅಹಿಂಸಾ ಟೀಂ ಇಂಡಿಯಾದಲ್ಲಿನ ಮೀಸಲಾತಿ ಬಗ್ಗೆ ಟ್ವೀಟ್ ಮಾಡಿ ಮತ್ತೊಂದು ಕಿಡಿ ಹಚ್ಚಿದ್ದಾರೆ.


COMMERCIAL BREAK
SCROLL TO CONTINUE READING

ಹೌದು.. ಟೀಂ ಇಂಡಿಯಾದಲ್ಲಿ ಸೋಲಿಗೆ ಕೋಟ್ಯಾಂತರ ಮಂದಿ ನೊಂದುಕೊಂಡಿದ್ದರು,ಇದರ ನಡುವೆ ನಟ ಹಾಗೂ ಸಾಮಾಜಿಕ ಕಾರ್ಯಕರ್ತ ಚೇತನ್‌ ಅಹಿಂಸಾ "ನಾನು ಮತ್ತೆ ಹೇಳುತ್ತಿದ್ದೇನೆ... ಒತ್ತಿಹೇಳುತ್ತಿದ್ದೇನೆ, ಭಾರತಕ್ಕೆ ಕ್ರಿಕೆಟ್‌ನಲ್ಲಿ ಮೀಸಲಾತಿಯ ಅಗತ್ಯವಿದೆ. ಭಾರತಕ್ಕೆ ಕ್ರಿಕೆಟ್‌ನಲ್ಲಿ ಮೀಸಲಾತಿ ಇದ್ದಿದ್ದರೆ, ಭಾರತ ಈ 2023ರ ವಿಶ್ವಕಪ್ಪನ್ನು ಸುಲಭವಾಗಿ ಗೆಲ್ಲುತ್ತಿತ್ತು" ಎಂದು ಕನ್ನಡ ಮತ್ತು ಆಂಗ್ಲಭಾಷೆಯಲ್ಲಿ ಭಾರತದ ಸೋಲಿಗೆ ಮೀಸಲಾತಿ ಇಲ್ಲದೆ ಇರುವುದೇ ಕಾರಣ ಎಂದು ಟ್ವೀಟ್ ಮಾಡಿದ್ದಾರೆ. 


ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಅನುಷ್ಕಾ ಶರ್ಮಾ, ವಿರಾಟ್ ಕೊಹ್ಲಿಗೆ ಚೀರ್ಸ್; ವಿಡಿಯೋ ವೈರಲ್ !


ನಟ ಚೇತನ್ ಹೇಳಿಕೆ ಸದ್ಯ ಸಾಮಾಜಿಕ ಮಾಧ್ಯಮಗಳಲ್ಲಿ ಪರ ವಿರೋಧ ಚರ್ಚೆಗೆ ಕಾರಣವಾಗಿದ್ದು, ಅನೇಕ ಮಂದಿ ಅವರ ವಿರುದ್ಧ ಆಕ್ರೋಶ ಕೂಡ ಹೊರಹಾಕಿದ್ದಾರೆ.  ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಪರ ವಿರೋಧ ಚರ್ಚೆಗೆ ಕಾರಣವಾಗಿದೆ. ಕೆಲವರು ಅವರ ಮೀಸಲಾತಿ ಹೇಳಿಕೆಯನ್ನು ಬೆಂಬಲಿಸಿದರೇ, ಮತ್ತೆ ಕೆಲವರು ಅವರ ಹೇಳಿಕೆಯನ್ನು ವಿರೋಧಿಸಿದ್ದಾರೆ. "ಚಲನಚಿತ್ರ ರಂಗದಲ್ಲಿ ಮೀಸಲು ಇದ್ದರೆ ಒಳ್ಳೆಯ ಚಲನಚಿತ್ರ ಬರುತಿತ್ತು" ಎಂದು ನೆಟ್ಟಿಗರೊಬ್ಬರು ವ್ಯಂಗ್ಯವಾಡಿದ್ದಾರೆ. ಇತ್ತ ಈ ನಟನ ಹೇಳಿಕೆಗೆ ಬೆಂಬಲ ವ್ಯಕ್ತಪಡಿಸಿರುವೊಬ್ಬರು, "ಹೌದು... ಬಿಸಿಸಿಐನ ಮೊದಲು ಸರ್ಕಾರದ ಸುಪರ್ದಿಗೆ ತೆಗೆದುಕೊಳ್ಳಬೇಕು... ಆದರೆ ಸರ್ಕಾರವೇ ಬಿಸಿಸಿಐ ಒಳಗೆ ಕೂತು... ಒಂದೇ ಸಮುದಾಯದ ಹಿಡಿತದಲ್ಲಿ ನಲುಗುತಿದೆ ಭಾರತೀಯ ಕ್ರಿಕೆಟ್" ಎಂದು ತಮ್ಮ ಬೇಸರ ಹೊರ ಹಾಕಿದ್ದಾರೆ. 


ಮತ್ತಿಬ್ಬರು ಚೇತನ್ ಅವರನ್ನು ಮೂರ್ಖ ಎಂದು ಕರೆದಿದ್ದು, "ಹೇಯ್ ಮೂರ್ಖ ಸ್ವಲ್ಪ ಮುಂದಾಲೋಚನೆಯಿಂದ ತಿಳಿದು ಮಾತಾಡು ನಿನ್ನಷ್ಟಕ್ಕೆ ನೀನು ಬುದ್ದಿವಂತ ಅಂದುಕೊಳ್ಳಬೇಡ ಯಾರನ್ನು ಮೆಚ್ಚಿಸಲು ಇತರ ಪೋಸ್ಟ್ ಹಾಕುತಿದ್ದಿಯಾ??? ದೇಶದಲ್ಲಿ ಸಾವಿರಾರು ಜಾತಿಗಳಿವೆ ಆಗ ಎಲ್ರೂ ರೊಚ್ಚಿಗೆದ್ದು ನಮ್ಮ ಜಾತಿಯವರಿಗೆ ಚಾನ್ಸ್ ಕೊಡಬೇಕು ಅವರಿಗೆ ಕೊಡಬೇಕು ಇವರಿಗೆ ಕೊಡಬೇಕು ಎಂದು ಇಡಿ ದೇಶ ಇದರಲ್ಲೇ ಕಿತ್ತಾಡಿ ವಿಶ್ವದ ಮುಂದೆ ತಲೆ ತಗ್ಗಿಸಬೇಕು ಆಗತ್ತೆ... ನೀನು ದೇಶದ ಒಳಗಡೆ ಏನಾದ್ರು ಮಾಡ್ಕೋ ಆದ್ರೆ ಜಾಗತಿಕವಾಗಿ ನಮ್ಮ ಭಾರತಕ್ಕೆ ಒಂದು ವಿಶೇಷವಾದ ಹೆಸರು ಇದೆ. ಸಲ್ಪ ವಿವೇಚನೆಯಿಂದ ಮಾತಾಡು...ಇಲ್ಲ ಜನ ನಿನ್ನ ಮೇಲೆ ಇಟ್ಟಿರುವ ಸ್ವಲ್ಪ ಆದ್ರೂ ಗೌರವ ಕ್ಷಣ ಮಾತ್ರದಲ್ಲಿ ಕಳೆದುಕೊಳ್ಳುತ್ತಿಯಾ ಅಷ್ಟೆ..." ಎಂದು ಕಿಡಿಕಾರಿದ್ದಾರೆ.
 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.