Sanju Weds Geetha 2 Updates: ಸಂಜು ವೆಡ್ಸ್ ಗೀತಾ-2 ಚಿತ್ರದಲ್ಲಿ ಟ್ರ್ಯಾಂಗಲ್ ಲವ್ ಸ್ಟೋರಿ ಇದೆ ಅನಿಸುತ್ತಿದ್ದು, ಇದಕ್ಕೆ ಸ್ವತಃ ನಾಗಶೇಖರ್ ಒಂದಷ್ಟು ಪುರಕ ಅನಿಸೋ ಮಾತುಗಳನ್ನ ಹೇಳಿದ್ದಾರೆ. ಈ ಸಿನಿಮಾದಲ್ಲಿ ಇಬ್ಬರು ಹೀರೋಗಳು ಇರುತ್ತಿದ್ದು, ಒಂದು ಶ್ರೀನಗರ ಕಿಟ್ಟಿ ಮಾಡುತ್ತಿದ್ದಾರೆ.ಆದರೆ ಇನ್ನೂ ಒಂದು ಪಾತ್ರದ ನಾಯಕ ಜೊತೆಗೆ ಮಾತು ಕತೆ ನಡೆಯುತ್ತಿದೆ ಕುತೂಹಲ ಕೆರಳಿಸಿದೆ.  


COMMERCIAL BREAK
SCROLL TO CONTINUE READING

ಹೌದು.. ಅದು ಮೈನಾ ಚಿತ್ರದ ನಾಯಕ ಚೇತನ್ ಅನ್ನೋದನ್ನ ಸ್ವತಃ ನಾಗಶೇಖರ್ ಹೇಳಿಕೊಳ್ಳುತ್ತಿದ್ದು, ಈ ಒಂದು ಪಾತ್ರಕ್ಕೆ ಬೇರೆ ಯಾರೂ ಆಫ್ಷನ್ ಇಟ್ಟುಕೊಂಡಿಲ್ಲದೆ, ಬದಲಾಗಿ ಚೇತನ್ ಅವರನ್ನೆ ಈ ಪಾತ್ರಕ್ಕೆ ಆಯ್ಕೆ ಮಾಡಿಕೊಳ್ಳುವ ಇರಾದೆ ಇದೆ ಎಂದು ತಿಳಿಸಿದ್ದಾರೆ. ಸಂಜು ವೆಡ್ಸ್ ಗೀತಾ-2 ಚಿತ್ರದಲ್ಲಿ ಶೂಟಿಂಗ್ ಪ್ಲಾನ್ ಆಗುತ್ತಿದ್ದು, ಇದೇ ತಿಂಗಳು 15 ರಿಂದಲೇ ಬೆಂಗಳೂರಿನಲ್ಲಿ ಶೂಟಿಂಗ್ ಪ್ಲಾನ್ ಮಾಡುತ್ತಿದ್ದೇವೆ. ಒಂದು ವಾರ ಇಲ್ಲಿ ಚಿತ್ರೀಕರಣ ಆದ್ಮೇಲೆ ಸ್ವಿಜರಲ್‌ಲ್ಯಾಂಡ್‌ನಲ್ಲಿ ಸಿನಿಮಾ ಶೂಟಿಂಗ್ ಪ್ಲಾನ್ ಮಾಡಿಕೊಂಡಿದ್ದೇವೆ ಎಂದು ಹೇಳಿದರು.


ಇದನ್ನು ಓದಿ: ರಶ್ಮಿಕಾ ಮಂದಣ್ಣ ಬಳಿಕ ಡಿಜಿಟಲ್ ಮ್ಯಾನಿಪ್ಯುಲೇಷನ್‌ಗೆ ಒಳಗಾದ ಮತ್ತೊಬ್ಬ ನಟಿ: ಕತ್ರಿನಾ ಡೀಪ್‌ಫೇಕ್‌ ಚಿತ್ರ ವೈರಲ್!


ಬಳಿಕ ಮುಂಬೈನಲ್ಲೂ ಶೂಟಿಂಗ್ ಪ್ಲಾನ್ ಮಾಡಿದ್ದು, ಇಲ್ಲಿ ಚಿತ್ರೀಕರಣ ಆದ್ಮೇಲೆ ವಾಪಸ್ ಬೆಂಗಳೂರಲ್ಲಿ ಸಂಜು ವೆಡ್ಸ್ ಗೀತಾ-2 ಶೂಟಿಂಗ್ ಶುರು ಆಗುತ್ತದೆ ಎಂದು ಡೈರೆಕ್ಟರ್ ನಾಗಶೇಖರ್ ವಿವರಣೆ ಕೊಡ್ತಾರೆ. ಈ ಸಿನಿಮಾದ ಪ್ರೋಮೋ ಶೂಟಿಂಗ್ ಅತಿ ಹೆಚ್ಚು ಗಮನ ಸೆಳೆದಿದ್ದು, ರಚಿತಾ ರಾಮ್ ಮತ್ತು ಶ್ರೀನಗರ ಕಿಟ್ಟಿ ಜೋಡಿಯ ಈ ಪ್ರೋಮೋ ವೈರಲ್ ಕೂಡ ಆಗಿದೆ. ಸಂಜು ವೆಡ್ಸ್ ಗೀತಾ-2 ಚಿತ್ರಕ್ಕೆ ಶ್ರೀಧರ್ ಸಂಭ್ರಮ ಸಂಗೀತ ಮಾಡುತ್ತಿದ್ದು, ಒಳ್ಳೆ ಹಾಡುಗಳನ್ನ ಕೊಡುವ ಚಾಲೆಂಜ್ ಸವಾಲು ಇವರ ಮೇಲೆ ಇದೆ. 


ಪ್ರಶಾಂತವಾದ ಸ್ಥಳದಲ್ಲಿಯೇ ಕುಳಿತು ಶ್ರೀಧರ್ ಸಂಭ್ರಮ ಹಾಡುಗಳನ್ನ ಕಂಪೋಸ್ ಮಾಡುತ್ತಿದ್ದಾರೆ. ಜೊತೆಗೆ ಒಳ್ಳೆ ಹಾಡುಗಳನ್ನ ಕೊಡುವ ಭರವಸೆಯನ್ನ ಮೊದಲ ಟೀಸರ್‌ನಲ್ಲಿಯೇ ಮೂಡಿಸಿದ್ದಾರೆ ಅಂತಲೂ ಹೇಳಬಹುದು. ಇನ್ನುಳಿದಂತೆ ಸಂಜು ವೆಡ್ಸ್ ಗೀತಾ-2 ಸಿನಿಮಾ ತನ್ನ ಮೊದಲ ಟೀಸರ್‌ನಿಂದಲೇ ಹೆಚ್ಚು ಗಮನ ಸೆಳೆದಿದೆ. ಇದೀಗ ಈ ಚಿತ್ರದಲ್ಲಿ ಮೈನಾ ಹೀರೋ ಚೇತನ್ ಇರ್ತಾರೆ ಅನ್ನುವ ಸುದ್ದಿಯೂ ಅತಿ ಹೆಚ್ಚು ವೈರಲ್ ಆಗುತ್ತಿದೆ.
 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.