ನವದೆಹಲಿ: ಮೇಘನಾ ಗುಲ್ಜಾರ್ ನಿರ್ದೇಶನದ 'ಚಪಾಕ್' ಚಿತ್ರದ ಫಸ್ಟ್ ಲುಕ್ ಸೋಮವಾರ ಬಿಡುಗಡೆಯಾಗಿದ್ದು, ಗುಳಿಗೆನ್ನೆ ಚೆಲುವೆ ದೀಪಿಕಾ ಪಡುಕೋಣೆ ಆಸಿಡ್ ದಾಳಿ ಸಂತ್ರಸ್ತೆಯಾಗಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 


COMMERCIAL BREAK
SCROLL TO CONTINUE READING

ಆಸಿಡ್ ದಾಳಿ ಸಂತ್ರಸ್ತೆ ಲಕ್ಷ್ಮೀ ಅಗರವಾಲ್ ಕಥೆ ಆಧಾರಿತ ಸಿನಿಮಾ ಇದಾಗಿದ್ದು, ದೀಪಿಕಾ ಪಡುಕೋಣೆ ಪ್ರಮುಖ ಪಾತ್ರದಲ್ಲಿ ಅಭಿನಯಿಸುತಿದ್ದಾರೆ. ಸದ್ಯ ದೀಪಿಕಾ ಇ ಚಿತ್ರದ ಫಸ್ಟ್ ಲುಕ್ ಅನ್ನು ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಿದ್ದು, ಮಾಲತಿ ಪಾತ್ರ ಸದಾ ನನ್ನ ಮನದಲ್ಲಿ ಉಳಿಯಲಿದೆ ಎಂದು ಬರೆದುಕೊಂಡಿದ್ದಾರೆ. ಇಂದಿನಿಂದ ಸಿನಿಮಾ ಚಿತ್ರೀಕರಣ ಆರಂಭವಾಗಲಿದ್ದು, ಹೊಸ ಲುಕ್ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗಿದೆ.



2020ರ ಜನವರಿ 10ರಂದು ಚಿತ್ರ ಬಿಡುಗಡೆಯಾಗಲಿದ್ದು, ಚಿತ್ರದ ಫಸ್ಟ್ ಲುಕ್ ನೋಡಿಯೇ ನ್ಯಾಷನಲ್ ಅವಾರ್ಡ್ ಖಚಿತ ಎಂದು ಜನ ಹೇಳ್ತಿದ್ದಾರೆ. ರಣವೀರ್​​ ಸಿಂಗ್​​ ಜೊತೆ ವಿವಾಹವಾದ ನಂತರ ದೀಪಿಕಾ ಮಾಡುತ್ತಿರೋ ಮೊದಲನೇ ಚಿತ್ರ ಇದಾಗಿದೆ. ಚಿತ್ರಕ್ಕೆ ಫಾಕ್ಸ್​ ಸ್ಟಾರ್​ ಸ್ಟುಡಿಯೋಸ್​ ಬಂಡವಾಳ ಹಾಕಿದ್ದು, ದೀಪಿಕಾ ಕೂಡ ಕೋ-ಪ್ರೊಡ್ಯೂಸರ್​ ಆಗಿದ್ದಾರೆ.