Upadhyaksha Movie Review: ಸ್ಯಾಂಡಲ್‌ವುಡ್‌ನ ಹಾಸ್ಯ ನಟ ಚಿಕ್ಕಣ್ಣಇಲ್ಲಿಯವರೆಗೆ ಅನೇಕ ಸಿನಿಮಾದಲ್ಲಿ ನಟಿಸಿ, ನಗಿಸಿ ಪ್ರೇಕ್ಷಕರ ಹೃದಯವನ್ನೂ ಗೆದ್ದಿದ್ದಾರೆ. ಇದೇ ಮೊದಲ ಬಾರಿ ಚಿಕ್ಕಣ್ಣ ಸಂಪೂರ್ಣ ಚಿತ್ರದ ಜವಾಬ್ದಾರಿಯನ್ನು ತಮ್ಮ ಹೆಗಲ ಮೇಲೆ ಹೊತ್ತು,ಉಪಾಧ್ಯಕ್ಷ ಮೂಲಕ ನಾಯಕ ನಟನಾಗಿ ಅದೃಷ್ಟ ಪರೀಕ್ಷೆಯನ್ನೂ ಮಾಡಿಕೊಂಡಿದ್ದಾರೆ. ಇನ್ನೂ ಚಿಕ್ಕಣ್ಣ ಕಾಮಿಡಿಯನ್ ನಿಂದ ನಾಯಕ ನಟನಾಗಿ ಬಡ್ತಿ ಪಡೆದಿದ್ದಾರೆ ಎಂಬ ಸುದ್ದಿ ಹೊರ ಬಂದ ದಿನದಿಂದ ಉಪಾಧ್ಯಕ್ಷನ ಮೇಲೆ ತುಸು ನಿರೀಕ್ಷೆ ಹೆಚ್ಚಾಗಿಯೇ ಇತ್ತು. 


COMMERCIAL BREAK
SCROLL TO CONTINUE READING

ನಟ ಚಿಕ್ಕಣ್ಣನ ಮೇಲೆಯೂ ಕೂಡ ಬಹುದೊಡ್ಡ ಜವಾಬ್ದಾರಿ ಇದ್ದು, ಆದರೆ ಸಮಾಧಾನದ ಸಂಗತಿ ಎಂದರೆ ನಿರೀಕ್ಷೆ ಸುಳ್ಳಾಗಲಿಲ್ಲ. ಕಾರಣ ಚಿಕ್ಕಣ್ಣ ಉಪಾಧ್ಯಕ್ಷ ಸಿನಿಮಾದಲ್ಲಿ ತಮ್ಮ ಜವಾಬ್ದಾರಿಯನ್ನ ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಕಳೆದ 10 ವರ್ಷಗಳ ಹಿಂದೆ ಬಂದಿದ್ದ 'ಅಧ್ಯಕ್ಷ' ಚಿತ್ರ ಸೂಪರ್ ಹಿಟ್ ಆಗಿದ್ದು, ಅದರಲ್ಲಿ ಶರಣ್ ಜೊತೆಗಿನ ಚಿಕ್ಕಣ್ಣನ ಕಾಮಿಡಿ ಮೋಡಿಗೆ ಪ್ರೇಕ್ಷಕರು ಫಿದಾ ಆಗಿದ್ದರು. ಹೊಟ್ಟೆ ಹುಣ್ಣಾಗುವಂತೆ ನಕ್ಕು ಸುಸ್ತಾಗಿದ್ದರು. ಆದರೆ ಅಧ್ಯಕ್ಷನ ಸರದಿ ಗೆದ್ದ ಮೇಲೆ, ಇದೀಗ ಉಪಾಧ್ಯಕ್ಷನ ಸರದಿ ಶುರುವಾಗಿದೆ.


ಇದನ್ನೂ ಓದಿ: ಸಿನಿಮಾ ಜೊತೆ ಸೀರಿಯಲ್‌ಗೂ ಎಂಟ್ರಿ ಕೊಟ್ಟ ನಟಿ ಸಪ್ತಮಿ ಗೌಡ..! ಧಾರಾವಾಹಿ ಯಾವುದು ಗೊತ್ತೆ..?


ಶರಣ್‌ ಅಭಿನಯದ ಅಧ್ಯಕ್ಷನಂತೆ ಗೆಜ್ಜೆಪುರದಲ್ಲೇ ಚಿಕ್ಕಣ್ಣನ ಉಪಾಧ್ಯಕ್ಷನ ಕಥೆ ಮುಂದುವರೆಯುತ್ತಿದ್ದು, ಮಂಡ್ಯ ಜಿಲ್ಲೆಯಲ್ಲಿರುವ ಈ ಹಳ್ಳಿಯಲ್ಲಿ ಇರುವ ಚೀ ತೂ ಸಂಘಕ್ಕೆ ನಾರಾಯಣ ಚಿಕ್ಕಣ್ಣ ಉಪಾಧ್ಯಕ್ಷ. ಅಧ್ಯಕ್ಷನಾಗುವ ಎಲ್ಲ ಅರ್ಹತೆ ಇದ್ದರೂ, ಪ್ರಸ್ತುತ ಅಧ್ಯಕ್ಷರ ಮೇಲೆ ವಿಪರೀತವಾದ ಪ್ರೀತಿಯಿಂದ ಉಪಾಧ್ಯಕ್ಷನಾಗಿಯೇ ಮುಂದುವರೆಯಲು ನಿರ್ಧಾರ ಮಾಡುವ ನಾರಾಯಣನ ಬದುಕಿಗೆ ನಾಯಕಿ ಅಂಜಲಿ ಆಗಮನದ ಬಳಿಕ ಸಂಪೂರ್ಣ ಬದಲಾಗುತ್ತೆ. ಅಲ್ಲಿಂದಾಚೆ ಏನಾಗುತ್ತೆ ಅನ್ನುವುದನ್ನ ಸಿನಿಮಾವನ್ನು ವೀಕ್ಷಿಸಿಯೇ ತಿಳಿಯಬೇಕು.


ಹಾಸ್ಯ ನಟ ಚಿಕ್ಕಣ್ಣ ಚಿತ್ರದಲ್ಲಿ ಸಂಪೂರ್ಣ  ಆವರಿಸಿಕೊಂಡಿದ್ದರಿಂದ ನಗುವಿಗೆ ಬರ ಇರಲ್ಲ. ಈ ಸಿನಿಮಾದಲ್ಲಿಯೂ ಕೂಡ ನಗುವಿನ ಅಲೆ ಇದ್ದು, ಆದರೆ ಚಿಕ್ಕಣ್ಣ ಇಲ್ಲಿ ನಗಿಸುವುದರ ಜೊತೆಯಲ್ಲಿ ಭಾವನಾತ್ಮಕ ಸನ್ನಿವೇಶಗಳಲ್ಲಿಯೂ ಅದ್ಭುತವಾಗಿ ನಟಿಸಿದ್ದು,  ಸಿನಿಮಾದ ಪ್ಲಸ್ ಪಾಯಿಂಟ್ ಆಗಿದೆ. ನಿರ್ದೇಶಕ ಅನಿಲ್ ಕುಮಾರ್ ಚಾಕ್ಯಚಕ್ಯತೆಗೆ ಹಿಡಿದ ಕೈಗನ್ನಡಿಯೂ ಆಗಿದ್ದು, ಇನ್ನೂ ಪಿ.ರವಿಶಂಕರ್, ಸಾಧು ಕೋಕಿಲಾ, ವೀಣಾ ಸುಂದರ್, ಧರ್ಮಣ್ಣ ಕಡೂರ್ ಹಾಗೂ ನಾಯಕಿ ಮಲೈಕಾ ಈ ಚಿತ್ರದ ಇನ್ನುಳಿದ ಪ್ರಮುಖ ಆಧಾರ ಸ್ತಂಭಗಳು. ಅಷ್ಟರ ಮಟ್ಟಿಗೆ ಚಿಕ್ಕಣ್ಣಗೆ ಇವರೆಲ್ಲ ಸಾಥ್ ಕೊಟ್ಟಿದ್ದು, ಇನ್ನೂ ಚಿಕ್ಕಣ್ಣ ಜೊತೆಗೆ ಮಲೈಕಾ ನಡುವಿನ ಕೆಮೆಸ್ಟ್ರೀ ಚಿತ್ರದ ಇನ್ನೊಂದು ಹೈಲೆಟ್  ಪಾಯಿಂಟ್‌ ಆಗಿದೆ.


ಇದನ್ನೂ ಓದಿ: ಪೋಟೋದಲ್ಲಿರುವ ಬಾಲಕಿ ಯಾರು ಗೊತ್ತಾ? ಸದ್ಯ ಸೌತ್‌ ಸಿನಿರಂಗದ ಪ್ರಮುಖ ನಟಿ ಈಕೆ!


ಹೊಸ ಕಥೆ ಹಾಗೂ ಹೊಸ ನಾಯಕನ ಜೊತೆ ನಿರ್ದೇಶಕ ಅನಿಲ್ ಕುಮಾರ್ ಪ್ರೇಕ್ಷಕರಿಗೆ ಹೊಸತನದ ಅನುಭವ ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ಅದರಲ್ಲಿಯೂ ಕೆ.ಜಿ.ಎಫ್ ಚಿತ್ರದ ಸನ್ನಿವೇಶದಲ್ಲಿ ಚಿಕ್ಕಣ್ಣ ಪ್ರತ್ಯಕ್ಷವಾದಾಗ, ಪ್ರೇಕ್ಷಕರು ನಕ್ಕು ನಕ್ಕು ಸುಸ್ತಾಗುವುದರಲ್ಲಿ ಅನುಮಾನ ಇಲ್ಲ. ಶೇಖರ್ ಚಂದ್ರ  ಗೆಜ್ಜೆಪೂರ ದೃಶ್ಯಗಳನ್ನು ತುಂಬಾ ಸುಂದರವಾಗಿ ಸೆರೆಹಿಡಿದಿದ್ದರೇ, ಹಾಗೆ ಅರ್ಜುನ್ ಜನ್ಯ ಸಂಗೀತ ಉಪಾಧ್ಯಕ್ಷನಿಗೆ ಸಹಕಾರಿಯಾಗಿದೆ. ಕೆ.ಎಲ್.ರಾಜಶೇಖರ್ ಸಂಭಾಷಣೆ ಉಪಾಧ್ಯಕ್ಷನ ಶಕ್ತಿಯಾಗಿದೆ. ಉಪಾಧ್ಯಕ್ಷ ಚಿತ್ರಕ್ಕೆ ಬಂಡವಾಳ ಹೂಡಿರುವ ಉಮಾಪತಿ ಶ್ರೀನಿವಾಸ್ ಸಿನಿಮಾಗೆ ಎಲ್ಲಿಯೂ ಕೊರತೆಯಾಗದಂತೆ ನೋಡಿಕೊಂಡಿದ್ದರೂ, ಸಿನಿಮಾದಲ್ಲಿ ಅಲ್ಲಲ್ಲಿ ತಪ್ಪುಗಳಿವೆ. ಆದರೆ ಆ ಲೋಪ ದೋಷಗಳನ್ನ ಚಿತ್ರತಂಡ ಮರೆಮಾಚಿಸುವಲ್ಲಿ ಯಶಸ್ವಿಯಾಗಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=xFI-KJNrEP8
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.