ಬೆಂಗಳೂರು: ತಮ್ಮ ನಟನೆಯಿಂದ ಜನಮನ ಗೆದ್ದ ನಟ ಚಿರಂಜೀವಿ ಸರ್ಜಾ ಚಿಕ್ಕ ವಯಸ್ಸಿನಲ್ಲೇ ಅವರು ಎಲ್ಲರನ್ನೂ ಬಿಟ್ಟು ಹೋಗಿದ್ದು ನೋವಿನ ವಿಷಯ. ಚಿರು ತಮ್ಮ ನಿಧನಕ್ಕೂ ಮುಂಚೆ "ರಾಜಮಾರ್ತಾಂಡ" ಚಿತ್ರದಲ್ಲಿ ನಾಯಕನಾಗಿ ಅಭಿನಯಿಸಿದ್ದರು. ಚಿತ್ರೀಕರಣ ಸಹ ಮುಕ್ತಾಯವಾಗಿತ್ತು. ಆದರೆ ಡಬ್ಬಿಂಗ್ ಮಾತ್ರ ಬಾಕಿಯಿತ್ತು‌.  ಅಣ್ಣನ ಪಾತ್ರಕ್ಕೆ ತಮ್ಮ ಧ್ರುವ ಸರ್ಜಾ ಧ್ವನಿ(ಡಬ್ಬಿಂಗ್) ನೀಡಿದರು.  ಚಿತ್ರವನ್ನು ಪೂರ್ಣ ಮಾಡಲು ನಟಿ ಮೇಘನಾರಾಜ್ ಸರ್ಜಾ ಅವರು ನೀಡಿದ ಸಹಕಾರ ಮರೆಯುವ ಹಾಗಿಲ್ಲ. 


COMMERCIAL BREAK
SCROLL TO CONTINUE READING

ಶಿವಕುಮಾರ್ ಅವರು ನಿರ್ಮಿಸಿರುವ, ರಾಮನಾರಾಯಣ್ ನಿರ್ದೇಶಿಸಿರುವ ಹಾಗೂ ಚಿರಂಜೀವಿ ಸರ್ಜಾ ನಾಯಕನಾಗಿ ನಟಿಸಿರುವ "ರಾಜ ಮಾರ್ತಾಂಡ" ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಅಣ್ಣ ಚಿರು ಎಂದರೆ ತಮ್ಮ ಧ್ರುವ ಅವರಿಗೆ ತುಂಬಾ ಪ್ರೀತಿ. ಹೀಗಾಗಿ "ರಾಜ ಮಾರ್ತಾಂಡ" ಚಿತ್ರವನ್ನು ಧ್ರುವ ಸರ್ಜಾ ಅವರ ಹುಟ್ಟುಹಬ್ಬದ ದಿನದಂದು ಬಿಡುಗಡೆ ಮಾಡಲು ನಿರ್ಮಾಪಕ ಹಾಗೂ ನಿರ್ದೇಶಕರು ನಿರ್ಧರಿಸಿದ್ದಾರೆ.


ಇದನ್ನೂ ಓದಿ: ʼವರ್ಮನ್ʼ ಈ ಮಟ್ಟಕ್ಕೆ ಬರಲು ʼಜೈಲರ್‌ʼ ರಜನಿಕಾಂತ್ ಕಾರಣ...! "ಮನಸ್ಸಿಲಾಯೋ"


ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಧರ್ಮವಿಶ್ ಹಿನ್ನೆಲೆ ಸಂಗೀತ, ಕೆ.ಗಣೇಶ್ ಛಾಯಾಗ್ರಹಣ, ವೆಂಕಟೇಶ್ ಯುಡಿವಿ ಸಂಕಲನ, ವಿನೋದ್, ಪಳನಿರಾಜ್ ಸಾಹಸ ನಿರ್ದೇಶನ ಹಾಗೂ ಭೂಷಣ್, ಹರ್ಷ ಅವರ ನೃತ್ಯ ನಿರ್ದೇಶನ ಈ ಚತ್ರಕ್ಕಿದೆ.


ಚಿರಂಜೀವಿ ಸರ್ಜಾ ಅವರಿಗೆ ನಾಯಕಿಯರಾಗಿ ದೀಪ್ತಿ‌ ಸಾತಿ, ಮೇಘಶ್ರೀ, ತ್ರಿವೇಣಿ (ಟಗರು) ಅಭಿನಯಿಸಿದ್ದಾರೆ. ಭಜರಂಗಿ ಲೋಕಿ, ಚಿಕ್ಕಣ್ಣ, ದೇವರಾಜ್, ಸುಮಿತ್ರಾ, ಶಂಕರ್ ಅಶ್ವಥ್, ವಿನೀತ್ ಕುಮಾರ್ (ಬಾಂಬೆ) ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.


ಇದನ್ನೂ ಓದಿ: ನಿಲ್ಲದ ಮುತ್ತಿನ ಮಳೆ..! ವೇದಿಕೆ ಮೇಲೆ ಮತ್ತೇ ನರೇಶ್‌ಗೆ ಕಿಸ್‌ ಕೊಟ್ಟ ಪವಿತ್ರಾ ಲೋಕೇಶ್‌ 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್.