Sirish Bhardwaj died : ಹಿರಿಯ ನಟ ಚಿರಂಜೀವಿ ಪುತ್ರಿ ಶ್ರೀಜಾ ಮತ್ತು ಸಿರೀಶ್‌ ಪ್ರೀತಿಸಿ 2007ರಲ್ಲಿ ಪೋಷಕರ ವಿರೋಧದ ನಡುವೆಯೂ ಮದುವೆಯಾಗಿದ್ದರು. ಈ ಸುದ್ದಿ ಆಗ ಮಾಧ್ಯಮಗಳಲ್ಲಿ ಸಂಚಲನ ಮೂಡಿಸಿತ್ತು. ಆದಾಗ್ಯೂ, ಅವರ ದಾಂಪತ್ಯ ಜೀವನವು ಹೆಚ್ಚು ಕಾಲ ಉಳಿಯಲಿಲ್ಲ. ಇಬ್ಬರ ನಡುವೆ ಮನಸ್ತಾಪ ಉಂಟಾಗಿ ವಿಚ್ಛೇದನ ಪಡೆದರು.


COMMERCIAL BREAK
SCROLL TO CONTINUE READING

2012ರಲ್ಲಿ ಶ್ರೀಜಾ ತನಗೆ ಕಿರುಕುಳ ನೀಡಿದ್ದಕ್ಕಾಗಿ ಸಿರೀಶ್‌ ಭಾರದ್ವಾಜ್ ವಿರುದ್ಧ ಪ್ರಕರಣ ದಾಖಲಿಸಿದ್ದು, 2014ರಲ್ಲಿ ಶ್ರೀಜಾ ವಿಚ್ಛೇದನ ಪಡೆದಿದ್ದರು. ಆ ನಂತರ ಇಬ್ಬರೂ ಬೇರೆ ಬೇರೆ ಮದುವೆಯಾಗಿ ಜೀವನದಲ್ಲಿ ನೆಲೆಯೂರಿದರು. ಸಧ್ಯ ಸಿರೀಶ್‌ ಶ್ವಾಸಕೋಶದ ಕಾಯಿಲೆಯಿಂದ ಮೃತಪಟ್ಟಿದ್ದಾರೆ ಎಂಬ ಸುದ್ದಿ ಹೊರಬಿದ್ದಿದ್ದು ಆಘಾತವನ್ನುಂಟು ಮಾಡಿದೆ.  


ಇದನ್ನೂ ಓದಿ:ಈ ಬಾರಿಯ ಬಿಗ್ ಬಾಸ್ ಮೊದಲ ಸ್ಪರ್ಧಿ ಈ ಮಹಿಳೆ... ಯಾರು ಅಂತ ಗೊತ್ತಾದ್ರೆ ಶಾಕ್‌ ಆಗ್ತೀರಾ!!


ಕೆಲ ದಿನಗಳಿಂದ ಸಿರೀಶ್ ಭಾರದ್ವಾಜ್ ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿದ್ದು, ಕಾಲಕಾಲಕ್ಕೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎನ್ನಲಾಗಿದೆ. ಅವರ ಸ್ಥಿತಿ ಹದಗೆಟ್ಟಿದ್ದು, ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗೆ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.


ವಿಚ್ಛೇದನದ ನಂತರ ಸಿರೀಶ್‌ ಮತ್ತೊಂದು ವಿವಾಹವಾಗಿದ್ದರು. ನಂತರ ಶ್ರೀಜಾ ಕಲ್ಯಾಣ್ ದೇವ್ ಎಂಬುವವರನ್ನು ಎರಡನೇ ವಿವಾಹವಾದರು. ಶ್ರೀಜಾ ಮತ್ತು ಸಿರೀಶ್‌ ಭಾದರ್ವಾಜ್ ಅವರಿಗೆ ಒಬ್ಬ ಹೆಣ್ಣು ಮಗಳಿದ್ದಾಳೆ. ಸದ್ಯ ಅವರು ಶ್ರೀಜಾ ಜೊತೆಗಿದ್ದಾರೆ. ಅಲ್ಲದೆ, ಕಲ್ಯಾಣ್ ದೇವ್ ಅವರೊಂದಿಗೆ ಶ್ರೀಜಾ ಮತ್ತೊಂದು ಮಗುವಿಗೆ ಜನ್ಮ ನೀಡಿದ್ದಾರೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.