ಚಿರಂಜೀವಿ ಮೆಗಾ ಆಕ್ಟ್, ರವಿತೇಜ ಮಾಸ್ ಡೈಲಾಗ್.. ʼವಾಲ್ಟೇರ್ ವೀರಯ್ಯʼ ಸೂಪರ್..!?
ʼಆಚಾರ್ಯʼ ಸೋಲಿನ ನಂತರ ಮೆಗಾಸ್ಟಾರ್ ಚಿರಂಜೀವಿ ʼಗಾಡ್ ಫಾದರ್ʼ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬಂದು ಗೆದ್ದಿದ್ದರು. ಈ ಬಾರಿ ರವಿತೇಜ ಜೊತೆ ವಾಲ್ಟೇರ್ ವೀರಯ್ಯ ಎಂಬ ಮಾಸ್ ಮಸಾಲಾ ಸಬ್ಜೆಕ್ಟ್ ಮೂಲಕ ಚಿರು ತೆರೆ ಮೇಲೆ ಕಮಲಾ ಮಾಡಿದ್ದಾರೆ. ಬಾಬಿ ನಿರ್ದೇಶನದ, ಶೃತಿ ಹಾಸನ್ ನಾಯಕಿಯಾಗಿ ನಟಿಸಿರುವ ಈ ಚಿತ್ರ ಇಂದು (ಜನವರಿ 13) ಬಿಡುಗಡೆಯಾಗಿದ್ದು, ಅದ್ಭುತ ಪ್ರದರ್ಶನ ಕಾಣುತ್ತಿದೆ. ಟ್ರೇಲರ್ ಬಿಡುಗಡೆಯಾದಾಗ ಮಾಸ್ ಮಹಾರಾಜ ರವಿತೇಜ್ ಮತ್ತು ಮೆಗಾಸ್ಟಾರ್ ಚಿರಂಜೀವಿ ಕಾಂಬಿನೇಷನ್‌ನ ಈ ಸಿನಿಮಾದ ಮೇಲೆ ನಿರೀಕ್ಷೆಗಳು ಹೆಚ್ಚಾಗಿದ್ದವು. ಇದೀಗ ಸಿನಿಮಾ ಬಿಡುಗಡೆಯಾಗಿದ್ದು, ಪ್ರೇಕ್ಷಕರಿಗೆ ಎಷ್ಟರ ಮಟ್ಟಿಗೆ ಖುಷಿ ಕೊಟ್ಟಿದೆ ಎಂಬುದನ್ನು ವಿಮರ್ಶೆಯಲ್ಲಿ ತಿಳಿಯೋಣ.
Waltair Veerayya Movie Review : ʼಆಚಾರ್ಯʼ ಸೋಲಿನ ನಂತರ ಮೆಗಾಸ್ಟಾರ್ ಚಿರಂಜೀವಿ ʼಗಾಡ್ ಫಾದರ್ʼ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬಂದು ಗೆದ್ದಿದ್ದರು. ಈ ಬಾರಿ ರವಿತೇಜ ಜೊತೆ ವಾಲ್ಟೇರ್ ವೀರಯ್ಯ ಎಂಬ ಮಾಸ್ ಮಸಾಲಾ ಸಬ್ಜೆಕ್ಟ್ ಮೂಲಕ ಚಿರು ತೆರೆ ಮೇಲೆ ಕಮಲಾ ಮಾಡಿದ್ದಾರೆ. ಬಾಬಿ ನಿರ್ದೇಶನದ, ಶೃತಿ ಹಾಸನ್ ನಾಯಕಿಯಾಗಿ ನಟಿಸಿರುವ ಈ ಚಿತ್ರ ಇಂದು (ಜನವರಿ 13) ಬಿಡುಗಡೆಯಾಗಿದ್ದು, ಅದ್ಭುತ ಪ್ರದರ್ಶನ ಕಾಣುತ್ತಿದೆ. ಟ್ರೇಲರ್ ಬಿಡುಗಡೆಯಾದಾಗ ಮಾಸ್ ಮಹಾರಾಜ ರವಿತೇಜ್ ಮತ್ತು ಮೆಗಾಸ್ಟಾರ್ ಚಿರಂಜೀವಿ ಕಾಂಬಿನೇಷನ್‌ನ ಈ ಸಿನಿಮಾದ ಮೇಲೆ ನಿರೀಕ್ಷೆಗಳು ಹೆಚ್ಚಾಗಿದ್ದವು. ಇದೀಗ ಸಿನಿಮಾ ಬಿಡುಗಡೆಯಾಗಿದ್ದು, ಪ್ರೇಕ್ಷಕರಿಗೆ ಎಷ್ಟರ ಮಟ್ಟಿಗೆ ಖುಷಿ ಕೊಟ್ಟಿದೆ ಎಂಬುದನ್ನು ವಿಮರ್ಶೆಯಲ್ಲಿ ತಿಳಿಯೋಣ.
ವಿಶಾಖಪಟ್ಟಣದ ವಾಲ್ಟೇರ್ ಎಂಬಲ್ಲಿ ಮೀನುಗಾರರ ಗುಡಿಸಲಿನಲ್ಲಿ ವಾಸಿಸುವ ವಾಲ್ಟೇರ್ ವೀರಯ್ಯ (ಮೆಗಾಸ್ಟಾರ್ ಚಿರಂಜೀವಿ) ಇಡೀ ಗುಡಿಸಲಿಗೆ ಒಡೆಯನಿದ್ದಂತೆ. ಅವನು ಅನಾಥನಾಗಿರುತ್ತಾನೆ. ತನ್ನವರ ಹತ್ಯೆಗೆ ಸಂಬಂಧಿಸಿದಂತೆ ವೀರಯ್ಯ ಡ್ರಗ್ ಡಾನ್ ಮೇಲೆ ಸೇಡು ತೀರಿಸಿಕೊಳ್ಳಲು ಮುಂದಾಗುತ್ತಾನೆ. ಆದ್ರೆ, ಡ್ರಗ್ ಲಾರ್ಡ್ ಮಲೇಷಿಯಾದಲ್ಲಿರುವ ವಿಚಾರ ತಿಳಿದ ವೀರಯ್ಯ ಅಲ್ಲಿಗೆ ಹೋಗುತ್ತಾನೆ. ಅಲ್ಲಿ ಹೋಟೆಲ್‌ನಲ್ಲಿ ಕೆಲಸ ಮಾಡಿಕೊಂಡು ಸಂಚು ರೂಪಿಸುವಾಗ ಅದಿತಿ (ಶ್ರುತಿ ಹಾಸನ್) ಎಂಬ ಯುವತಿಯನ್ನು ಪ್ರೀತಿಸುತ್ತಾನೆ ಹೀಗೆ ಸಾಗು ಸೇಡಿನ ಕಥೆ ಹಂತ ಹಂತವಾಗಿ ರೋಚಕ ತಿರುವು ಪಡೆದುಕೊಳ್ಳುತ್ತದೆ.
ಮಲೇಷ್ಯಾದಲ್ಲಿ ಡ್ರಗ್ ದಂಧೆ ನಡೆಸುವ ಮೈಕೆಲ್ ಯಾರು ? ವಾಲ್ತೇರು ವೀರಯ್ಯ ಅನಾಥನೇ? ಅವನಿಗೆ ಯಾರೂ ಇಲ್ಲವೇ? ವೀರಯ್ಯನಿಗೆ ಅದಿತಿ ಕೊಟ್ಟ ಶಾಕ್ ಏನು? ವಾಲ್ತೇರು ವೀರಯ್ಯ ಮತ್ತು ಎಸಿಪಿ ವಿವೇಕ್ ಸಾಗರ್ ನಡುವೆ ನಡೆದಿದ್ದೇನು? ವಾಲ್ತೇರು ವೀರಯ್ಯ ಮೈಕೆಲ್‌ನನ್ನು ಏಕೆ ಗುರಿಪಡಿಸುತ್ತಾನೆ? ಈ ವಿಷಯಗಳನ್ನು ತಿಳಿದುಕೊಳ್ಳಲು ನೀವು ಪೂರ್ತಿ ಸಿನಿಮಾ ನೋಡಲೇಬೇಕು.
ವಿಶ್ಲೇಷಣೆ : ಹೇಳಿಕೊಳ್ಳುವಂತಹ ಹೊಸ ಕಥೆಯಲ್ಲ. ಮೆಗಾಸ್ಟಾರ್ ಚಿರಂಜೀವಿ ತಮ್ಮ ಮನರಂಜನೆಯ ಮೂಲಕ ಎಲ್ಲರನ್ನೂ ಮೆಚ್ಚಿಸಿದ್ದಾರೆ. ಡೈರೆಕ್ಟರ್ ಬಾಬಿ ದ್ವಿತೀಯಾರ್ಧದಲ್ಲಿಯೂ ತನ್ನ ಛಾಪು ತೋರಿಸಲು ಪ್ರಯತ್ನಿಸಿದ್ದಾರೆ. ಸೆಕೆಂಡ್ ಆಫ್‌ಗೆ ರವಿತೇಜ ಎಂಟ್ರಿ ಕೊಟ್ಟ ನಂತರ ಸಿನಿಮಾಗೆ ವೇಗ ಸಿಗುತ್ತದೆ. ಫಸ್ಟ್ ಆಫ್ ಇಂಟರೆಸ್ಟಿಂಗ್ ಆದರೆ ಎರಡನೇ ಭಾಗ ಸ್ವಲ್ಪ ಹಿಗ್ಗಿದಂತಿದೆ. ಎಲ್ಲರಿಗೂ ಗೊತ್ತಿರುವ ಕಥೆಯಾಗಿದ್ದರೂ ಕೂಡ ಫುಲ್ ಎಂಟರ್ ಟೈನ್ ಮೆಂಟ್ ಆಗಿದೆ. ಹೊಸ ಕಥೆಯಲ್ಲದಿದ್ದರೂ ಕಾಮಿಡಿ, ಡ್ಯಾನ್ಸ್, ಎಮೋಷನ್ಸ್, ಎಲ್ಲ ಕೋನಗಳನ್ನೂ ಸಮತೋಲಿತವಾಗಿ ಪ್ರೇಕ್ಷಕರ ಮುಂದೆ ಇಡುವ ಬಾಬಿ ಬಹುತೇಕ ಯಶಸ್ವಿಯಾಗಿದ್ದಾರೆ ಎಂದು ಹೇಳಬಹುದು.
ಇನ್ನು ನಟರ ವಿಚಾರಕ್ಕೆ ಬಂದ್ರೆ ಮೆಗಾಸ್ಟಾರ್ ಚಿರಂಜೀವಿ ಅವರ ಪಾತ್ರ ತುಂಬಾ ಮನರಂಜನೆ ನೀಡುತ್ತದೆ. ಚಿತ್ರದುದ್ದಕ್ಕೂ, ಅವರ ಪಾತ್ರವು ತುಂಬಾ ಹಾಸ್ಯಮಯ ರೀತಿಯಲ್ಲಿ ಚಲಿಸುತ್ತದೆ. ರವಿತೇಜ ತೆಲಂಗಾಣ ಉಚ್ಚಾರಣೆಯೊಂದಿಗೆ ಪೊಲೀಸ್ ಅಧಿಕಾರಿಯಾಗಿ ಇಂಪ್ರೆಸ್ ಮಾಡಿದ್ದಾರೆ. ಶ್ರುತಿ ಹಾಸನ್ ಕೂಡ ರಾ ಆಫೀಸರ್ ಆಗಿ ತಮ್ಮದೇ ಸ್ಟೈಲ್ ನಲ್ಲಿ ಫೈಟ್ ಮಾಡಿ ಎಲ್ಲರ ಮನಗೆದ್ದಿದ್ದಾರೆ.
ಇನ್ನು ಟೆಕ್ನಿಕಲ್ ಟೀಮ್ ವಿಚಾರಕ್ಕೆ ಬಂದ್ರೆ ನಿರ್ದೇಶಕ ಬಾಬಿ ಇಡೀ ಸಿನಿಮಾವನ್ನು ತಮ್ಮದೇ ಬ್ರಾಂಡ್ ನಲ್ಲಿ ಚಿತ್ರೀಕರಿಸಿದ್ದಾರೆ. ಅಭಿಮಾನಿ ತನ್ನ ನಾಯಕನನ್ನು ಹೇಗೆ ನೋಡಬೇಕು? ತನಗೆ ಬೇಕಾದ ರೀತಿಯಲ್ಲಿ ತೋರಿಸುತ್ತಿದ್ದೇನೆ ಎಂದು ಮೊದಲಿನಿಂದಲೂ ಹೇಳುತ್ತಿರುವ ಬಾಬಿ ಅಭಿಮಾನಿಗಳಲ್ಲಿ ಸಂತಸ ಮೂಡಿಸಿದ್ದಾರೆ. ಮೆಗಾಸ್ಟಾರ್ ಚಿರಂಜೀವಿ ಅವರ ಕಾಮಿಕ್ ಆಂಗಲ್, ಅವರ ಸಾಹಸ ಶೈಲಿ, ಅವರ ನೃತ್ಯ ಹೀಗೆ ಪ್ರತಿಯೊಂದು ಕೋನವನ್ನು ಬಳಸಿಕೊಂಡು ಪ್ರೇಕ್ಷಕರನ್ನು ರಂಜಿಸಲು ಪ್ರಯತ್ನಿಸಿದ್ದಾರೆ. ದೇವಿ ಶ್ರೀಪ್ರಸಾದ್ ಸಂಗೀತ ಸಂಯೋಜನೆಯ ಎಲ್ಲಾ ಹಾಡುಗಳು ದೃಶ್ಯ ಹಬ್ಬದಂತಿದೆ.
ಅಂತಿಮವಾಗಿ, ಒಂದು ಪದದಲ್ಲಿ ವಾಲ್ತೇರು ವೀರಯ್ಯ ಒಂದು ಶುದ್ಧ ಕಮರ್ಷಿಯಲ್ ಮಾಸ್ ಮಸಾಲಾ ಎಂಟರ್ಟೈನರ್ ಆಗಿದೆ. ರೇಟಿಂಗ್: 2.75/5 ನೀಡಬಹುದು.