ಬೆಂಗಳೂರು: ಚಂದನವನದ ಮತ್ತೊಂದು ಜೋಡಿ ಇಂದು ತಮ್ಮ ದಾಂಪತ್ಯ ಜೀವನಕ್ಕೆ ಪಾದಾರ್ಪಣೆ ಮಾಡಿದೆ. ದಶಕದ ಪ್ರೇಮ ಪಕ್ಷಿಗಳಾದ ಚಿರಂಜೀವ್ ಸರ್ಜಾ ಹಾಗೂ ಮೇಘನಾ ರಾಜ್ ನಗರದ ಅರಮನೆ ಮೈದಾನದ ವೈಟ್ ಪೆಟಲ್ಸ್ ನಲ್ಲಿ ಸಪ್ತಪದಿ ತುಳಿದರು.


COMMERCIAL BREAK
SCROLL TO CONTINUE READING


‘ಆಟಗಾರ’ ಚಿತ್ರದಲ್ಲಿ ಒಟ್ಟಿಗೆ ಅಭಿನಯಿಸಿದ್ದ ಈ ಜೋಡಿ, ಬಹುಕಾಲ ಸ್ನೇಹಿತರಾಗಿದ್ದರು. 2017ರ ಅಕ್ಟೋಬರ್ ನಲ್ಲಿ ಈ ಜೋಡಿಯ ನಿಶ್ಚಿತಾರ್ಥ ನೆರವೇರಿತ್ತು. ಮೇಘನಾ ರಾಜ್ ಕನ್ನಡ ಚಿತ್ರರಂಗದ ಹಿರಿಯ ಕಲಾವಿದರಾದ ಸುಂದರ್ ರಾಜ್-ಪ್ರಮೀಳಾ ಜೋಷಾಯ್ ಪುತ್ರಿ. ತಾಯಿ ಕ್ರಿಶ್ಚಿಯನ್ ಆಗಿರುವುದರಿಂದ ಎಪ್ರಿಲ್ 29ರಂದು ಕೋರಮಂಗಲದ ಸಂತ ಆ್ಯಂಟನಿ ಚರ್ಚ್ ನಲ್ಲಿ ರೋಮನ್ ಕ್ಯಾಥೊಲಿಕ್ ಸಂಪ್ರದಾಯದಂತೆ ಮ್ಯಾರೇಜ್ ಆಗಿದ್ದ ಜೋಡಿ, ಇಂದು ಹಿಂದೂ ಸಂಸ್ಕೃತಿಯಂತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.


ಈ ಜೋಡಿಯ ಅದ್ಧೂರಿ ಆರತಕ್ಷತೆ ಇಂದು ಸಂಜೆ 7 ಗಂಟೆಗೆ ಅರಮನೆ ಮೈದಾನದಲ್ಲಿ ನಡೆಯಲಿದೆ.