Chittara Star Awards-2023: ಅದ್ದೂರಿ ಪ್ರಶಸ್ತಿ ಪ್ರಧಾನ ಸಮಾರಂಭಕ್ಕೆ ಒಂದಾಯ್ತು ಸ್ಯಾಂಡಲ್ವುಡ್
ಕನ್ನಡದ ಜನಪ್ರಿಯ ಮಾಸಪತ್ರಿಕೆ `ಚಿತ್ತಾರ’ ಹದಿಮೂರು ವಸಂತಗಳನ್ನು ಯಶಸ್ವಿಯಾಗಿ ಪೋರೈಸಿ ಹದಿನಾಲ್ಕನೇ ವರ್ಷಕ್ಕೆ ದಾಪುಗಾಲು ಇಡುತ್ತಿದೆ. `ಚಿತ್ತಾರ’ ನಡೆದು ಬಂದ ಹಾದಿಯಲ್ಲಿ ಹಲವಾರು ಹೊಸತುಗಳಿಗೆ ಸಾಕ್ಷಿಯಾಗಿದೆ. ಅವುಗಳಲ್ಲಿ ಪ್ರಮುಖವಾದದ್ದು `ಚಿತ್ತಾರ ಸ್ಟಾರ್ ಅವಾರ್ಡ್ಸ್’ ಕೂಡ ಒಂದು.
ಬೆಂಗಳೂರು: ಕನ್ನಡದ ಜನಪ್ರಿಯ ಮಾಸಪತ್ರಿಕೆ `ಚಿತ್ತಾರ’ ಹದಿಮೂರು ವಸಂತಗಳನ್ನು ಯಶಸ್ವಿಯಾಗಿ ಪೋರೈಸಿ ಹದಿನಾಲ್ಕನೇ ವರ್ಷಕ್ಕೆ ದಾಪುಗಾಲು ಇಡುತ್ತಿದೆ. `ಚಿತ್ತಾರ’ ನಡೆದು ಬಂದ ಹಾದಿಯಲ್ಲಿ ಹಲವಾರು ಹೊಸತುಗಳಿಗೆ ಸಾಕ್ಷಿಯಾಗಿದೆ. ಅವುಗಳಲ್ಲಿ ಪ್ರಮುಖವಾದದ್ದು `ಚಿತ್ತಾರ ಸ್ಟಾರ್ ಅವಾರ್ಡ್ಸ್’ ಕೂಡ ಒಂದು.
2019ರಲ್ಲಿ ಚಿತ್ತಾರ, 10ನೇ ವರ್ಷದ ಅಂದರೆ ದಶಕದ ಸಂಭ್ರಮವನ್ನು `ಚಿತ್ತಾರ ಸ್ಟಾರ್ ಅವಾರ್ಡ್ಸ್ -2019’ ಎಂಬ ವಿನೂತನ ಪ್ರಯೋಗದಲ್ಲಿ ಯಶಸ್ವಿಯಾಗಿ, ಆ ನಂತರದ ವರ್ಷದಲ್ಲಿ ಅಂದರೆ 2021ರ ಕೋವಿಡ್ನಿಂದಾಗಿ ಕಾರ್ಯಕ್ರಮ ನಡೆದಿರಲಿಲ್ಲ.ಆದರೆ, 2022ರಲ್ಲಿ ನಡೆದ `ಚಿತ್ತಾರ ಸ್ಟಾರ್ ಅವಾರ್ಡ್ಸ್ -2022’ರ ಚಂದನವನದಲ್ಲಿ ಸಂಚಲನವನ್ನೇ ಮೂಡಿಸಿತ್ತು.ಈ ಹಿನ್ನೆಲೆಯಲ್ಲಿ, 2022ರಲ್ಲಿ ಬಿಡುಗಡೆಯಾದ ಚಲನಚಿತ್ರಗಳನ್ನು ಪಟ್ಟಿ ಮಾಡಿ, ಸಿನಿಮಾ ರಂಗದ ಪ್ರತಿಯೊಂದು ವಿಭಾಗದ ಪ್ರತಿಭೆಗಳನ್ನು ಈ ವರ್ಷವೂ ಪ್ರಶಸ್ತಿ ನೀಡಿ ಪ್ರೋತ್ಸಾಹಿಸಿ ಗೌರವಿಸುವ ಯೋಜನೆಯು ಇದಾಗಿದೆ.
ಇದನ್ನೂ ಓದಿ: Malaika arora : ವಯಸ್ಸು ಬರೀ ಸಂಖ್ಯೆ ಅಷ್ಟೇ ಅಲ್ವಾ..! ಮಲೈಕಾ ಅಂದಕ್ಕೆ ಸರಿಸಾರಿ ಯಾರು..?
`ಚಿತ್ತಾರ ಸ್ಟಾರ್ ಅವಾರ್ಡ್ಸ್-2023’ ಮೇ27 ರಂದು ಅದ್ದೂರಿಯಾಗಿ ನಡೆಯಲಿದ್ದು, ಅದಕ್ಕೂ ಮುನ್ನ ಪೂರ್ವಭಾವಿಯಾಗಿ ನಾಮನಿರ್ದೇಶನಗೊಂಡ ಪಟ್ಟಿಯನ್ನು ಸುಪ್ರಸಿದ್ಧ ನಟ-ನಟಿಯರು ನಾಳೆ ರಿವೀಲ್ ಮಾಡಲಿದ್ದಾರೆ.
ಪ್ರಶಸ್ತಿ ಆಯ್ಕೆಯನ್ನು ಅತ್ಯಂತ ಪಾರದರ್ಶಕವಾಗಿ ನಡೆಸಲಾಗುತ್ತಿದ್ದು, ಹಿರಿಯ ನಿರ್ದೇಶಕರಾದ ಸುನೀಲ್ ಕುಮಾರ್ ದೇಸಾಯಿ, ನಾಯಕ ನಟರಾದ ಸತೀಶ್ ನೀನಾಸಂ, ನಿರ್ದೇಶಕಿ ಹಾಗೂ ಬರಹಗಾರರಾದ ಸುಮನಾ ಕಿತ್ತೂರು, ಪಿ.ಆರ್.ಓ ವೆಂಕಟೇಶ್, `ಚಿತ್ತಾರ’ ಪತ್ರಿಕೆಯ ವ್ಯವಸ್ಥಾಪಕ ನಿರ್ದೇಶಕರಾದ ಶಿವಕುಮಾರ್ ಮತ್ತು `ಚಿತ್ತಾರ’ ಪತ್ರಿಕೆಯ ಉಪಸಂಪಾದಾಕರಾದ ಬಿ.ನವೀನ್ ಕೃಷ್ಣ ಜ್ಯೂರಿಯಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಇನ್ನು, ವೋಟಿಂಗ್ಗೆಂದೇ ವಿಶೇಷ ವೆಬ್ಸೈಟ್ ನಿರ್ಮಿಸಲಾಗಿದ್ದು. ಆ ಮೂಲಕ ಪ್ರೇಕ್ಷಕರು ತಮಿಷ್ಟದ ಚಿತ್ರ, ನಟ/ನಟಿ, ತಂತ್ರಜ್ಞರಿಗೆ ಆನ್ಲೈನ್ ಮೂಲಕ ವೋಟ್ ಮಾಡಬಹುದು.ಬಿತ್ತಿಪತ್ರಗಳ ಮೂಲಕವೂ ಕರ್ನಾಟಕಾದ್ಯಂತ ಶಾಲಾ-ಕಾಲೇಜು ಮತ್ತು ಪ್ರಮುಖ ಸ್ಥಳಗಳಲ್ಲಿ ವೋಟಿಂಗ್ ವ್ಯವಸ್ಥೆಯನ್ನು ಮಾಡಿ, ಅದನ್ನೂ ಆಯ್ಕೆಯಲ್ಲಿ ಪರಿಗಣನೆಗೆ ತೆಗೆದುಕೊಳ್ಳಲಾಗುವುದು.
ಇದನ್ನೂ ಓದಿ: ʼಅಚಾತುರ್ಯದಿಂದ ನಿಮಗೆ ನೋವು ಮಾಡಿದ್ದೇನೆʼ..! ಮಾಧ್ಯಮಗಳಿಗೆ ʼಡಿಬಾಸ್ʼ ಬಹಿರಂಗ ಪತ್ರ
ಚಿತ್ರರಂಗದ ಹೆಮ್ಮೆಯ ಕಲಾವಿದರಾಗಿ, ತಂತ್ರಜ್ಞರಾಗಿ, ನಿರ್ಮಾಪಕರಾಗಿ ಚಿತ್ರರಂಗದ ಏಳಿಗೆಯಲ್ಲಿ ಸಾಕಷ್ಟು ಜನ ಸಾಧನೆ ಮೆರೆದಿದ್ದಾರೆ. ತಮ್ಮ ಕೆಲಸದ ಮೂಲಕ ನಾಡಿನ ಹೆಮ್ಮೆಯ ಪ್ರತಿಭೆಗಳಾಗಿ ಹೊರ ಹೊಮ್ಮಿದ್ದಾರೆ. ಇಂತಹ ಪ್ರತಿಭೆಗಳನ್ನು ಗೌರವಿಸುವುದು, ಪ್ರೋತ್ಸಾಹಿಸುವುದು ನಮ್ಮ ಆದ್ಯ ಕರ್ತವ್ಯ, ಈ ನಿಟ್ಟಿನಲ್ಲಿ, `ಚಿತ್ತಾರ ಸ್ಟಾರ್ ಅವಾರ್ಡ್ಸ್-2023’ಕ್ಕೆ 2022ನೇ ಸಾಲಿನಲ್ಲಿ ಬಿಡುಗಡೆಯಾದ ಚಿತ್ರಗಳನ್ನು ಆಧರಿಸಿ ನಾಮನಿರ್ದೇಶನಗೊಂಡ ಚಿತ್ರಗಳು, ತಂತ್ರಜ್ಞರು ಮತ್ತು ನಟ/ನಟಿಯರ ಪಟ್ಟಿಯನ್ನು ಅನಾವರಣಗೊಳಿಸಲು ಚಂದನವನದ ಗಣ್ಯರು ಸಿದ್ಧವಾಗಿದ್ದಾರೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.