Choo Mantar Release Date: ಸ್ಯಾಂಡಲ್‌ವುಡ್‌ ಹಾಸ್ಯನಟ ಶರಣ್‌ ಅಭಿನಯದ ʻಛೂ ಮಂತರ್‌ʼ ಸಿನಿಮಾದ ರಿಲೀಸ್‌ ಡೇಟ್‌ ಫಿಕ್ಸ್‌ ಆಗಿದೆ. ಕರ್ವ ಚಿತ್ರದ ಖ್ಯಾತ ಡೈರೆಕ್ಟರ್‌  ನವನೀತ್ ನಿರ್ದೇಶನದ ಹಾಗೂ ನಟ ಶರಣ್‌ ಕಾಂಬಿನೇಷನ್‌ನ ಈ ಚಿತ್ರದ ಇದೇ ಮೇ 10 ರಂದು ರಾಜ್ಯಾದ್ಯಂತ ಬೆಳ್ಳಿತೆರೆಯ ಮೇಲೆ ಅಬ್ಬರಿಸಲಿದೆ. ಈಗಾಗಲೇ ಈ ಸಿನಿಮಾದ ಟೀಸರ್‌ ರಿಲೀಸ್‌ ಆಗಿ ಮನೆಮಾತಾಗಿದೆ. 


COMMERCIAL BREAK
SCROLL TO CONTINUE READING

ಇನ್ನೂ ʻಛೂ ಮಂತರ್‌ʼ ಚಿತ್ರದ ಟ್ರೇಲರ್‌ ಇದೇ ಏಪ್ರಿಲ್‌ ಏಪ್ರಿಲ್ 19 ಶುಕ್ರವಾರದಂದು ಆನಂದ್‌ ಆಡಿಯೋ ಯೂಟ್ಯೂಬ್‌ ಚಾನೆಲ್‌ನಲ್ಲಿ ರಿಲೀಸ್‌ ಆಗಲಿದ್ದು, ಇನ್ನೂ ಈ ಸಿನಿಮಾ ಮುಂದಿನ ತಿಂಗಳು 10 ಶುಕ್ರವಾರದಂದು ಬೆಳ್ಳಿತೆರೆ ಮೇಲೆ ರಾರಾಜಿಸಲು ಸಜ್ಜಾಗುತ್ತಿದೆ. ಈ ಚಿತ್ರದಲ್ಲಿ ನಟ ಶರಣ್‌ ಪಾತ್ರ ಇದಕ್ಕೂ ಮುಂಚೆ ಮಾಡಿರುವ ಸಿನಿಮಾಗಳಿಗಿಂತ ಬೇರೆ ರೀತಿಯಲ್ಲಿ ವಿಭಿನ್ನವಾಗಿದೆ.


ಇದನ್ನೂ ಓದಿ: Uttarakaanda: ಉತ್ತರಕಾಂಡಕ್ಕೆ ಸ್ಯಾಂಡಲ್‌ವುಡ್‌ ಬೋಲ್ಡ್‌ ಬ್ಯೂಟಿ ಎಂಟೀ:‌ ಚೈತ್ರಾ ಆಚಾರ್ ನಯಾ ಲುಕ್‌ ರಿವೀಲ್!


ʻಛೂ ಮಂತರ್‌ʼ ಇದೊಂದು ಹಾರರ್‌ ಜಾನರ್‌ ಚಿತ್ರವಾಗಿದ್ದು, ಇದು ಬೇರೆ ಹಾರರ್‌ ಸಿನಿಮಾಗಳಿಗಿಂತ ವಿಭಿನ್ನವಾಗಿದೆ. ಈ ಚಿತ್ರದ ಮೇಕಿಂಗ್‌ ವಿಡಿಯೋ ನೋಡಿದರೇ  ಹಾಲಿವುಡ್ ಸಿನಿಮಾ ನೋಡಿದ ಅನುಭವ ಭಾಸವಾಗುತ್ತದೆ. ಈ ಚಿತ್ರದಲ್ಲಿ ನಟ ಶರಣ್‌ ಜೊತೆಗ ಮೇಘನಾ ಗಾಂವ್ಕರ್, ಅದಿತಿ ಪ್ರಭುದೇವ,  ಪ್ರಭು ಮುಂಡ್ಕರ್ , ಚಿಕ್ಕಣ್ಣ ಮುಖ್ಯ ಪಾತ್ರದಲ್ಲಿ ಬಣ್ಣ ಹಚ್ಚುತ್ತಿದ್ದಾರೆ.


ತರುಣ್ ಸ್ಟುಡಿಯೋಸ್ ಲಾಂಛನದಲ್ಲಿ ಮಾನಸ ತರುಣ್ ಹಾಗೂ ತರುಣ್ ಶಿವಪ್ಪ ನಿರ್ಮಿಸಿರುವ ʻಛೂ ಮಂತರ್‌ʼ ಸಿನಿಮಾದ  ದೃಶ್ಯಗಳನ್ನು ಛಾಯಾಗ್ರಹಕ ಅನುಪ್ ಕಟ್ಟುಕರನ್ ಸೆರೆಹಿಡಿದಿದ್ದಾರೆ. ಹಾಗೆಯೇ ಈ ಚಿತ್ರದ ಹಾಡುಗಳಿಗೆ ಮ್ಯೂಸಿಕ್‌ ಕಂಪೋಸರ್‌ ಹಾಗೂ ರಾಪರ್‌ ಚಂದನ್ ಶೆಟ್ಟಿ ಸಂಗೀತ ನಿರ್ದೇಶನ ಮಾಡಿದರೇ, ಅವಿನಾಶ್ ಬಸುತ್ಕರ್ ಹಿನ್ನೆಲೆ ಸಂಗೀತ ಕೊಟ್ಟಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.