ಬೆಂಗಳೂರು: ನಟ ವಿಷ್ಣುವರ್ಧನ್ ಸ್ಮಾರಕ ನಿರ್ಮಾಣ ವಿಚಾರಕ್ಕೆ ಸಂಬಂಧಿಸಿದಂತೆ ಸರ್ಕಾರವನ್ನು ತೀವ್ರ ಟೀಕೆ ಮಾಡಿದ್ದ ವಿಷ್ಣುವರ್ಧನ್ ಅಳಿಯ ಅನಿರುದ್ಧ್ ಮಾತಿಗೆ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅಸಮಧಾನ ಹೊರ ಹಾಕಿದ್ದಾರೆ. 


COMMERCIAL BREAK
SCROLL TO CONTINUE READING

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ನಟ ವಿಷ್ಣುವರ್ಧನ್ ಅವರ ಅಳಿಯ ಅನಿರುದ್ಧ್ ಮಾತಿನಿಂದ ನಂಗೆ ತುಂಬಾ ನೋವಾಗಿದೆ. ಸರ್ಕಾರದ ವಿರುದ್ಧ ಉಡಾಫೆಯ ಮಾತುಗಳನ್ನು ಮಾಡಿದ್ದಾರೆ. ಅನಿರುದ್ಧ್ ಅವರು ಮಾತನಾಡುವಾಗ ಪದ ಬಳಕೆಯ ಬಗ್ಗೆ ಗಾಂಭೀರ್ಯತೆ ಬೆಳೆಸಿಕೊಳ್ಳಬೇಕು" ಎಂದು ತಿರುಗೇಟು ನೀಡಿದ್ದಾರೆ. 


"ಅನಿರುದ್ಧ್ ಅವರು ವಿಷ್ಣುವರ್ಧನ್ ಅವರು ನಿಧನರಾಗಿ 10 ವರ್ಷಗಳಾದರೂ ಸ್ಮಾರಕ ನಿರ್ಮಾಣ ಮಾಡಿಲ್ಲ. ನಿಜವಾಗಲೂ ಸರ್ಕರಕೆಕ್ ಮಾಣ ಮರ್ಯಾದೆ ಇದೆಯೇ? ಉಡಾಫೆ ಸಿಎಂ ಎಂದೆಲ್ಲಾ ಮಾತನಾಡಿದ್ದಾರೆ. ನಿಜ ಹೇಳಬೇಕೆಂದರೆ ವಿಷ್ಣು ವರ್ಧನ್‌ ಅವರು ನಿಧನರಾದಾಗ ನಾನು ಅಧಿಕಾರದಲ್ಲಿರಲಿಲ್ಲ. 10 ವರ್ಷಗಳ ಹಿಂದೆ ಮೈಸೂರಿನಿಂದ ವಿಷ್ಣುವರ್ಧನ್‌ ಅವರ ಪಾರ್ಥೀವ ಶರೀರ ತರುತ್ತಿದ್ದರು, ನಾನು ಅವರ ಮನೆಗೆ ಹೋಗಿ ಅಂತಿಮ ದರ್ಶನ ಪಡೆದೆ. ಶಿವಾರಾಂ ಅವರ ಬಳಿ ಕೇಳಿದೆ ಎಲ್ಲಿ ಅಂತ್ಯಕ್ರಿಯೆ ಮಾಡುತ್ತೀರಿ ಎಂದು. ಬನಶಂಕರಿಯ ಚಿತಾಗಾರದಲ್ಲಿ ಅಂತ್ಯಕ್ರಿಯೆ ಮಾಡಲು ತೀರ್ಮಾನ ಮಾಡಿದ್ದರು ಎಂದು ಸಿಎಂ ವಿವರಣೆ ನೀಡಿದರು.


ವಿಷ್ಣುವರ್ಧನ್ ಮನೆಯವರೇ ಬನಶಂಕರಿಯಲ್ಲಿ ಅಂತ್ಯ ಸಂಸ್ಕಾರಕ್ಕೆ ತೀರ್ಮಾನಿಸಿದ್ದರೂ ಸಹ ಆಗ ನಾನೇ ರಾಜ್‌ಕುಮಾರ್‌ ಅವರ ಬಳಿಕ ಅವರದ್ದೇ ಅಭಿಮಾನಿಗಳನ್ನು ವಿಷ್ಣುವರ್ಧನ್ ಗಳಿಸಿದ್ದಾರೆ. ಹಾಗಾಗಿ ಬನಶಂಕರಿಯಲ್ಲಿ ಮಾಡಿದರೆ ತಪ್ಪಾಗುತ್ತದೆ ಅಂತ ನಾನೇ ಸಲಹೆ ಕೊಟ್ಟು ಅಂಬರೀಶ್‌ ಅವರಿಗೂ ಕರೆ ಮಾಡಿ ಮಾತನಾಡಿದ್ದೆ. ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಖುದ್ದು ನಾನೇ ಫೋನ್‌ ಮಾಡಿ ವಿಷ್ಣುವರ್ಧನ್‌ ಅವರಿಗೆ ಸರ್ಕಾರದಿಂದ ಎಲ್ಲಾದರೂ ಸಕಲ ಗೌರವ ಕೊಡಬೇಕಾಗಿದೆ ಮನವಿ ಮಾಡಿದ್ದೆ. ಬಳಿಕ ಅಂದಿನ ಮುಖ್ಯ ಕಾರ್ಯದರ್ಶಿ ಎಸ್‌.ವಿ.ರಂಗನಾಥ್‌ ಅವರ ಬಳಿಯೂ  ಚರ್ಚೆ ಮಾಡಿದ್ದೆ ಎಂದು ತಿಳಿಸಿದರು. 


ಮುಂದುವರೆದು ಮಾತನಾಡಿದ ಅವರು, ನಮ್ಮ ಮೇಲೆ ದಬ್ಬಾಳಿಕೆ ಮಾಡಿದ್ರೆ ಆಗುವುದಿಲ್ಲ. ನಮ್ಮದು ಶಾಂತಿಪ್ರಿಯ ಸಂಸ್ಕೃತಿ, ನಮ್ಮಿಂದ ಏನಾದರೂ ತಪ್ಪಾಗಿದೆಯಾ ? ನಾನು ಕರ್ತವ್ಯ ನಿರ್ವಹಣೆ ಮಾಡಿದ್ದೀನಿ ಅಷ್ಟೇ. ರಾಜ್ಯದ ಜನತೆಯೂ ತಿಳಿದು ಕೊಳ್ಳಬೇಕಾಗುತ್ತದೆ. ಹಿಂದಿನ ವಿಚಾರ ಏನೇ ಇರಲಿ, ಈಗ ವಿಷ್ಣುವರ್ಧನ್ ಸ್ಮಾರಕ ನಿರ್ಮಾಣದ ಬಗ್ಗೆ ಚರ್ಚೆ ಮಾಡಿ ಅಂತಿಮ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.