ಬೆಂಗಳೂರು : ಕರ್ನಾಟಕ ಚಲಚಿತ್ರರಂಗ ಆಯೋಜಿಸಿರುವ ಕರ್ನಾಟಕ ಚಲನಚಿತ್ರ ಕಪ್ ಕ್ರಿಕೆಟ್ ಪಂದ್ಯಾವಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಚಾಲನೆ ನೀಡಿದರು. 


COMMERCIAL BREAK
SCROLL TO CONTINUE READING

ಇಂದು ಬೆಳಿಗ್ಗೆ ನೆಲಮಂಗಲದ ಬಳಿ ಇರುವ ಆದಿತ್ಯ ಮೈದಾನದಲ್ಲಿ ಪಂದ್ಯಾವಳಿ ಉದ್ಘಾಟಿಸಿದ ಮಾತನಾಡಿದ ಸಿದ್ದರಾಮಯ್ಯ ಅವರು, ಜನರಲ್ಲಿ ಕ್ರೀಡಾ ಮನೋಭಾವನೆ ಬೆಳೆಯಬೇಕು. ಕ್ರೀಡೆಗೆ ಯಾವುದೇ ಜಾತಿ ಧರ್ಮದ ಅಡ್ಡಿಯಿಲ್ಲ. ಜಾತ್ಯಾತೀತವಾಗಿ ಬೆಳೆಯ ಬೇಕು ಎಂದರೆ ನೀವು ಮೊದಲು ಕ್ರೀಡಾಪಟು ಆಗಿರಬೇಕು. ಎಲ್ಲರೂ ಸೋಲು ಗೆಲುವನ್ನು ಸಮನಾಗಿ ಸ್ವೀಕರಿಸಿ ಎಂದು ಹೇಳಿ ಕ್ರೀಡಾಪಟುಗಳಿಗೆ ಶುಭ ಹಾರೈಸಿದರು. 


ನೆಲಮಂಗಲದ ಆದಿತ್ಯ ಮೈದಾನದಲ್ಲಿ ಇಂದು 4 ತಂಡಗಳ ನಡುವೆ 2 ಪಂದ್ಯ ನಡೆಯಲಿದ್ದು, ನಾಳೆ ಮತ್ತೆರೆಡು ಪಂದ್ಯಗಳು ನಡೆಯಲಿವೆ. ಅಲ್ಲದೆ, ನಾಳೆಯೇ ಫೈನಲ್‌ ಪಂದ್ಯಾವಳಿಯೂ ನಡೆಯಲಿದೆ. 


ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು, ನಿರ್ಮಾಪಕರ ಸಂಘದ ಅಧ್ಯಕ್ಷ ಮುನಿರತ್ನ, ಅಕಾಡೆಮಿ ಅಧ್ಯಕ್ಷ ಎಸ್‌.ವಿ ರಾಜೇಂದ್ರ ಸಿಂಗ್‌ ಬಾಬು, ಕಿಚ್ಚ ಸುದೀಪ್‌, ಡಾ.ಶಿವರಾಜ್‌ಕುಮಾರ್‌,  ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌, ನವರಸ ನಾಯಕ ಜಗ್ಗೇಶ್, ರಾಕಿಂಗ್ ಸ್ಟಾರ್ ಯಶ್, ಕಿರಿಕ್ ಪಾರ್ಟಿ ಖ್ಯಾತಿಯ ರಕ್ಷಿತ್ ಶೆಟ್ಟಿ ಸೇರಿದಂತೆ ಅನೇಕ ನಟರು ಈ ಸಂದರ್ಭದಲ್ಲಿ ಹಾಜರಿದ್ದರು.


ಈ ಸಂದರ್ಭದಲ್ಲಿ ಜಗ್ಗೇಶ್ ಅವರು ತಮ್ಮ ಮೊಬೈಲ್'ನಲ್ಲಿ ಸೆರೆಹಿಡಿದಿದ್ದಾರೆ.