ಬೆಂಗಳೂರು: ಕಲರ್ಸ್‌ ಕನ್ನಡದ ಸೂಪರ್‌ ಹಿಟ್‌ ಶೋ ಡ್ಯಾನ್ಸಿಂಗ್‌ ಚಾಂಪಿಯನ್‌ ಫಿನಾಲೆ ನಿನ್ನೆ ಅದ್ದೂರಿಗೆಯಾಗಿ ನೆನೆಡಿದೆ..ಕಂಟೆಸ್ಟೆಂಟ್‌ಗಳ ನಡುವೆ ತುಂಬಾನೆ ಕಾಂಪಿಟೇಶನ್‌ ಇದ್ದು ವಿಶೇಷ ಜೋಡಿಯೊಂದು ಫಿನಾಲೆ ಗೆದ್ದಿದೆ ಆ ಬಗ್ಗೆ ಇಲ್ಲಿದೆ ಡೀಟೈಲ್ಸ್‌..


COMMERCIAL BREAK
SCROLL TO CONTINUE READING

ಕಲರ್ಸ್ ಕನ್ನಡ ವಾಹಿನಿಯ ಜನಪ್ರಿಯ ಟಿವಿ ಶೋ ‘ಡಾನ್ಸಿಂಗ್ ಚಾಂಪಿಯನ್’ ಫಿನಾಲೆ ಕಾರ್ಯಕ್ರಮ ಮುಗಿದಿದ್ದು, ಚಾಂಪಿಯನ್‌ ಟ್ರೋಫಿಯನ್ನು ಅನ್ಮೋಲ್ ಹಾಗೂ ಆದಿತ್ಯ ಪಡೆದಿದ್ದಾರೆ. .ವಿಶೇಷ ಅಂದ್ರೆ ಕೊನೆಯ ಸುತ್ತು ತಲುಪಿದ ಐದು ಜೋಡಿಗಳಲ್ಲಿ ಒಂದಕ್ಕೆ  ಈ ಸಲದ 'ಡಾನ್ಸಿಂಗ್ ಚಾಂಪಿಯನ್' ಟ್ರೋಫಿಯ ಜೊತೆಗೆ 5 ಲಕ್ಷ ರೂ ಬಹುಮಾನವೂ ದೊರಕಿದೆ. 


ಇನ್ನೂ  ಫಿನಾಲೆ ಹಲವು ವಿಶೇಷಗಳನ್ನು ಹೊಂದಿತ್ತು. ಅಂದಹಾಗೆ ಅನ್ಮೋಲ್ ಅವರು ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್ ಸಿನಿಮಾದಲ್ಲಿ ಯಶ್ ಅವರ ಬಾಲ್ಯದ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಡ್ಯಾನ್ಸಿಂಗ್‌ ಚಾಂಪಿಯನ್‌ನಲ್ಲಿ ಅನ್‌ಮೋಲ್‌ಗೆ ಸಾಥ್‌ ಕೊಟ್ಟಿದ್ದು ಆದಿತ್ಯ.. ಪ್ರತಿ ಸುತ್ತಿನಲ್ಲೂ ಈ ಜೋಡಿ ಉತ್ತಮ ಪ್ರದರ್ಶನ ನೀಡಿಗೆ ಪ್ರೇಕ್ಷಕರನ್ನ ರಂಜಿಸಿತ್ತು.. 


ಇನ್ನೂ ಕೊನೆಯ ಹಂತ ತಲುಪಿದ ಜೋಡಿಗಳೆಂದ್ರೆ ಚಂದನಾ-ಅಕ್ಷತಾ, ಅದಿತಿ-ಸಾಗರ್, ಆರ್ಜುನ್-ರಾಣಿ, ಆರಾಧ್ಯಾ-ನಿವೇದಿತಾ ಮತ್ತು ಅನ್ಮೋಲ್-ಆದಿತ್ಯ... 


ಇದನ್ನೂ ಓದಿ: ವಿಕ್ರಮ್ ಚಿತ್ರದ ಪ್ರಚಾರ: ರಜನಿಕಾಂತ್ ಅವರನ್ನು ಭೇಟಿಯಾದ ಕಮಲ್ ಹಾಸನ್


ಈ ಜೋಡಿಗಳಲ್ಲಿ ಚಂದನಾ ಹಾಗೂ ಅಕ್ಷತಾ ಸೇಕೆಂಡ್‌ ರನ್ನರಪ್‌ ಸ್ತಾನವನ್ನು ಗಿಟ್ಟಿಸಿಕೊಂಡ್ರು.. ಹಾಗೂ ಪುಟ್ಟು ಮಕ್ಕಳಾದ ಆರಾಧ್ಯಾ-ನಿವೇದಿತಾ ಫಸ್ಟ್‌ ರನ್ನರ್‌ ಆಗಿ ಹೊರಹೊಮ್ಮಿದ್ರೂ ಹಾಗೂ ಅನ್ಮೋಲ್-ಆದಿತ್ಯ...  ‘ಡಾನ್ಸಿಂಗ್ ಚಾಂಪಿಯನ್’ಟ್ರೋಫಿಯನ್ನ ತಮದಾಗಿಸಿಕೊಂಡ್ರು.. 


ಈ ಬಾರಿ ಡ್ಯಾಸಿಂಗ್‌ ಚಾಂಪಿಯನ್‌ ಫಿನಾಲೆ ಸಾಕಷ್ಟು ವಿಶೇಷತೆಗಳನ್ನ ಹೊತ್ತು ತಂದಿತ್ತು.. ಹೌದು ನಟ ಪುನೀತ್ ರಾಜ್ ಕುಮಾರ್ ಅವರ ನೆನಪಿಗೆ ಅರ್ಪಿಸಲಾದ ಫಿನಾಲೆ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಆಗಮಿಸಿ, ಚಾಂಪಿಯನ್ ಶಿಪ್ ಟ್ರೋಫಿಯನ್ನು ಅವರು ಅನಾವರಣಗೊಳಿಸಿದರು. ಈ ಸಂದರ್ಭದಲ್ಲಿ ಅಶ್ವಿನಿ ಮಾತನಾಡಿ, 'ಎಲ್ಲರಿಗೂ ಒಳ್ಳೆಯದಾಗಲಿ' ಎಂದಿದ್ದಾರೆ. ನಟ ಧ್ರುವ ಸರ್ಜಾ, ಪ್ರಶಸ್ತಿ ಪ್ರದಾನ ಮಾಡಲು ಆಗಮಿಸಿ, 'ಪೊಗರು' ಸಿನಿಮಾ ಹಾಡಿಗೆ ಕುಣಿದರು. ಈ ಇಬ್ಬರ ಉಪಸ್ಥಿತಿಯಿಂದ ಫಿನಾಲೆಯ ಸಂಭ್ರಮ ಹೆಚ್ಚಿತ್ತು.


ಇನ್ನೂ ಡಾನ್ಸಿಂಗ್ ಚಾಂಪಿಯನ್'ನ ಮೂವರು ತೀರ್ಪುಗಾರರಲ್ಲಿ ಒಬ್ಬರಾದ ನಟ ವಿಜಯ ರಾಘವೇಂದ್ರ ಮಾತನಾಡಿ, “ಈ ಶೋ ಆರಂಭದಿಂದಲೂ ಅತ್ಯಂತ ಸ್ಪರ್ಧಾತ್ಮಕವಾಗಿತ್ತು" ಎಂದು ಚಾಂಪಿಯನ್ ಶೋನ ವಿಜೇತರ ಹೆಸರನ್ನು ತಿಳಿಸುವ ಮೊದಲು ಹೇಳಿದರು.


ಇದನ್ನೂ ಓದಿ: ZEE5 ಟಿಟಿಯಲ್ಲಿಯೂ ಹೊಸ ದಾಖಲೆ ಬರೆದ 'RRR..!


ಇನ್ನೂ ನಟಿ ಮೇಘನಾ ರಾಜ್, ಮಯೂರಿ ಉಪಾಧ್ಯ ಹಾಗೂ ವಿಜಯ್ ರಾಘವೇಂದ್ರ ಈ ಶೋನ ಜಡ್ಜ್‌ಗಳಾಗಿ ತಮ್ಮಗೆ ನೀಡಿದ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ.. ಹಾಗೂ ಟಾಕಿಂಗ್‌ ಸ್ಟಾರ್‌ ಸೃಜನ್ ಲೋಕೇಶ್ ಅವರು ಲೋಕೇಶ್  ‘ಡಾನ್ಸಿಂಗ್ ಚಾಂಪಿಯನ್’ ಬಂಡವಾಳ ಹೂಡಿದ್ದಾರೆ. ಇನ್ನೂ ಈ ಶೋನ ಹೋಸ್ಟ್‌ ಆಗಿ ಅಕುಲ್‌ ಬಾಲಾಗಿ ಅದ್ಬುತವಾಗಿ ಕಾರ್ಯಕ್ರಮ ನೆಡೆಸಿಕೊಟ್ಟಿದ್ದಾರೆ..


ಒಟ್ಟಿನಲ್ಲಿ ಈ ಬಾರಿಯ ಡ್ಯಾನಿಂಗ್‌ ಚಾಂಪಿಯನ್‌ ವಿಶೇಷ ರೀತಿಯಲ್ಲಿ ಮೂಡಿ ಬಂದು ಪ್ರೇಕ್ಷಕರನ್ನ ರಂಜಿಸುವಲ್ಲಿ ಯಶಸ್ವಿಯಾಗಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.