ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗಲಿದೆ ಕಾಮಿಡಿ ಎಂಟರ್ಟೈನರ್ ಸಿನಿಮಾ `ಡೇರ್ ಡೆವಿಲ್ ಮುಸ್ತಾಫಾ`..!
Daredevil Musthafa : ಕನ್ನಡಿಗರ ಅಚ್ಚು ಮೆಚ್ಚಿನ ಸ್ಟಾರ್ ಸುವರ್ಣ ವಾಹಿನಿಯು ದಿನದಿಂದ ದಿನಕ್ಕೆ ವಿಭಿನ್ನ ರೀತಿಯ ಕಾರ್ಯಕ್ರಮಗಳನ್ನು ನೀಡುತ್ತಿದ್ದು ಇದೀಗ ಸುವರ್ಣ ವರ್ಲ್ಡ್ ಪ್ರೀಮಿಯರ್ `ಡೇರ್ ಡೆವಿಲ್ ಮುಸ್ತಾಫಾ` ಸಿನಿಮಾವನ್ನು ಪ್ರಸಾರ ಮಾಡಲು ಸಜ್ಜಾಗಿದೆ.
'ಡೇರ್ ಡೆವಿಲ್ ಮುಸ್ತಾಫಾ' ಇದು ಕೆ ಪಿ ಪೂರ್ಣಚಂದ್ರ ತೇಜಸ್ವಿ ಅವರ ಸಣ್ಣ ಕಥೆ ಆಧಾರಿತ ಸಿನಿಮಾ. ಕರ್ನಾಟಕದ ಚಿಕ್ಕಮಗಳೂರಿನ ಚಿಕ್ಕ ಪಟ್ಟಣವಾದ ಅಬಚೂರಿನಲ್ಲಿ ರಾಮಾನುಜ ಅಯ್ಯಂಗಾರ್ ಮತ್ತು ಅವನ ಗೆಳೆಯರ ಗುಂಪು ಶಾಲೆಯನ್ನು ಮುಗಿಸಿ ಕಾಲೇಜಿಗೆ ಸೇರಿರುತ್ತಾರೆ.
ಅದೇ ಕಾಲೇಜಿಗೆ ಎಂಟ್ರಿ ಕೊಡ್ತಾನೆ ನಮ್ ಕಥಾ ನಾಯಕ ಮುಸ್ತಫಾ. ಅಲ್ಲಿಂದ ಈ ಕತೆ ಆರಂಭಗೊಳ್ಳುತ್ತದೆ. ಮುಸ್ತಫಾ ಕಾಲೇಜಿಗೆ ಸೇರುವವರೆಗೂ ಎಲ್ಲಾನು ಚೆನ್ನಾಗಿರುತ್ತೆ ಆಮೇಲೆ ಧರ್ಮಗಳ ಮಧ್ಯೆ ಕಿರಿಕ್ ಶುರುವಾಗುತ್ತೆ, ಆ ಕಿರಿಕ್ ಯಾಕೆ ನಡೆಯುತ್ತದೆ, ಏನು ಕಾರಣ? ಎಂಬ ಕುತೂಹಲಕ್ಕೆ ಉತ್ತರ ಸಿನಿಮಾದಲ್ಲಿ ಸಿಗಲಿದೆ.
ಇದನ್ನೂ ಓದಿ-Jawan: ಶಾರುಖ್ ಸಿನಿಮಾ ಪೈರೇಟೆಡ್ ಕಂಟೆಂಟ್ ಮಾರಾಟ ಮಾಡುವವರ ವಿರುದ್ಧ ದೂರು ದಾಖಲು!!
ಇದೊಂದು ಕಾಲೇಜು ದಿನಗಳನ್ನು ಮೆಲುಕು ಹಾಕುವಂತಹ ಚಿತ್ರವಾಗಿದ್ದು, ಸಹಪಾಠಿಗಳ ನಡುವೆ ನಡೆಯುವ ಸಣ್ಣ ಪುಟ್ಟ ಜಗಳ, ಹಾಗು ಧರ್ಮಕ್ಕೂ ಮಿಗಿಲಾದದ್ದು ಫ್ರೆಂಡ್ ಶಿಪ್ ಎಂಬ ಸಾರಾಂಶವನ್ನು ಸಮಾಜಕ್ಕೆ ಸಾರುವಂತಹ ಅದ್ಭುತ ಚಿತ್ರ ಇದಾಗಿದೆ. ಜೊತೆಗೆ ಸಕತ್ ಕಾಮಿಡಿ ತುಣುಕುಗಳನ್ನು ಹೊಂದಿರುವ ಈ ಸಿನಿಮಾ ನೋಡುಗರಿಗೆ ಮನರಂಜನೆಯ ಮಹಾ ಮಳೆಯನ್ನೇ ಸುರಿಸಲಿದೆ.
ಡಾಲಿ ಧನಂಜಯ್ ತಮ್ಮ 'ಡಾಲಿ ಪಿಕ್ಚರ್ಸ್' ಎಂಬ ಸಂಸ್ಥೆಯಿಂದ ಈ ಸಿನಿಮಾವನ್ನು ಅರ್ಪಿಸಿದ್ದು, ಈ ಸಿನಿಮಾದಲ್ಲಿ ಮುಸ್ತಾಫನಾಗಿ ಶಿಶಿರ್ ಹಾಗೂ ಅಯ್ಯಂಗಾರಿ ಪಾತ್ರದಲ್ಲಿ ಆದಿತ್ಯ ಪರಕಾಯ ಪ್ರವೇಶ ಮಾಡಿದಂತೆ ನಟಿಸಿದ್ದಾರೆ. ಇನ್ನು ನಟ ನಾಗಭೂಷಣ್ ಕನ್ನಡ ಪ್ರಾಧ್ಯಾಪಕರಾಗಿ ಪ್ರೇಕ್ಷಕರನ್ನು ನಕ್ಕು ನಗಿಸುವುದಂತೂ ಖಚಿತ. ಜೊತೆಗೆ ಮಂಡ್ಯ ರಮೇಶ್, ಉಮೇಶ್, ಸುಂದರ್ ವೀಣಾ, ಹರಿಣಿ ಸೇರಿದಂತೆ ಇನ್ನು ಅನೇಕ ಕಲಾವಿದರು ಈ ಸಿನಿಮಾದಲ್ಲಿ ನಟಿಸಿದ್ದಾರೆ.
ಬರ್ತಿದೆ ಕಾಮಿಡಿ ಎಂಟರ್ಟೈನರ್ ವರ್ಲ್ಡ್ ಪ್ರೀಮಿಯರ್ ಸಿನಿಮಾ 'ಡೇರ್ ಡೆವಿಲ್ ಮುಸ್ತಾಫಾ' ಇದೇ ಸೆಪ್ಟೆಂಬರ್ 17 ರಂದು ಸಂಜೆ 6 ಗಂಟೆಗೆ ನಿಮ್ಮ ನೆಚ್ಚಿನ ಸ್ಟಾರ್ ಸುವರ್ಣ ವಾಹಿನಿಯಲ್ಲಿ ತಪ್ಪದೇ ವೀಕ್ಷಿಸಿ.
ಇದನ್ನೂ ಓದಿ-ವಿಜಿ-ಸ್ಯಾಮ್ ಅಭಿನಯದ 'ಖುಷಿ' ಸಿನಿಮಾ OTT ರಿಲೀಸ್ ಡೇಟ್ ಫಿಕ್ಸ್...!
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.