Darshan on Umapathy srinivas  : ನಟ ದರ್ಶನ್‌ ಮತ್ತು ನಿಮಾಪಕ ಉಮಾಪತಿ ಜಗಳ ಮತ್ತೆ ಮುನ್ನಲೆಗೆ ಬಂದಿದೆ. ಇತ್ತೀಚಿಗೆ ಕಾಟೇರ ಸಿನಿಮಾದ ಬಗ್ಗೆ ಮಾತನಾಡಿದ್ದ ಉಮಾಪತಿ ವಿರುದ್ದ ಡಿಬಾಸ್‌ ಗುಡುಗಿದ್ದರು. ಇದೀಗ ಈ ವಿಚಾರವಾಗಿ ಫಿಲಂಚೇಂಬರ್‌ನಲ್ಲಿ ದೂರು ದಾಖಲಾಗಿದೆ.


COMMERCIAL BREAK
SCROLL TO CONTINUE READING

ಹೌದು.. ನಿರ್ಮಾಪಕ ಉಮಾಪತಿ ವಿರುದ್ಧ ನಟ ಚಾಲೆಜಿಂಗ್‌ ಸ್ಟಾರ್‌ ದರ್ಶನ್ ನೀಡಿರುವ ಹೇಳಿಕೆ ಸಂಬಂಧ ಕರ್ನಾಟಕ‌ ಪ್ರಜಾಪರ ವೇದಿಕೆ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿದೆ. ಅಲ್ಲದೆ, ಗುಮ್ಮಿಸ್ಕೊತಿಯಾ, ತಗಡು ಎಂಬ ಪದ ಬಳಕೆ ಮಾಡಿರುವ ದಾಸನ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.


ಇದನ್ನೂಓದಿ: ಕಬ್ಬಡ್ಡಿ ಆಟಗಾರನ ಮೇಲಿನ ಧೌರ್ಜನ್ಯದ ಕಥೆ 'ಪರ್ಶು'ಗೆ ಸಿಂಪಲ್ ಸುನಿ ಸಾಥ್


ಕಾಟೇರ ಸಿನಿಮಾ 50 ದಿನ ಪೋರೈಸಿದ ಹಿನ್ನೆಲೆಯಲ್ಲಿ ಚಿತ್ರತಂಡ ಸಕ್ಸಸ್‌ ಮೀಟ್‌ ಆಯೋಜನೆ ಮಾಡಿತ್ತು. ಈ ಇವೆಂಟ್‌ನಲ್ಲಿ ದರ್ಶನ್‌ ಉಮಾಪತಿ ಅವರ ಕುರಿತು ಮಾತನಾಡಿ ತಗಡು ಎಂಬ ಪದ ಬಳಕೆ ಮಾಡಿದ್ದರು. ಇದಕ್ಕೆ ಉಮಾಪತಿಯವರು ಸಹ ನಾನೇನು ಹೆದರುವ ಮಗ ಅಲ್ಲ ಅಂತ ಪ್ರತ್ಯುತ್ತರ ನೀಡಿದ್ದರು.


ಕಳೆದ ಕೆಲವು ದಿನಗಳ ಹಿಂದೆ ಉಮಾಪತಿ ಅವರು ಕಾಟೇರ ಟೈಟಲ್‌ ನಾನೇ ಕೊಟ್ಟಿದ್ದು ಅಂತ ಸಂದರ್ಶನಗಳಲ್ಲಿ ಹೇಳಿಕೊಂಡಿದ್ದರು. ಇದಕ್ಕೆ ಉತ್ತರಿಸಿದ್ದ ದರ್ಶನ್‌, ಕೆಲವರು ಕಥೆ ನಾನೇ ಮಾಡಿಸಿದೆ, ಟೈಟಲ್ ನಾನೇ ಕೊಟ್ಟೆ ಅಂತ ಹೇಳುತ್ತಿದ್ದಾರೆ. ಅಯ್ಯೋ ತಗಡೇ, ನಿನಗೆ 'ರಾಬರ್ಟ್' ಕಥೆ, ಟೈಟಲ್ ಕೊಟ್ಟಿದ್ದೇ ನಾನು ಅಂತ ಕಿಡಿಕಾರಿದ್ದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.