ನವದೆಹಲಿ: ಚಿತ್ರ ನಿರ್ಮಾಪಕ ಶ್ರವಣ್ ಡೆನಿಯಲ್ ಅವರು ಅತ್ಯಾಚಾರ ಸಂತ್ರಸ್ತರ ಬಗ್ಗೆ ನಾಚಿಕೆಗೇಡಿನ ಸಲಹೆಯೊಂದನ್ನು ನೀಡಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಟೀಕೆಗೆ ಗುರಿಯಾಗಿದೆ. ದೇಶವನ್ನೇ ಬೆಚ್ಚಿಬೀಳಿಸಿದ ಹೈದ್ರಾಬಾದ್ ವೈದ್ಯೆ ಮೇಲೆ ನಡೆದ ಭೀಕರ ಅತ್ಯಾಚಾರ ಮತ್ತು ಹತ್ಯೆಯ ಹಿನ್ನೆಲೆಯಲ್ಲಿ, ಶ್ರವಣ್ ಸೋಷಿಯಲ್ ಮೀಡಿಯಾದಲ್ಲಿ ಸರಣಿ ಹೇಳಿಕೆಗಳನ್ನು ನೀಡಿದ್ದು, ಅವುಗಳನ್ನು ಕ್ರೂರ ಮತ್ತು ಸೂಕ್ಷ್ಮತೆ ಇಲ್ಲದ ಹೇಳಿಕೆಗಳು ಎಂದು ಮಾತ್ರ ಹೇಳಬಹುದು. ಚಲನಚಿತ್ರ ನಿರ್ಮಾಪಕರ ಪ್ರಕಾರ, ಮಹಿಳೆಯರು ತಮ್ಮೊಂದಿಗೆ ಕಾಂಡೋಮ್ ಗಳನ್ನು ಇಟ್ಟುಕೊಳ್ಳಬೇಕು ಮತ್ತು ಅತ್ಯಾಚಾರಕ್ಕೆ ಸಹಕರಿಸಬೇಕು.


COMMERCIAL BREAK
SCROLL TO CONTINUE READING

ಮಹಿಳೆಯರು ತಮ್ಮೊಂದಿಗೆ ಕಾಂಡೋಮ್ ಇಟ್ಟುಕೊಳ್ಳಬೇಕು ಮತ್ತು ಪೊಲೀಸ್ ಸಹಾಯವಾಣಿ 100ಕ್ಕೆ ಕರೆ ಮಾಡುವ ಬದಲು ತಮ್ಮ ಪ್ರಾಣ ಉಳಿಸಿಕೊಳ್ಳಬೇಕು ಎಂದು ಶ್ರವಣ್ ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಬರೆದುಕೊಂಡಿದ್ದರು.


ಮಹಿಳೆಯರು ದುಷ್ಕರ್ಮಿಗಳೊಂದಿಗೆ ಸಹಕರಿಸಬೇಕು ಮತ್ತು ದುಷ್ಕರ್ಮಿಗಳಿಗೆ ಕಾಂಡೋಮ್ ನೀಡಬೇಕು, ಇದರಿಂದ ಅವರು ಕೊಲೆಗೆ ಗುರಿಯಾಗುವುದಿಲ್ಲ ಎಂದಿದ್ದರು. ಆದರೆ ನಂತರ ಅವರು ತಮ್ಮ ಈ ಪೋಸ್ಟ್ ಅನ್ನು ಡಿಲೀಟ್ ಮಾಡಿದ್ದಾರೆ. 


ಅತ್ಯಾಚಾರ ಗಂಭೀರ ವಿಷಯವಲ್ಲ, ಆದರೆ ಕೊಲೆ ಅಕ್ಷಮ್ಯ ಅಪರಾದ ಎಂದು ಡೆನಿಯಲ್ ಬರೆದಿದ್ದರು. ಜೊತೆಗೆ ಅತ್ಯಾಚಾರದ ನಂತರ ನಡೆಸಲಾಗುವ ಕೊಲೆಗಳನ್ನು ನಿಲ್ಲಿಸಿ. ಅತ್ಯಾಚಾರಿಗಳ ಪೈಶಾಚಿಕ ಚಿಂತನೆಗೆ ಸಮಾಜ ಮತ್ತು ಮಹಿಳಾ ಸಂಘಟನೆಗಳು ಕಾರಣ. ಒಂದು ವೇಳೆ ನ್ಯಾಯಾಲಯಗಳು, ಸರ್ಕಾರ ಮತ್ತು ಕಾನೂನು ಅತ್ಯಾಚಾರವನ್ನು ಕ್ಷಮಿಸಿದರೆ, ಅತ್ಯಾಚಾರಿಗಳು ಕೊಲೆ ಮಾರ್ಗ ಅನುಸರಿಸುವುದಿಲ್ಲ. ಹಿಂಸಾಚಾರವಿಲ್ಲದೆ ಅತ್ಯಾಚಾರವನ್ನು ಕಾನೂನುಬದ್ಧಗೊಳಿಸುವುದೆ  ಇಂತಹ  ಕೊಲೆಗಳನ್ನು ತಡೆಯುವ ಏಕೈಕ ಮಾರ್ಗ. ಇದರಿಂದ ಅತ್ಯಾಚಾರಿ ಸಮಾಜ ಮತ್ತು ಕಾನೂನಿನ ಭಯದಿಂದ ಹೊರಬಂದು ಪೀಡಿತರನ್ನು ಜೀವಂತವಾಗಿ ಬಿಡುತ್ತಾನೆ. 18 ವರ್ಷ ದಾಟಿದವರಿಗೆ ಸರ್ಕಾರ ಒಂದು ಉಪಾಯ ಕೈಗೊಳ್ಳಬೇಕು. ಅತ್ಯಾಚಾರದ ನಂತರ ಕೊಲ್ಲಬೇಡಿ, ಹಿಂಸಾಚಾರವಿಲ್ಲದೆ ಅತ್ಯಾಚಾರ ಮಾಡಿ. ಇದು ಹುಡುಗಿಯ ಜೀವ ಉಳಿಸಲು ಸರಿಯಾದ ಮಾರ್ಗ ಎಂದು ಡೆನಿಯಲ್ ಬರೆದಿದ್ದರು.



ಡೇನಿಯಲ್ ಅವರ ಈ ಪೋಸ್ಟ್ ಅನ್ನು ದಕ್ಷಿಣ ನಟಿ ಚಿನ್ಮಯಿ ಶ್ರೀಪ್ರದ ಅವರು ಹಂಚಿಕೊಂಡಿದ್ದಾರೆ, ಬಳಿಕ ಜನರು ಡೇನಿಯಲ್ ಅವರ ಹೇಳಿಕೆಗಳನ್ನು ವ್ಯಾಪಕವಾಗಿ ಖಂಡಿಸಿದ್ದಾರೆ. ಅಷ್ಟೇ ಅಲ್ಲ ಡೆನಿಯಲ್ ಅವರಿಗೆ ವೈದ್ಯಕೀಯ ಸಹಾಯದ ಅಗತ್ಯವಿದೆ ಎಂದು ಕಿಡಿಕಾರಿದ್ದಾರೆ.  ಕೆಲವರು ಡೆನಿಯಲ್ ಓರ್ವ ಮಾನಸಿಕ ಅಸ್ವಸ್ಥ ಎಂದು ಬರೆದುಕೊಂಡಿದ್ದರೆ, ಇನ್ನೂ ಕೆಲವರು ಡೆನಿಯಲ್ ಸಮಾಜಕ್ಕೆ ಅಪಾಯಕಾರಿ ಎಂದು ಟೀಕಿಸಿದ್ದಾರೆ.  ಅಷ್ಟೇ ಅಲ್ಲ ಕೆಲವರು ಡೆನಿಯಲ್ ಅವರ ಕೀಳು ಮಟ್ಟದ ಆಲೋಚನೆಗಳಿಗೆ ಅವರ ಕುಟುಂಬವನ್ನೇ ಗುರಿಯಾಗಿಸಿದ್ದಾರೆ.