ಅತ್ಯಾಚಾರ: ಮಿಥುನ್ ಚಕ್ರವರ್ತಿ ಪುತ್ರನ ವಿರುದ್ಧ ಎಫ್ಐಆರ್ ದಾಖಲಿಸಲು ನ್ಯಾಯಾಲಯ ಆದೇಶ
ಬಾಲಿವುಡ್ ನಟ ಮಿಥುನ್ ಚಕ್ರವರ್ತಿ ಪುತ್ರ ಮಹಾಕ್ಷಯ್ ವಿರುದ್ಧ ಎಫ್ಐಆರ್ ದಾಖಲಿಸುವಂತೆ ದೆಹಲಿ ನ್ಯಾಯಾಲಯ ಸೋಮವಾರ ಆದೇಶಿಸಿದೆ.
ನವದೆಹಲಿ: ಬಾಲಿವುಡ್ ನಟ ಮಿಥುನ್ ಚಕ್ರವರ್ತಿ ಅವರ ಪತ್ನಿ, ಮಾಜಿ ಬಾಲಿವುಡ್ ನಟಿ ಯೋಗಿತಾ ಬಾಲಿ ಮತ್ತು ಪುತ್ರ ಮಹಾಕ್ಷಯ್ ವಿರುದ್ಧ ಅತ್ಯಾಚಾರ, ವಂಚನೆ ಮತ್ತು ಒತ್ತಾಯಪೂರ್ವಕ ಗರ್ಭಪಾತ ಆರೋಪದಡಿ ಎಫ್ಐಆರ್ ದಾಖಲಿಸುವಂತೆ ದೆಹಲಿ ನ್ಯಾಯಾಲಯ ಸೋಮವಾರ ಆದೇಶಿಸಿದೆ.
ಪ್ರಕರಣದ ಬಗ್ಗೆ ಎಫ್ಐಆರ್ ದಾಖಲಿಸುವಂತೆ ದೆಹಲಿಯ ರೋಹಿಣಿ ನ್ಯಾಯಾಲಯ ಆದೇಶಿಸಿರುವುದಾಗಿ ಎಎನ್‌ಐ ಸುದ್ದಿ ಸಂಸ್ಥೆ ವರದಿ ಮಾಡಿದೆ. ಮಹಾಕ್ಷಯ್ ಅವರೂ ಸಹ ಚಿತ್ರಗಳಲ್ಲಿ ನಟಿಸಿದ್ದು, 'ದ ಹಾಂಟೆಡ್ - 3ಡಿ', ಜಿಮ್ಮಿ ಮತ್ತು ದ ಮರ್ಡರ್ ಚಿತ್ರಗಳಿಂದ ಪರಿಚಿತರಾಗಿದ್ದಾರೆ.
ಎಎನ್ಐ ವರದಿಯ ಪ್ರಕಾರ ಹಿಂದಿ ಮತ್ತು ಭೋಜಪುರಿ ಸಿನಿಮಾಗಳಲ್ಲಿ ಅಭಿನಯಿಸಿರುವ ನಟಿ ಮದಾಲಸಾ ಶರ್ಮಾ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದು, ಆಕೆಯನ್ನು ಮದುವೆಯಾಗುವುದಾಗಿ ನಂಬಿಸಿ ಮಹಾಕ್ಷಯ್ ಆಕೆಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ್ದರು ಎಂಬುದಾಗಿ ಆರೋಪಿಸಿದ್ದಾರೆ.