ಬೆಂಗಳೂರು: ಮನೆ ಬಾಡಿಗೆ ನೀಡದೆ, ಮನೆ ಮಾಲೀಕರಿಗೆ ಬೆದರಿಕೆ ಹಾಕಿದ ಆರೋಪದ ಮೇಲೆ ಖ್ಯಾತ ನಟ ಯಶ್ ಅವರಿಗೆ ಮೂರು ತಿಂಗಳಲ್ಲಿ ಮನೆ ಖಾಲಿ ಮಾಡುವಂತೆ ನ್ಯಾಯಾಲಯ ಮಂಗಳವಾರ ಆದೇಶ ನೀಡಿದೆ.


COMMERCIAL BREAK
SCROLL TO CONTINUE READING

ಬೆಂಗಳೂರಿನ ಕತ್ರಿಗುಪ್ಪೆಯಲ್ಲಿ 2010ರ ಅಕ್ಟೋಬರ್ 16 ರಿಂದ ನಟ ಯಶ್ ಕುಟುಂಬ ತಮ್ಮ ಮನೆಯಲ್ಲಿ ವಾಸವಾಗಿದ್ದು, ಸರಿಯಾದ ಸಮಯಕ್ಕೆ ಬಾಡಿಗೆ ನೀಡುತ್ತಿಲ್ಲ, ಕೇಳಿದರೆ ತಮಗೇ ಬೆದರಿಕೆ ಹಾಕುತ್ತಿದ್ದಾರೆ. ಯಶ್ ತಾಯಿಯಿಂದ ನಮಗೆ 21.37 ಲಕ್ಷ ರೂ. ಬಾಡಿಗೆ ಹಣ ಬರಬೇಕಿದೆ ಎಂದು ಎಂದು ಆರೋಪಿಸಿ ಮನೆ ಮಾಲೀಕ ಮುನಿಪ್ರಸಾದ್ ಅವರು ಗಿರಿನಗರ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. 


ಈ ಸಂಬಂಧ ಇಂದು ವಿಚಾರಣೆ ನಡೆಸಿದ 42ನೇ ಸಿಟಿ ಸಿವಿಲ್ ಕೋರ್ಟ್, ನಟ ಯಶ್ ಅವರ ತಾಯಿ ಪುಷ್ಪಾ ಅವರಿಗೆ ಬಾಕಿ ಇರುವ 9.60ಲಕ್ಷ ರೂ.ಗಳನ್ನು ಮಾಲಿಕರಿಗೆ ಪಾವತಿಸಿ, ಮನೆ ಖಾಲಿ ಮಾಡುವಂತೆ ಆದೇಶಿಸಿದ್ದು, ಮೂರು ತಿಂಗಳ ಗಡುವು ನೀಡಿದೆ.