Aly Goni: ಜಾಸ್ಮಿನ್ ಭಾಸಿನ್ ಮೊದಲು, ಅಲಿ ಗೋನಿ ಹಾಗೂ ನತಾಶಾ ಸ್ಟಾಂಕೋವಿಕ್ ಜೊತೆ ಲಿವ್-ಇನ್ ರಿಲೇಷನ್‌ಶಿಪ್‌ನಲ್ಲಿದ್ದರು. ಆದರೆ ಸ್ವಲ್ಪ ಸಮಯದ ನಂತರ ಕೆಲವು ಭಿನ್ನಾಭಿಪ್ರಾಯಗಳಿಂದ ಇಬ್ಬರೂ ಬೇರೆಯಾದರು ಎಂದು ಅಲಿ ಹೇಳಿದ್ದರು.


COMMERCIAL BREAK
SCROLL TO CONTINUE READING

ಅಲಿ ಗೋನಿ ಟಿವಿ ಇಂಡಸ್ಟ್ರಿಯಲ್ಲಿ ಚಿರಪರಿಚಿತ ಹೆಸರು, ಆದರೆ 'ಬಿಗ್ ಬಾಸ್ 14' ಗೆ ಬಂದ ನಂತರ ಅವರ ಜನಪ್ರಿಯತೆ ಸಾಕಷ್ಟು ಹೆಚ್ಚಾಗಿದೆ. ವೃತ್ತಿಜೀವನದ ಹೊರತಾಗಿ, ನಟ ತಮ್ಮ ವೈಯಕ್ತಿಕ ಜೀವನದ ಬಗ್ಗೆಯೂ ಸುದ್ದಿಯಲ್ಲಿದ್ದಾರೆ.


ಇದನ್ನೂ ಒದಿ-ʼವಾರಾಹಿ ದೀಕ್ಷೆʼಯಲ್ಲಿ ಪವನ್ ಕಲ್ಯಾಣ್..! ಈ ವ್ರತದ ಮಹತ್ವ.. ಮಾತೆ ʼವಾರಾಹಿ ದೇವಿʼ ಯಾರು ಗೊತ್ತೆ..?


ವಿಶೇಷವಾಗಿ ಕಿರುತೆರೆ ನಟ ಅಲಿ ಗೋನಿ ಜಾಸ್ಮಿನ್ ಭಾಸಿನ್ ಅವರೊಂದಿಗಿನ ಸಂಬಂಧಕ್ಕಾಗಿ ಸುದ್ದಿಯಲ್ಲಿದ್ದಾರೆ. ಆದರೆ ಈ ಮೊದಲು ಹಾರ್ದಿಕ್ ಪಾಂಡ್ಯ ಪತ್ನಿ ನತಾಶಾ ಸ್ಟಾಂಕೋವಿಕ್ ಜೊತೆ ಅಲಿ ಕೂಡ ಸಂಬಂಧ ಹೊಂದಿದ್ದರು..  ಅವರ ಪ್ರಕಾರ ಇಬ್ಬರ ನಡುವೆ ಸಾಕಷ್ಟು ವ್ಯತ್ಯಾಸವಿದ್ದು, ಇಬ್ಬರೂ ವಿಭಿನ್ನ ಧರ್ಮಗಳು ಮತ್ತು ಸಂಸ್ಕೃತಿಗಳನ್ನು ಅನುಸರಿಸುತ್ತಿದ್ದರು.. ಈ ಕಾರಣಕ್ಕಾಗಿಯೇ ಇಬ್ಬರ ನಡುವೆ ಕೆಲ ವಿಚಾರಗಳಲ್ಲಿ ಭಿನ್ನಾಭಿಪ್ರಾಯಗಳಿದ್ದು, ಬೇರೆಯಾಗಿದ್ದರು ಎಂದು ನಟ ಹೇಳಿಕೊಂಡಿದ್ದರು..


ಇದನ್ನೂ ಒದಿ-ದರ್ಶನ್ ಒಳ್ಳೆಯವರು, ಅವರು ನಿರಪರಾಧಿಯಾಗಿ ಹೊರಬರುತ್ತಾರೆ..! ನಟ ನಾಗ ಶೌರ್ಯ


ಅಲಿ ಗೋನಿ ಹಲವು ವರ್ಷಗಳಿಂದ ಟಿವಿ ನಟಿ ಜಾಸ್ಮಿನ್ ಭಾಸಿನ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ. ಸಂದರ್ಶನವೊಂದರಲ್ಲಿ, ಡೇಟಿಂಗ್ ಮಾಡುವ ಮೊದಲು ಇಬ್ಬರೂ 3 ವರ್ಷಗಳ ಕಾಲ ಸ್ನೇಹಿತರಾಗಿದ್ದರು ಎಂದು ಜಾಸ್ಮಿನ್ ಬಹಿರಂಗಪಡಿಸಿದ್ದರು.. ಜಾಸ್ಮಿನ್ ಭಾಸಿನ್ ಮತ್ತು ಅಲಿ ಗೋನಿ ಪರಸ್ಪರ ಪ್ರೇಮಿಗಳು ಮಾತ್ರವಲ್ಲದೆ ಆತ್ಮೀಯ ಸ್ನೇಹಿತರೂ ಹೌದು. ಇಬ್ಬರೂ ಬಿಗ್ ಬಾಸ್ 14 ಗೆ ಬರುವವರೆಗೂ ಬಹಳ ಸಮಯದವರೆಗೆ ಸ್ನೇಹಿತರಾಗಿದ್ದರು, ನಂತರ ಇಬ್ಬರೂ ಪರಸ್ಪರ ತಮ್ಮ ಭಾವನೆಗಳನ್ನು ಅರಿತುಕೊಂಡರು.


ಜಾಸ್ಮಿನ್ ಭಾಸಿನ್ ಮತ್ತು ಅಲಿ ಗೋನಿ 'ಖತ್ರೋನ್ ಕೆ ಖಿಲಾಡಿ 9' ನಲ್ಲಿ ಭೇಟಿಯಾದರು. ಈ ಕಾರ್ಯಕ್ರಮದಿಂದಲೇ ಇಬ್ಬರ ಸ್ನೇಹವೂ ಶುರುವಾಗಿತ್ತು.. ಮತ್ತು ಅಲ್ಲಿಯೇ ಇಬ್ಬರೂ ಪರಸ್ಪರ ಹತ್ತಿರವಾದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.