Shubman Gill: ಸ್ಪೈಡರ್ ಮ್ಯಾನ್: ಅಕ್ರಾಸ್ ದಿ ಸ್ಪೈಡರ್-ವರ್ಸ್‌ನ ಹಿಂದಿ ಮತ್ತು ಪಂಜಾಬಿ ಆವೃತ್ತಿಗಳಿಗೆ ಭಾರತೀಯ ಕ್ರಿಕೆಟಿಗ ಶುಭ್ಮನ್‌ ಗಿಲ್‌ ಧ್ವನಿ ನೀಡಿದ್ದಾರೆ ಎಂದು ವರದಿಯಾಗಿದೆ. ಮೈಕ್‌ನ ಹಿಂದೆ ನಿಂತು, ಚಿತ್ರದಲ್ಲಿ ಸ್ಪೈಡರ್ ಮ್ಯಾನ್‌ನ ಭಾರತೀಯ ಪ್ರತಿರೂಪವಾದ ಪವಿತ್ರ್ ಪ್ರಭಾಕರ್ ಪಾತ್ರಕ್ಕೆ ಶುಭ್ಮನ್‌ ಗಿಲ್‌ ಧ್ವನಿ ನೀಡಿದ್ದಾರೆ. ಅವರು ಡಬ್ಬಿಂಗ್‌ನೊಂದಿಗೆ ಮನರಂಜನಾ ಉದ್ಯಮಕ್ಕೆ ತಮ್ಮ ಮೊದಲ ಹೆಜ್ಜೆ ಇಟ್ಟಿದ್ದಾರೆ. 


COMMERCIAL BREAK
SCROLL TO CONTINUE READING

ಖಾಸಗಿ ವಾಹಿನಿಯೊಂದರ ಜೊತೆ ಮಾತನಾಡಿದ ಗುಜರಾತ್ ಟೈಟಾನ್ಸ್ ತಾರೆ ಶುಭ್ಮನ್‌ ಗಿಲ್‌, ತಾವು ನಟನಾ ಕೌಶಲ್ಯ ಅಭಿವೃದ್ಧಿಪಡಿಸಿಕೊಳ್ಳಲು ಬಯಸುವುದಾಗಿ ಹೇಳಿದ್ದಾರೆ. "ಇದು ನಾನು ಕಲಿಯಲು ಬಯಸುವ ಒಂದು ಕೌಶಲ್ಯವಾಗಿದೆ. ನಾನು ಸಿನಿಮಾದಲ್ಲಿ ನಟಿಸುತ್ತೇನೋ ಇಲ್ಲವೋ ಎಂದು ನನಗೆ ಖಚಿತವಾಗಿ ತಿಳಿದಿಲ್ಲ. ನಾನು ಮಾಡಬಹುದು, ನಾನು ಮಾಡದೇನೂ ಇರಬಹುದು. ಆದರೆ ನಾನು ನಿಜವಾಗಿಯೂ ಉತ್ಸುಕನಾಗಿದ್ದೇನೆ" ಎಂದು ಹೇಳಿದ್ದಾರೆ.


ಇದನ್ನೂ ಓದಿ: ದಿ ಕೇರಳ ಸ್ಟೋರಿ ಪ್ರದರ್ಶಿಸಿದರೆ ಥಿಯೇಟರ್‌ ಸ್ಫೋಟಿಸುವುದಾಗಿ ISIS ಬೆದರಿಕೆ


ಸೋನಿ ಪಿಕ್ಚರ್ಸ್ ಎಂಟರ್‌ಟೈನ್‌ಮೆಂಟ್ ಇಂಡಿಯಾ ಇಂಗ್ಲಿಷ್, ಹಿಂದಿ, ತಮಿಳು, ತೆಲುಗು, ಕನ್ನಡ, ಮಲಯಾಳಂ, ಗುಜರಾತಿ, ಮರಾಠಿ, ಪಂಜಾಬಿ ಮತ್ತು ಬಂಗಾಳಿ ಭಾಷೆಗಳಲ್ಲಿ ‘ಸ್ಪೈಡರ್ ಮ್ಯಾನ್: ಅಕ್ರಾಸ್ ದ ಸ್ಪೈಡರ್-ವರ್ಸ್’ ಅನ್ನು 1 ಜೂನ್ 2023 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲಿದೆ.


ಶುಭ್ಮನ್‌ ಗಿಲ್‌ ಭಾರತದ ಪರ ಆಡುವ ಬ್ಯಟರ್‌. ಅವರು 2018 ರ ICC U19 ವಿಶ್ವಕಪ್‌ನಲ್ಲಿ 104.50 ರ ಸರಾಸರಿಯಲ್ಲಿ 418 ರನ್‌ಗಳೊಂದಿಗೆ ಖ್ಯಾತಿಯನ್ನು ಗಳಿಸಿದರು. ಭಾರತದ ದಾಖಲೆಯ ನಾಲ್ಕನೇ ವಿಶ್ವ ಕಪ್‌ ಗೆಲ್ಲುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿದರು. ಐಪಿಎಲ್‌ನಲ್ಲಿ ಗುಜರಾತ್ ಟೈಟನ್ಸ್ ತಂಡದ ಆಟಗಾರ ಶುಭ್ಮನ್‌ ಗಿಲ್‌ ಫುಲ್ ಫಾರ್ಮ್‌ನಲ್ಲಿದ್ದಾರೆ. ಅತಿ ಹೆಚ್ಚು ರನ್ (851) ಗಳಿಸಿ ಆರೆಂಜ್ ಕ್ಯಾಪ್ ಪಡೆದಿದ್ದಾರೆ. 


ಇದನ್ನೂ ಓದಿ: ಮಲೈಕಾ ಅರೋರಾ ಅಸಲಿ ವಯಸ್ಸು ಬಿಚ್ಚಿಟ್ಟ ಹಳೇ ವಿಡಿಯೋ ಗುಟ್ಟೇನು ಗೊತ್ತಾ..?


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.