Cruise Drugs Case: ಬಾಲಿವುಡ್ ಬಾದ್ ಶಾಹ್ ಶಾರುಕ್ ಖಾನ್ (Sharukh Khan)ಪುತ್ರ ಆರ್ಯನ್ ಖಾನ್ (Aryan Khan) ಕ್ರೂಸ್ ಡ್ರಗ್ಸ್ ಪ್ರಕರಣಕ್ಕೆ (Cruise Drugs Case) ಸಂಬಂಧಿಸಿದಂತೆ ಭಾರಿ ಚರ್ಚೆಯಲ್ಲಿದ್ದಾನೆ. ಹೀಗಿರುವಾಗ ಇದೀಗ ಮಗನ ಕಿತಾಪತಿಯ ಪ್ರಭಾವ  ತಂದೆ ಶಾರುಕ್ ವೃತ್ತಿಜೀವನದ ಮೇಲೂ ಕೂಡ ಕಾಣಿಸಲಾರಂಭಿಸಿದೆ. ಹೌದು, ಮಾಧ್ಯಮಗಳಲ್ಲಿ ಪ್ರಕಟಗೊಂಡ ವರದಿಗಳ ಪ್ರಕಾರ ಕಲಿಕಾ ಆಪ್ ಬೈಜುಸ್ (BYJU's Learning App) ಶಾರುಕ್ ಖಾನ್ ಇರುವ ಎಲ್ಲಾ ಜಾಹೀರಾತುಗಳಿಗೆ ನಿಷೇಧ ವಿಧಿಸಿದೆ ಎನ್ನಲಾಗಿದೆ.


COMMERCIAL BREAK
SCROLL TO CONTINUE READING

ಏನಿದು ಸಂಪೂರ್ಣ ಪ್ರಕರಣ?
ಕ್ರೂಸ್ ಡ್ರಗ್ಸ್ ಪ್ರಕರಣದಲ್ಲಿ ಆರ್ಯನ್ ಖಾನ್ (Aryan Khan) ಹೆಸರು ಕೇಳಿಬಂದಾಗಿನಿಂದ, ಒಂದೆಡೆ, ಶಾರುಖ್ ಖಾನ್ ಅವರನ್ನು ಅಭಿಮಾನಿಗಳುಬೆಂಬಲಿಸುತ್ತಿದ್ದರೆ,  ಇನ್ನೊಂದೆಡೆ ಅವರನ್ನು ಸಾಮಾಜಿಕ ಮಾಧ್ಯಮದಲ್ಲಿ ಟ್ರೋಲ್ ಕೂಡ ಮಾಡಲಾಗುತ್ತಿದೆ.  ಸದ್ಯಕ್ಕೆ ಬೈಜುಸ್ ಶಾರುಖ್ ಅವರ ಎಲ್ಲಾ ಜಾಹೀರಾತುಗಳನ್ನು ನಿಷೇಧಿಸಿರುವುದರ (BYJU'S Pulled Shahkh Khan Ads) ಜೊತೆಗೆ ಅವರ ಪೂರ್ವ-ಬುಕಿಂಗ್ ಜಾಹೀರಾತುಗಳನ್ನು ಕೂಡ ಬಿಡುಗಡೆ ಮಾಡದಿರಲು ನಿರ್ಧರಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.


ಇದನ್ನೂ ಓದಿ-Viral Video: ಆರ್ಯನ್ ಖಾನ್ ಜೈಲುಪಾಲು: ಮಗನ ಸ್ಥಿತಿ ಕಂಡು ಕಣ್ಣೀರಿಟ್ಟ ಗೌರಿ ಖಾನ್..!


ಈ ನಿರ್ಧಾರಕ್ಕೆ ಕಾರಣ ಏನು?
ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೋಲ್ ಮಾಡುವವರು ಬೈಜುಸ್ ಲರ್ನಿಂಗ್ ಆಪ್ ಅನ್ನು ಕಿಚಾಯಿಸುತ್ತಿವೆ. ಕಂಪನಿ ಶಾರುಕ್ ಅವರನ್ನು ತನ್ನ ಬ್ರಾಂಡ್ ರಾಯಭಾರಿಯನ್ನಾಗಿ ಮಾಡಿ ಯಾವ ಸಂದೇಶ ನೀಡುತ್ತಿದೆ? ನಟ ತನ್ನ ಮಗನಿಗೆ ಇದನ್ನೇ ಹೇಳಿ ಕೊಡುವುದಾ? ಎಂದು ಟ್ರೋಲ್ ಮಾಡುತ್ತಿದ್ದರೆ. ಇನ್ನೊಂದೆಡೆ ಶಾರುಕ್ ಗೆ ಸಂಬಂಧಿಸಿದಂತೆ ಬೈಜುಸ್ ನ ಕೆಲ ಮೀಮ್ಸ್ ಗಳು ಕೂಡ ಇದೀಗ ವೈರಲ್ ಆಗುತ್ತಿವೆ. ಸಾಮಾಜಿಕ ಮಾಧ್ಯಮಗಳಲ್ಲಿ ಕಂಪನಿಯ ವರ್ಚಸ್ಸು ಹಾಳಾಗುತ್ತಿದೆ ಮತ್ತು ಈ ಹಿನ್ನೆಲೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎನ್ನಲಾಗುತ್ತಿದೆ.


ಇದನ್ನೂ ಓದಿ-Drugs case:ಶಾರುಖ್ ಪುತ್ರ ಆರ್ಯನ್ ಖಾನ್ ಸೇರಿದಂತೆ 8 ಆರೋಪಿಗಳ ಜಾಮೀನು ಅರ್ಜಿ ತಿರಸ್ಕೃತ


ಸುಮಾರು 40 ಕಂಪನಿಗಳ ಎಂಡೋರ್ಸ್ ಮಾಡುತ್ತಾರೆ ಶಾರುಕ್ 
ತಮ್ಮ ಕೊನೆಯ ಚಿತ್ರ 'ಝೀರೋ' ಬಿಡುಗಡೆಯಾದಾಗಿನಿಂದ ಶಾರುಕ್ ಆಫ್ ಸ್ಕ್ರೀನ್ ನಲ್ಲಿ ಕಾಣಿಸಿಕೊಂಡಿಲ್ಲ. ಆದರೂ ಕೂಡ ಜಾಹೀರಾತು ಪ್ರಪಂಚದಲ್ಲಿ ಶಾರುಕ್ ಇನ್ನೂ ಕೂಡ ಸಾಕಷ್ಟು ಸಕ್ರೀಯರಾಗಿದ್ದಾರೆ. ಮೂಲಗಳು ನೀಡಿರುವ ಮಾಹಿತಿ ಪ್ರಕಾರ ಶಾರುಕ್ ಸುಮಾರು 40 ಕಂಪನಿಗಳ ಎಂಡೋರ್ಸ್ಮೆಂಟ್ ಹೊಂದಿದ್ದಾರೆ. ಈ ಲಿಸ್ಟ್ ನಲ್ಲಿ ಬೈಜುಸ್ ಹೊರತುಪಡಿಸಿ ICICI ಬ್ಯಾಂಕ್, ರಿಲಯನ್ಸ್ ಜಿಯೋ, LG, ದುಬೈ ಟೂರಿಸಂ, ಹುಂಡೈ ಸೇರಿದಂತೆ ಇತರ ಹೆಸರಾಂತ ಕಂಪನಿಗಳು ಶಾಮೀಲಾಗಿವೆ.


ಇದನ್ನೂ ಓದಿ-Aryan Khan ಬೆಂಬಲಕ್ಕೆ ನಿಂತ ಹೃತಿಕ್ ರೋಶನ್, ತಕ್ಷಣ ಪ್ರತಿಕ್ರಿಯಿಸಿದ ಕಂಗನಾ ರಣಾವತ್


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.