Cruise Drugs Party: ಖ್ಯಾತ ಬಾಲಿವುಡ್ ನಟ ಶಾರುಖ್ ಖಾನ್ (Shah Rukh Khan) ಅವರ ಪುತ್ರ ಆರ್ಯನ್ ಖಾನ್ (Aryan Khan) ಜೊತೆಗೆ, ಮುನ್ಮುನ್ ಧಮೇಚಾ ಅವರನ್ನು ಮುಂಬೈ ಕರಾವಳಿ ತೀರದಲ್ಲಿ ಕ್ರೂಸ್ ನಲ್ಲಿ ನಡೆದ ಡ್ರಗ್ಸ್ ಪಾರ್ಟಿಯ (Cruise Drugs Party) ವೇಳೆ ಬಂಧಿಸಲಾಗಿದೆ. ಇದೀಗ  ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ (Social Media) ವಿಡಿಯೋವೊಂದು ಭಾರಿ ವೈರಲ್ (Viral Video) ಆಗುತ್ತಿದೆ. ಮಾಧ್ಯಮ ವರದಿಗಳ ಪ್ರಕಾರ, ಈ ವೀಡಿಯೊವನ್ನು NCB ಹಂಚಿಕೊಂಡಿದೆ ಎನ್ನಲಾಗಿದೆ. ಈ ವಿಡಿಯೋದಲ್ಲಿ  ಕ್ರೂಸ್‌ನಿಂದ ಬಂಧಿಸಲ್ಪಟ್ಟ ಆರೋಪಿ ಮುನ್ಮುನ್ ಧಮಿಚಾ (Mmunmun Dhamecha) ಹೇಗೆ ಡ್ರಗ್ಸ್ ಮಾತ್ರೆಗಳನ್ನು ಸ್ಯಾನಿಟರಿ ಪ್ಯಾಡ್‌ಗಳಲ್ಲಿ (Drugs Pill In Sanitary Pad Video) ಬಚ್ಚಿಟ್ಟುಕೊಂಡಿದ್ದಳು ಎಂಬುದನ್ನು ತೋರಿಸುತ್ತಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ-Viral Video: ಆರ್ಯನ್ ಖಾನ್ ಜೈಲುಪಾಲು: ಮಗನ ಸ್ಥಿತಿ ಕಂಡು ಕಣ್ಣೀರಿಟ್ಟ ಗೌರಿ ಖಾನ್..!


ವಿಡಿಯೋ ಹಂಚಿಕೋಣ NCB
ಈ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋವೊಂದು ಕಾಣಿಸಿಕೊಂಡಿದೆ. ಮಾಧ್ಯಮ ವರದಿಗಳ ಪ್ರಕಾರ ಈ ವಿಡಿಯೋ NCB ಹಂಚಿಕೊಂಡಿದೆ ಎನ್ನಲಾಗಿದೆ. ಕ್ರೂಸ್ ಮೇಲೆ ಮುನ್ಮುನ್ ಕೋಣೆಯ ಸಿಜರಿಂಗ್ ವಿಡಿಯೋ ಇದಾಗಿದ್ದು, ಇದನ್ನು ಹಡಗಿನಲ್ಲಿ ಸರ್ಚಿಂಗ್ ಆಪರೇಶನ್ ವೇಳೆ ಚಿತ್ರೀಕರಿಸಲಾಗಿದೆ ಎಂದು NCB ಹೇಳಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. 28 ಸೆಕೆಂಡ್ ಅವಧಿಯ ಈ ವಿಡಿಯೋದಲ್ಲಿ ಸ್ಯಾನಿಟರಿ ಪ್ಯಾಡ್ ವೊಂದರಲ್ಲಿ ಸಣ್ಣ ಕಾಗದದ ಚೂರಿನಲ್ಲಿ ಡ್ರಗ್ಸ್ ಪಿಲ್ ಅನ್ನು ಬಚ್ಚಿಡಲಾಗಿದೆ. ಪ್ರಸ್ತುತ ಮುನ್ಮುನ್ ನ್ಯಾಯಾಂಗ ಬಂಧನದಲ್ಲಿದ್ದಾಳೆ ಎಂಬುದು ಇಲ್ಲಿ ಉಲ್ಲೇಖನೀಯ.


ಇದನ್ನೂ ಓದಿ-ಅನೈತಿಕ ಸಂಬಂಧದ ಕುರಿತ ವದಂತಿಗಳಿಗೆ ನಟಿ ಸಮಂತಾ ಹೇಳಿದ್ದೇನು ಗೊತ್ತೇ?


ಯಾರಿದು ಮುನ್ಮುನ್ ಧಮೀಚಾ?
ಮಾಧ್ಯಮ ವರದಿಗಳ ಪ್ರಕಾರ ಮುನ್ಮುನ್ ಧಮೀಚಾ ಓರ್ವ ರೂಪದರ್ಶಿಯಾಗಿದ್ದಾಳೆ ಹಾಗೂ ಉದ್ಯಮಿ ಕುಟುಂಬವೊಂದರ ಜೊತೆಗೆ ಸಂಬಂಧ ಹೊಂದಿದ್ದಾಳೆ. ಮುನ್ಮುನ್ ಮಧ್ಯಪ್ರದೇಶದ ಸಾಗರ್ ಜಿಲ್ಲೆಯ ರಹವಾಸಿಯಾಗಿದ್ದಾಳೆ ಎನ್ನಲಾಗುತ್ತಿದೆ. ಆದರೆ, ಕಳೆದ ದೀರ್ಘ ಕಾಲದಿಂದ ಅವಳು ದೆಹಲಿಯಲ್ಲಿ ವಾಸಿತುತ್ತಿದ್ದಾಳೆ. ಪ್ರಸ್ತುತ ಮಧ್ಯಪ್ರದೇಶದಲ್ಲಿ ಅವಳೂ ವಾಸಿಸುತ್ತಿಲ್ಲ ಮತ್ತು ಆಕೆಯ ಕುಟುಂಬದ ಯಾವುದೇ ಸದಸ್ಯ ಕೂಡ ವಾಸಿಸುತ್ತಿಲ್ಲ. ಇನ್ಸ್ಟಾಗ್ರಾಮ್ ನಲ್ಲಿ ಮುನ್ಮುನ್ ಖಾತೆ ಎನ್ನಲಾಗುತ್ತಿರುವ ಖಾತೆಯಲ್ಲಿ ಆಕೆ ಪಾರ್ಟಿ ಮಾಡುವ ಹಲವಾರು ಚಿತ್ರಗಳಿವೆ. ಕೆಲ ಫೋಟೋಗಳಲ್ಲಿ ಆಕೆಯ ಜೊತೆಗೆ ಸೆಲಿಬ್ರಿಟಿ ಗಳನ್ನು ಕೂಡ ನೀವು ಕಾಣಬಹುದು.


Drugs case:ಶಾರುಖ್ ಪುತ್ರ ಆರ್ಯನ್ ಖಾನ್ ಸೇರಿದಂತೆ 8 ಆರೋಪಿಗಳ ಜಾಮೀನು ಅರ್ಜಿ ತಿರಸ್ಕೃತ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.