Tagaru Palya : ಡಾಲಿ ಪಿಕ್ಚರ್ಸ್ಸ್ ನ ಮೂರನೇ ಕೊಡುಗೆ ಟಗರು ಪಲ್ಯವನ್ನು ಪ್ರೇಕ್ಷಕ ಚಪ್ಪರಿಸಿಕೊಂಡು ಸವಿದಿದ್ದಾನೆ. ಹೊಸಬರೇ ಸೇರಿ ತಯಾರಿಸಿದ ಸಂಬಂಧ ಸಾರಿದ್ದ ಈ ಕಥಾನಕ್ಕೀಗ 25 ದಿನ ಸಂಭ್ರಮ.. ಸದ್ಯದ ಸ್ಯಾಂಡಲ್ ವುಡ್ ಪರಿಸ್ಥಿತಿ ನೋಡಿದ್ರೆ ಒಂದು ಚಿತ್ರ ವಾರ ಪೂರೈಸೋದೇ ಹೆಚ್ಚು. ಹೀಗಿರುವಾಗ ಟಗರು ಪಲ್ಯ ಯಶಸ್ವಿಯಾಗಿ 25 ದಿನ ಪೂರೈಸಿದ್ದು, ಇಡೀ ತಂಡದ ಈ ಕ್ಷಣವನ್ನು ಸಂಭ್ರಮಿಸಿದೆ.  


COMMERCIAL BREAK
SCROLL TO CONTINUE READING

ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕಲಾವಿದರ ಸಂಘದಲ್ಲಿ ಟಗರು ಪಲ್ಯ ಸಿನಿಮಾದ 25 ದಿನ ಸಂಭ್ರಮಾಚಾರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಡಾಲಿ ಪಿಕ್ಚರ್ಸ್ ಒಡೆಯ ಧನಂಜಯ್ ಹಾಗೂ ಇಡೀ ಸಿನಿಮಾ ತಂಡ ಇವೆಂಟ್ ನಲ್ಲಿ ಉಪಸ್ಥಿತರಿದ್ದರು. ಟಗರು ಪಲ್ಯ ಸಕ್ಸಸ್ ಕಾರಣರಾದ ಪ್ರತಿಯೊಬ್ಬರಿಗೂ ಧನು, ಧನ್ಯವಾದ ತಿಳಿಸಿ ಮೂವೆಂಟೋ ನೀಡಿದ್ರು.


ಇದನ್ನೂ ಓದಿ: ದಕ್ಷಿಣದ ಅತ್ಯಂತ ಶ್ರೀಮಂತ ನಟ ಈತ.. 3,000 ಕೋಟಿ ಆಸ್ತಿ, 45 ಕೋಟಿ ಬಂಗಲೆಗೆ ಒಡೆಯ! 


ಈ ವೇಳೆ ಮಾತಿಗಿಳಿದ ನಿರ್ಮಾಪಕ ಡಾಲಿ ಧನಂಜಯ್, ನನಗೆ ತುಂಬಾ ಖುಷಿ. ಹೆಮ್ಮೆ. ನಾನು ನಿರ್ಮಾಪಕನಾಗಿ ಒಳ್ಳೆ ಕಂಟೆಂಟ್ ಮೇಲೆ. ಒಳ್ಳೆ ನಿರ್ದೇಶಕನ ಮೇಲೆ. ಒಳ್ಳೆ ಪ್ರತಿಭೆಗಳ ಮೇಲೆ ಇನ್ವೆಸ್ಟ್ ಮಾಡಿದ್ದೇನೆ. ಇದು 25 ದಿನದ ಕಾರ್ಯಕ್ರಮ ಎಂದು ಮಾಡುತ್ತಿದ್ದೇವೆ. ಆದರೆ 35 ದಿನ ಅದಕ್ಕಿಂತ ಜಾಸ್ತಿನೇ ಓಡಿದೆ. 50 ದಿನ ಕಾರ್ಯಕ್ರಮ ಮಾಡಬೇಕು ಎಂದು ಇಷ್ಟುದಿನ ಕಾಣುತ್ತಿದ್ದೇವು. ಕಾರಣಾಂತರದಿಂದ ಥಿಯೇಟರ್ ನಲ್ಲಿ ಶೋ ಹಾಕಲು ಆಗಲಿಲ್ಲ. ಬಡವ ರಾಸ್ಕಲ್, ಡೇರ್ ಡೆವಿಲ್ ಮುಸ್ತಫಾ ಸಿನಿಮಾಗಳ 25 ದಿನವನ್ನು ಸಂಭ್ರಮಿಸಿದ್ದೇವು. ಈಗ ಟಗರು ಪಲ್ಯ ಸಂಭ್ರಮಿಸುತ್ತಿದ್ದೇವೆ. ಸಿನಿಮಾದಲ್ಲಿ ಎಲ್ಲರೂ ಅದ್ಭುತವಾಗಿ ಕೆಲಸ ಮಾಡಿದ್ದೀರಾ ಎಂದರು.


ಯುವ ಪ್ರತಿಭೆ ಉಮೇಶ್ ಕೆ ಕೃಪಾ ನಿರ್ದೇಶಿಸಿದ್ದ ಟಗರು ಪಲ್ಯ ಸಿನಿಮಾದಲ್ಲಿ ಅಮೃತಾ ಪ್ರೇಮ್, ನಾಗಭೂಷಣ್, ತಾರಾ, ರಂಗಾಯಣ ರಘು ಸೇರಿದಂತೆ ದೊಡ್ಡ ತಾರಾಬಳಗವೇ ಅಭಿನಯಿಸಿದೆ. ಥಿಯೇಟರ್ ನಲ್ಲಿ ಮನರಂಜನೆಯ ರಸದೌತಣ ಬಡಿಸಿದ್ದ ಟಗರು ಪಲ್ಯವೀಗ ಅಮೇಜಾನ್ ಪ್ರೈಮ್ ಒಟಿಟಿಗೂ ಎಂಟ್ರಿ ಕೊಟ್ಟಿದೆ. ಬಿಗ್ ಸ್ಕ್ರೀನ್ ನಲ್ಲಿ ಮಿಸ್ ಮಾಡಿಕೊಂಡವರು ಮನೆ ಮಂದಿ ಕುಳಿತು ಸ್ಮಾಲ್ ಸ್ಕ್ರೀನ್ ನಲ್ಲಿ ಟಗರು ಪಲ್ಯ ಸವಿದುಬಿಡಿ.. 


ಇದನ್ನೂ ಓದಿ: Bharathi Vishnuvardhan: ಅನಾರೋಗ್ಯದಿಂದ ಹಾಸಿಗೆ ಹಿಡಿದ ಹಿರಿಯ ನಟಿ ಭಾರತಿ ವಿಷ್ಣುವರ್ಧನ್ 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.