Hoysala film Songs : ನಟ ರಾಕ್ಷಸ ಧನಂಜಯ ನಟನೆಯ 25ನೇ ಸಿನೆಮಾ ಹೊಯ್ಸಳದಲ್ಲಿ ಖಡಕ್ ಪೊಲೀಸ್ ಆಗಿ ಕಾಣಿಸಿಕೊಳ್ಳುವುದಲ್ಲದೆ ತನ್ನ ಮಡದಿಯ ಮುಂದೆ ಪ್ರೀತಿಯ ನಿವೇದನೆ ಮಾಡುವ ರೊಮಾಂಟಿಕ್ ಗಂಡನಾಗಿಯೂ ಕಾಣಿಸಿಕೊಂಡಿದ್ದಾರೆ. ಬಡವ ರಾಸ್ಕಲ್‌ನಲ್ಲಿ ಉಡುಪಿ ಹೋಟೆಲ್‌ ಹಾಡಿನಿಂದ ತಮ್ಮ ಜೋಡಿಯ ಮೋಡಿ ಮಾಡಿದ್ದ ಧನಂಜಯ ಹಾಗೂ ಅಮೃತಾ ಐಯ್ಯಂಗಾರ್ ರವರು ಈಗ "ಅರೇ ಇದು ಎಂಥಾ ಭಾವನೆ" ಎನ್ನುವ ಮೆಲೋಡಿ ಲವ್ ಸಾಂಗ್ ನಲ್ಲಿ ಬಹಳ ಹೋಮ್ಲಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. 


COMMERCIAL BREAK
SCROLL TO CONTINUE READING

"ಅರೇ ಇದು ಎಂಥಾ ಭಾವನೆ" ಹಾಡಿನ ಲಿರಿಕಲ್ ವಿಡಿಯೋ ಆನಂದ್ ಆಡಿಯೋ ಚಾನೆಲ್ ನಲ್ಲಿ ಇಂದು ಬಿಡುಗಡೆಯಾಗಿದ್ದು, ಗುರುದೇವ್ - ಗಂಗಾಳ ಕ್ಯೂಟ್ ರೊಮಾನ್ಸ್ ಅನ್ನು ನಾವು ಈ ಹಾಡಿನಲ್ಲಿ ನೋಡಬಹುದು. ತನ್ನ ಮಡದಿ- ಮನದರಸಿಗೆ ಮನದಾಳದ ಮಾತುಗಳನ್ನು ಈ ಹಾಡಿನ ಮೂಲಕ ಡಾಲಿ ಪ್ರೀತಿಯಿಂದ ವ್ಯಕ್ತಪಡಿಸುತ್ತಿದ್ದಾರೆ. ಗಾಯಕ ಹರಿಚರಣ್ ಧ್ವನಿಯಲ್ಲಿ ಮೂಡಿಬಂದಿರುವ ಈ ಹಾಡಿಗೆ ಯೋಗರಾಜ್ ಭಟ್ ರವರು ಸಾಹಿತ್ಯ ಬರೆದಿದ್ದು, ಅಜನೀಶ್ ಲೋಕನಾಥ್ ರವರು ಸಂಗೀತ ಸಂಯೋಜಿಸಿದ್ದಾರೆ. TJMM : ರಿಲೀಸ್‌ ಆದ ದಿನವೇ ʼತು ಜೂಟಿ ಮೈನ್ ಮಕ್ಕರ್ʼ ಚಿತ್ರದ HD ಪ್ರಿಂಟ್‌ ವಿಡಿಯೋ ಲೀಕ್‌..!


ಈ ಹಿಂದೆ ಟೈಟಲ್ ಸಾಂಗ್ ರಿಲೀಸ್ ಆಗಿದ್ದು ಭಾರಿ ಸದ್ದು ಮಾಡಿತ್ತು. ಪೊಲೀಸ್ ಡ್ರಾಮಾ ಸಿನಿಮಾ ಆಗಿರುವ ಹೊಯ್ಸಳ ಚಿತ್ರದ ಟೀಸರ್ ರಿಲೀಸ್ ಆಗಿ ಭರವಸೆ ಮೂಡಿಸಿತ್ತು. ಇನ್ನು ಡಾಲಿ ಧನಂಜಯ್​ರ 25ನೇ ಸಿನಿಮಾ ಹೊಯ್ಸಳ ಮಾರ್ಚ್‌ 30 ರಂದು ತೆರೆಮೇಲೆ ಅಪ್ಪಳಿಸಲಿದೆ. ಸಿನಿಮಾದಲ್ಲಿ ಅಮೃತಾ ಐಯ್ಯಂಗಾರ್ ನಾಯಕಿ, ಅಚ್ಯುತ್ ಕುಮಾರ್, ರಾಜೇಶ್ ನಟರಂಗ ಸೇರಿದಂತೆ ಇನ್ನಿತರರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾವನ್ನು ವಿಜಯ್ ಎನ್ ನಿರ್ದೇಶನ ಮಾಡಿದ್ದು, ಕೆಆರ್​ಜಿ ಸ್ಟುಡಿಯೋ ಅಡಿಯಲ್ಲಿ ಕಾರ್ತಿಕ್ ಗೌಡ ಹಾಗೂ ಯೋಗಿ ಜಿ ರಾಜ್ ನಿರ್ಮಾಣ ಮಾಡಿದ್ದಾರೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.