Kotee Heroine: ಡಾಲಿ ಧನಂಜಯ್ `ಕೋಟಿ` ಸಿನಿಮಾದ ಹೀರೋಯಿನ್ ಯಾರು ಗೊತ್ತೇ?
Kotee Movie Heroine: ಸ್ಯಾಂಡಲ್ವುಡ್ ನಟರಾಕ್ಷಸ ಡಾಲಿ ಧನಂಜಯ್ ಹಾಗೂ ಪರಮೇಶ್ ಗುಂಡ್ಕಲ್ ಕಾಂಬೋದ `ಕೋಟಿ` ಸಿನಿಮಾದ ಹೀರೋಯಿನ್ ಹೆಸರು ನಿನ್ನೆ ಟೀಸರ್ ಬಿಡುಗಡೆಯ ವೇಳೆ ರಿವೀಲ್ ಆಗಿದೆ. ಇದರ ಇನ್ನಷ್ಟು ಮಾಹಿತಿ ಇಲ್ಲಿದೆ.
Kotee Film Heroine Name Revealed: ಚಂದನವನದ ನಟರಾಕ್ಷಸ ಡಾಲಿ ಧನಂಜಯ್ ಅಭಿನಯದ ಬಹುನಿರೀಕ್ಷಿತ 'ಕೋಟಿ' ಸಿನಿಮಾದ ಹೀರೋಯಿನ್ ಹೆಸರು ರಿವೀಲ್ ಆಗಿದೆ. ಇತ್ತೀಚೆಗಷ್ಟೇ ಧನಂಜಯ್ ನಟನೆಯ ಕೋಟಿ ಚಿತ್ರದ ಸುದ್ದಿ ಹೆಚ್ಚು ಗಮನ ಸೆಳೆಯುತ್ತಿದ್ದು, ಯುಗಾದಿ ಹಬ್ಬದ ದಿನವೇ ಈ ಸಿನಿಮಾದ ಪೋಸ್ಟರ್ ರಿಲೀಸ್ ಮಾಡಲಾಗಿತ್ತು. ನಿನ್ನೆ ಸಂಜೆ ಏಪ್ರಿಲ್ 13 ರಂದು ಈ ಚಿತ್ರದ ಟೀಸರ್ ಕೂಡ ಬಿಡುಗಡೆಯಾಗಿತು.
'ಕೋಟಿ' ಟೀಸರ್ ರಿಲೀಸ್ ಸಮಯದಲ್ಲಿ ಸಿನಿಮಾದ ನಾಯಕಿ ಯಾರು ಅನ್ನೋದು ಸಹ ಅನೌನ್ಸ್ ಆಗಿದೆ. ಈ ಚಿತ್ರಕ್ಕೆ ಕೊಡಗಿನ ಕುವರಿ ಮೋಕ್ಷಾ ಕುಶಾಲ್ ಆಯ್ಕೆ ಆಗಿದ್ದಾರೆ. ಈ ನಟಿ ಸಿನಿಮಾದಲ್ಲಿ ನವಮಿ ಅನ್ನೋ ಪಾತ್ರವನ್ನ ನಿರ್ವಹಿಸುತ್ತಿದ್ದಾರೆ. ಕನ್ನಡದ ನಟಿ ಮೋಕ್ಷಾ ಕುಶಾಲ್ ಈ ಚಿತ್ರಕ್ಕೂ ಮುಂಚೆ ಕನ್ನಡದ ಹಲವಾರು ಚಿತ್ರಗಳಲ್ಲಿ ಬಣ್ಣ ಹಚ್ಚಿದ್ದಾರೆ. ಈ ನಟಿ ಅಯನ ಮತ್ತು ನವರತ್ನ ಅನ್ನುವ ಸಿನಿಮಾದಲ್ಲಿ ನಟಿಸಿದ್ದಾರೆ. ಈ ನಟಿ ಇದಕ್ಕೂ ಮುನ್ನ ಸೀರಿಯಲ್ ಲೋಕದಿಂದಲೇ ಬಣ್ಣದ ಲೋಕಕ್ಕೆ ಬಂದಿದ್ದಾರೆ.
ಪ್ರಿಯಾಂಕಾ ಚೋಪ್ರಾ ಮೊದಲು ನಟಿಸಿದ್ದು ಹಿಂದಿಯಲ್ಲಿ ಅಲ್ಲ.. ಸೌತ್ ಸಿನಿರಂಗದಿಂದ ಶುರುವಾದ ಜರ್ನಿ! ಫಸ್ಟ್ ಚಾನ್ಸ್ ನೀಡಿದ್ದೇ ಈ ಸ್ಟಾರ್ ನಟ!
ಡಾಲಿ ಧನಂಜಯ್ ಅಭಿನಯದ 'ಕೋಟಿ' ಸಿನಿಮಾವನ್ನು ಪರಮೇಶ್ ಗುಂಡ್ಕಲ್ ಮೊದಲ ಬಾರಿಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇಷ್ಟು ದಿನ ಟಿವಿ ಚಾನೆಲ್‌ಗಳಲ್ಲಿ ಫಿಕ್ಷನ್ ಹೆಡ್ ಆಗಿಯೇ ಕೆಲಸ ಮಾಡುತ್ತಿದ್ದವರೂ, ಇದೀಗ ತಮಲ್ಲಿರೋ ಕಥೆಗಳನ್ನ ಬೆಳ್ಳಿ ತೆರೆ ಮೇಲೆ ಹೇಳಲು ಸಜ್ಜಾಗುತ್ತಿದ್ದಾರೆ. ಈ ನಿರ್ದೇಶಕನ ಕನಸು ನಟ ಧನಂಜಯ್ ಸಾಥ್ ನೀಡಿದ್ದು, ಈ ಚಿತ್ರವನ್ನು ಜೀಯೋ ಸ್ಟುಡಿಯೋ ಅಡಿಯಲ್ಲಿ ಜ್ಯೋತಿ ದೇಶಪಾಂಡೆ ನಿರ್ಮಾಣ ಮಾಡುತ್ತಿದ್ದಾರೆ.
ನಿನ್ನೆ ಈ ಸಿನಿಮಾದ ಟೀಸರ್ ರಿಲೀಸ್ ಆಗಿದ್ದು, ಇದರ ಮೂಲಕ ಚಿತ್ರದ ಝಲಕ್ ಕೂಡ ಸಿಕ್ಕಿದೆ. ಟೀಸರ್ ಜೊತೆಗೆ ಸಿನಿಮಾದ ಪೋಸ್ಟರ್ ಹಾಗೂ ನಾಯಕಿಯ ಕಾಸ್ಟಿಂಗ್ ಸುದ್ಧಿ ಹೆಚ್ಚು ಗಮನ ಸೆಳೆಯುತ್ತಿದೆ. ನಟ ಧನಂಜಯ್ ಹೊಯ್ಸಳ ಸಿನಿಮಾದ ನಂತರ ಮತ್ತೆ ಬೆಳ್ಳಿತೆರೆ ಮೇಲೆ ಅಬ್ಬರಿಸಲು ರೆಡಿಯಾಗಿದ್ದಾರೆ. ಮಧ್ಯಮ ವರ್ಗದ ಜನ ಜೀವನದ ಕಥಾಹಂದರ ಹೊಂದಿರುವ ʻಕೋಟಿʼ ಚಿತ್ರ ಇದೇ ವರ್ಷ ಜೂನ್ 14ಕ್ಕೆ ರಾಜ್ಯಾದ್ಯಂತ ಅಬ್ಬರಿಸಲಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.