Abhiram Daggubati Marriage: ನಿರ್ಮಾಪಕ ದಗ್ಗುಬಾಟಿ ಸುರೇಶ್ ಬಾಬು ಮನೆಯಲ್ಲಿ ಮದುವೆ ಸಂಭ್ರಮ ಶುರುವಾಗಿದೆ. ಸುರೇಶ್ ಬಾಬು ಅವರ ಪುತ್ರ, ರಾಣಾ ಅವರ ಕಿರಿಯ ಸಹೋದರ, ದಗ್ಗುಬಾಟಿ ಅಭಿರಾಮ್ ಡಿಸೆಂಬರ್ 6ರಂದು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಗಲ್ಲು ಶಿಕ್ಷೆಗೆ ಗುರಿಯಾದ ವಿಶ್ವದ ಏಕೈಕ ಕ್ರಿಕೆಟಿಗ: ಪ್ರೀತಿಸಿ ಮದುವೆಯಾದ ಪತ್ನಿಯನ್ನೇ ಗುಂಡಿಕ್ಕಿ ಕೊಂದಿದ್ದೇಕೆ?


ಶ್ರೀರೆಡ್ಡಿಯಿಂದಾಗಿ ಮೊದಲು ಸೋಷಿಯಲ್ ಮೀಡಿಯಾದಲ್ಲಿ ನೆಗೆಟಿವ್ ಪ್ರಚಾರ ಪಡೆದ ದಗ್ಗುಬಾಟಿ ಅಭಿರಾಮ್ ಇತ್ತೀಚೆಗಷ್ಟೇ ತೇಜ ನಿರ್ದೇಶನದ ಅಹಿಂಸಾ ಚಿತ್ರದ ಮೂಲಕ ತೆಲುಗು ಪ್ರೇಕ್ಷಕರಿಗೆ ನಾಯಕನಾಗಿ ಪರಿಚಯವಾದರು.


ರಾಮ ನಾಯ್ಡು ಅವರ ಮೊಮ್ಮಗ ಮತ್ತು ಸುರೇಶ್ ಬಾಬು ಅಲಿಯಾಸ್ ವೆಂಕಟೇಶ್ ಅವರ ಮಗ ಆಗಿರುವುದರಿಂದ ಈ ನಾಯಕನ ಮೊದಲ ಚಿತ್ರದ ಪ್ರಚಾರಗಳು ಬೇರೆ ಮಟ್ಟದಲ್ಲಿರುತ್ತವೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಈ ಹೀರೋ ಅದ್ಯಾವುದೂ ಇಲ್ಲದೆ ತುಂಬಾ ಸೈಲೆಂಟ್ ಆಗಿ ತನ್ನ ಮೊದಲ ಸಿನಿಮಾವನ್ನು ರಿಲೀಸ್ ಮಾಡಿದ್ದರು.


ಡಿಸೆಂಬರ್ 6 ರಂದು ಅಭಿರಾಮ್ ಮದುವೆ ನಡೆಯಲಿದೆ ಎಂದು ಹೇಳಲಾಗುತ್ತಿದೆ. ದಗ್ಗುಬಾಟಿ ಅಭಿರಾಮ್ ರಾಮ ನಾಯ್ಡು ಅವರ ಸೋದರ ಸಂಬಂಧಿ ಪ್ರತ್ಯೂಷಾ ಅವರನ್ನು ಮದುವೆಯಾಗಲಿದ್ದಾರೆ. ಈ ಮಧ್ಯೆ ದಗ್ಗುಬಾಟಿ ಅಭಿರಾಮ್ ಮದುವೆಗೆ ದಗ್ಗುಬಾಟಿ ಕುಟುಂಬ ವಿಭಿನ್ನವಾಗಿ ಪ್ಲಾನ್ ಮಾಡಿದೆ.


ದಗ್ಗುಬಾಟಿ ಅಭಿರಾಮ್ ಮತ್ತು ಪ್ರತ್ಯೂಷಾ ವಿವಾಹದಲ್ಲಿ ಕುಟುಂಬ ಸದಸ್ಯರು ಮತ್ತು ಆಪ್ತರು ಭಾಗವಹಿಸಲಿದ್ದಾರೆ. ಗಣ್ಯರ ಉಪಸ್ಥಿತಿಯಲ್ಲಿ ಪ್ರತ್ಯೂಷಾ ಮತ್ತು ಅಭಿರಾಮ್ ವೇದಮಂತ್ರಗಳ ಸಾಕ್ಷಿಯಾಗಿ ತಮ್ಮ ಹೊಸ ಜೀವನಕ್ಕೆ ಕಾಲಿಡಲಿದ್ದಾರೆ.  


ಇದನ್ನೂ ಓದಿ: ಬಿಗ್‌ಬಾಸ್: ಸ್ನೇಹಿತ್‌ ಕೈಗೆ ವಿಶೇಷ ಅಧಿಕಾರ: ಯಾರಿಗೆ ಅಭಯ? ಯಾರಿಗೆ ಅಪಾಯ


ಅಂದಹಾಗೆ ಈ ಮದುವೆ ಶ್ರೀಲಂಕಾದಲ್ಲಿ ನಡೆಯಲಿದೆ. ಶ್ರೀಲಂಕಾದ ಪಂಚತಾರಾ ರೆಸಾರ್ಟ್‌’ನಲ್ಲಿ ಅಭಿರಾಮ್ ಮದುವೆ ನಡೆಯಲಿದೆ. ಡಿಸೆಂಬರ್ 4 ರಿಂದ ಸಂಭ್ರಮ ಶುರುವಾಗಿದ್ದು, ಟಾಲಿವುಡ್ ಮೂಲಗಳ ಪ್ರಕಾರ, ಮೂರು ದಿನಗಳ ಕಾಲ ಹಲ್ದಿ, ಮೆಹಂದಿ ಮತ್ತು ಸಂಗೀತ್’ದಂತಹ ಕಾರ್ಯಕ್ರಮಗಳು ನಡೆಯಲಿದೆ. ಡಿಸೆಂಬರ್ 6 ರಂದು ರಾತ್ರಿ 8.50ಕ್ಕೆ ದಗ್ಗುಬಾಟಿ ಅಭಿರಾಮ್ ಮದುವೆ ನಡೆಯಲಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ