ಚೆನ್ನೈ: ಮಾಸ್ಟರ್‌ ಮತ್ತು ವರಿಸು ಸಿನಿಮಾದ ಬಳಿಕ ಮೂರನೇ ಸಲ ದಳಪತಿ ವಿಜಯ್‌ ಜತೆ ಕೈ ಜೋಡಿಸುತ್ತಿದೆ 7 ಸ್ಕ್ರೀನ್‌ ಸ್ಟುಡಿಯೋಸ್‌ ಬ್ಯಾನರ್‌. ಸದ್ಯಕ್ಕೆ ದಳಪತಿ 67 ಎಂದು ತಾತ್ಕಾಲಿಕ ಶೀರ್ಷಿಕೆಯಡಿ ಘೋಷಣೆ ಆಗಿರುವ ಈ ಚಿತ್ರವನ್ನು ಲೋಕೇಶ್‌ ಕನಗರಾಜ್‌ ನಿರ್ದೇಶನ ಮಾಡಲಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ- ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆದ ಸ್ಟಿಕ್ ಇಡ್ಲಿ...!


ಈ ಹಿಂದೆ ವಿಜಯ್‌ಗೆ ಮಾಸ್ಟರ್‌ ಸಿನಿಮಾ ನಿರ್ದೇಶನ ಮಾಡಿದ್ದ ಲೋಕೇಶ್‌ಗೆ ಇದು ವಿಜಯ್‌ ಜತೆ ಎರಡನೇ ಪ್ರಾಜೆಕ್ಟ್‌. ಈ ಮೂಲಕ ಮಾಸ್ಟರ್‌ ಜೋಡಿ ಮತ್ತೊಮ್ಮೆ ಮೋಡಿ ಮಾಡಲು ಸಿದ್ಧವಾಗಿದೆ. ಈಗಾಗಲೇ ಜ 2ರಿಂದ ಶೂಟಿಂಗ್‌ ಶುರುವಾಗಿದೆ.ಕೈದಿ, ಮಾಸ್ಟರ್‌ ಮತ್ತು ಬೀಸ್ಟ್‌ ಸಿನಿಮಾಗಳಿಗೆ ಸಂಗೀತ ನೀಡಿದ್ದ ರಾಕ್‌ಸ್ಟಾರ್‌ ಅನಿರುದ್ಧ ರವಿಚಂದ್ರನ್‌ ದಳಪತಿ 67ಕ್ಕೂ ಸಂಗೀತ ನೀಡಲಿದ್ದು, ನಾಲ್ಕನೇ ಬಾರಿ ವಿಜಯ್‌ ಜತೆ ಕೈ ಜೋಡಿಸಿದ್ದಾರೆ.


ಇದನ್ನೂ ಓದಿ- ಕ್ಯಾನ್ಸರ್ ರೋಗಿಯನ್ನು ಸಮಾಧಾನಪಡಿಸಲು ತನ್ನ ಕೂದಲನ್ನೇ ಬೋಳಿಸಿಕೊಂಡ ಕ್ಷೌರಿಕ- ವಿಡಿಯೋ ವೈರಲ್


ಇನ್ನುಳಿದಂತೆ ಮನೋಜ್‌ ಪರಮಹಂಸ ಛಾಯಾಗ್ರಹಣ, ಅನ್ಬರವೀ ಸಾಹಸ, ಫಿಲೋಮಿನ್‌ ರಾಜ್‌ ಸಂಕಲನ, ಸತೀಸ್‌ ಕುಮಾರ್‌ ಕಲೆ, ದಿನೇಶ್‌ ನೃತ್ಯ ನಿರ್ದೇಶನ, ಸಂಭಾಷಣೆ ಲೋಕೇಶ್‌ ಕನಗರಾಜ್‌, ರತ್ನ ಕುಮಾರ್‌, ಧೀರಜ್‌ ವೈದ್ಯ, ರಾಮಕುಮಾರ್‌ ಬಾಲಸುಬ್ರಮಣ್ಯ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.