Dance Karnataka Dance Season 6 : ವೀಕ್ಷಕರಿಗೆ ಸದಾ ವಿನೂತನ ಮನರಂಜನೆ ನೀಡುತ್ತಿರುವ ನಂ.1 ವಾಹಿನಿ ಜೀ ಕನ್ನಡ. ಕರ್ನಾಟಕದ ಪ್ರತಿಭೆಗಳಿಗೆಂದೇ  ಅನೇಕ ಕಾರ್ಯಕ್ರಮಗಳನ್ನು ಮೀಸಲಿಡುತ್ತ ಬಂದಿದೆ. ಡಾನ್ಸ್ ಕರ್ನಾಟಕ ಡಾನ್ಸ್ ಯಶಸ್ವಿ 5 ಸೀಸನ್ ಗಳನ್ನು ಪೂರೈಸಿ ಇದೀಗ 6 ನೇ ಸೀಸನ್ ಅಂತಿಮ ಘಟ್ಟ ತಲುಪಿದೆ. ನಿಮ್ಮ ನೆಚ್ಚಿನ ಜೀ ಕನ್ನಡದಲ್ಲಿ ದಕ್ಷಿಣ ಭಾರತದ ಅತಿ ದೊಡ್ಡ ಡಾನ್ಸ್ ರಿಯಾಲಿಟಿ ಶೋ “ಡಾನ್ಸ್ ಕರ್ನಾಟಕ ಡಾನ್ಸ್ -6 ಗ್ರಾಂಡ್ ಫಿನಾಲೆ” ಇದೇ ಶನಿವಾರ ಸಂಜೆ 6.00 ಕ್ಕೆ  ಪ್ರಸಾರವಾಗಲಿದೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ : Bigg Boss : ಬಿಗ್‌ಬಾಸ್‌ ಮನೆಗೆ ಎಂಟ್ರಿ ಕೊಡಲಿದ್ದಾರೆ ಈ ರಾಷ್ಟ್ರ ಪ್ರಶಸ್ತಿ ವಿಜೇತ ನಟಿ.!


ವಿಭಿನ್ನ ರೀತಿಯ ನೃತ್ಯ ಪ್ರಯೋಗಗಳಿಗೆ ಸಾಕ್ಷಿಯಾಗಿರುವ ಈ ವೇದಿಕೆ ನಾಟ್ಯ ವೈಭವವನ್ನು ಇಡೀ ನಾಡಿಗೆ ಪರಿಚಯಿಸಿದ ಹೆಗ್ಗಳಿಕೆ ಹೊಂದಿದೆ. ಅದರಲ್ಲೂ ವಿಶೇಷವಾಗಿ ಈ ಬಾರಿ ನಮ್ಮೆಲ್ಲರ ನೆಚ್ಚಿನ ಅಪ್ಪು ಪುನೀತ್ ರಾಜ್ ಕುಮಾರ್ ಅವರ "ಪವರ್ ಸ್ಟಾರ್ ಟ್ರೋಫಿ " ಯನ್ನು ಭರ್ಜರಿಯಾಗಿ ಅನಾವರಣಗೊಳಿಸಿದ್ದು ಆ ವಿಶಿಷ್ಟ ಟ್ರೋಫಿ ವಿಜೇತರ ಪಾಲಾಗಲಿದೆ. ಅಷ್ಟೇ ಅಲ್ಲದೆ ಅದು ಯಾರ ಕೈಸೇರಲಿದೆ ಎಂಬ ಕುತೂಹಲ ವೀಕ್ಷಕರಲ್ಲಿ ಮನೆಮಾಡಿದೆ.
ಸತತ ಐದು ತಿಂಗಳುಗಳ ಕಾಲ ವೀಕ್ಷಕರನ್ನ ಕುಣಿಸಿ ರಂಜಿಸಿದ ಈ ಕಾರ್ಯಕ್ರಮ ಕಳೆದ ಐದು ಸೀಸನ್ ಗಳಿಗಿಂತ ವಿಶಿಷ್ಟವಾಗಿತ್ತು. ಈ ಬಾರಿ ಕರುನಾಡ ಚಕ್ರವರ್ತಿ ಡಾ . ಶಿವರಾಜ್ ಕುಮಾರ್ ಅವರು ಡ್ಯಾನ್ಸಿಂಗ್ ಮಹಾಗುರುವಾಗಿ ಆಗಮಿಸಿದ್ದರಿಂದ ವೇದಿಕೆಗೆ ಮತ್ತಷ್ಟು ಕಳೆಗಟ್ಟಿತು ಹಾಗು ಘನತೆ ಹೆಚ್ಚಿತು ಎನ್ನುವುದು ನೋಡುಗರ ಅಭಿಪ್ರಾಯವಾಗಿದೆ.


ಆರಂಭದಿಂದಲೂ ಭರ್ಜರಿ ರೇಟಿಂಗ್ ಗಳಿಸುವುದರ ಮೂಲಕ ದಾಖಲೆ ನಿರ್ಮಿಸದ ಈ ಶೋ ವಾರದಿಂದ ವಾರಕ್ಕೆ ತನ್ನ ಗುಣಮಟವನ್ನು ಹೆಚ್ಚಿಸಿಕೊಂಡು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಇದೀಗ ಅಂತಿಮವಾಗಿ 7 ಜೋಡಿಗಳು ಫಿನಾಲೆ ಹಂತಕ್ಕೆ ತಲುಪಿದ್ದು ಗೆಲುವಿನ ಕಿರೀಟ ಯಾರ ಮುಡಿಗೇರಲಿದೆ ಎನ್ನುವುದನ್ನು ವೀಕ್ಷಕರು ತುದಿಗಾಲಿನಲ್ಲಿ ನಿಂತು ಕಾಯುವಂತೆ ಮಾಡಿದೆ.


ಇದನ್ನೂ ಓದಿ : Actress Suicide: ಡೆತ್‌ನೋಟ್‌ ಬರೆದಿಟ್ಟು ಯುವನಟಿ ಆತ್ಮಹತ್ಯೆ..!


ಇನ್ನು ಕಾರ್ಯಕ್ರಮಕ್ಕೆ ಮತ್ತಷ್ಟು ರಂಗುತುಂಬಿದವರೆಂದರೆ ತೀರ್ಪುಗಾರರರಾದ ದೇಶದ ಹೆಮ್ಮೆಯ ನೃತ್ಯ ನಿರ್ದೇಶಕ ಚಿನ್ನಿ ಮಾಸ್ಟರ್ , ಸ್ಯಾಂಡಲ್ ವುಡ್ ನ ಕ್ರೇಜಿ ಕ್ವೀನ್ ರಕ್ಷಿತಾ ಪ್ರೇಮ್ , ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಮತ್ತು ಡ್ಯಾನ್ಸಿಂಗ್ ಮಹಾಗುರುವಾಗಿದ್ದ ಕರುನಾಡ ಚಕ್ರವರ್ತಿ ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ ಅವರು. ಎಂದಿನಂತೆ ಅನುಶ್ರೀ ಅವರ ನಿರೂಪಣೆ ನೋಡುಗರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ̤


ಇನ್ನು ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ -6 ನ ಗ್ರಾಂಡ್ ಫಿನಾಲೆ ಚಿತ್ರೀಕರಣ ಇದೇ ಸೆಪ್ಟೆಂಬರ್ 21 ಬುಧವಾರದಂದು ಸಂಜೆ 5.30 ಕ್ಕೆ ಕನಕಪುರದ ರೂರಲ್ ಡಿಗ್ರಿ ಕಾಲೇಜ್ ಮೈದಾನದಲ್ಲಿ ನಡೆಯಲಿದೆ. ಕನಕಪುರದ ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮಕ್ಕೆ ಆಗಮಿಸಿ ಯಶಸ್ವಿಗೊಳಿಸಬೇಕಾಗಿ ವಾಹಿನಿ ವಿನಂತಿಸಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.