ನವದೆಹಲಿ: ಕಿರುತೆರೆಯ ಬಹುವಿವಾದಿತ ರಿಯಾಲಿಟಿ ಶೋ 'ಬಿಗ್ ಬಾಸ್'ನ ಮಾಜಿ ಸ್ಪರ್ಧಿ ಶೆರ್ಲಿನ್ ಚೋಪ್ರಾ ಅವರ ಡ್ಯಾನ್ಸ್ ವೀಡಿಯೋ 'ಟುನುನ್ ಟುನುನ್...' ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸೌಂಡ್ ಮಾಡ್ತಿದೆ. ಈಗಾಗಲೇ ಸಾಕಷ್ಟು ಅಭಿಮಾನಿಗಳನ್ನು ಹೊಂದಿರುವ ಶೆರ್ಲಿನ್ ಈ ಹಾಡಿನ ಮೂಲಕ ಹವಾ ಕ್ರಿಯೇಟ್ ಮಾಡಿದ್ದು, ಒಂದು ಕೋಟಿಗೂ ಅಧಿಕ ವೀಕ್ಷಣೆ ಪಡೆದಿದೆ. 


COMMERCIAL BREAK
SCROLL TO CONTINUE READING

1 ಕೋಟಿಗೂ ಅಧಿಕ ವೀಕ್ಷಣೆ
ಜನವರಿ 21ರಂದು ಯೂಟ್ಯೂಬ್ ಮೂಲಕ T-ಸೀರಿಸ್ ಅಪ್ಲೋಡ್ ಮಾಡಿರುವ ಶೆರ್ಲಿನ್ ಅವರ ವೀಡಿಯೋವನ್ನು ಈವರೆಗೆ 14,892,829 ಬಾರಿ ಜನ ವೀಕ್ಷಿಸಿದ್ದಾರೆ. ಅಷ್ಟೇ ಅಲ್ಲದೆ, 1,59,000ಕ್ಕೂ ಅಧಿಕ ಮಂದಿ ಈ ಹಾಡನ್ನು ಲೈಕ್ ಮಾಡಿದ್ದು, ಸಿಕ್ಕಾಪಟ್ಟೆ ಜನ ಕಮೆಂಟ್ ಮಾಡಿದ್ದಾರೆ. ಈ ಹಾಡನ್ನು ಸುಕ್ತ ಕಾಕರ್, ವಿಕಿ ಮತ್ತು ಹಾರ್ದಿಕ್ ಹಾಡಿದ್ದಾರೆ.