`ಡ್ಯಾನ್ಸಿಂಗ್ ಅಂಕಲ್` ನಟ ಗೋವಿಂದ್ ನನ್ನು ಭೇಟಿಯಾದಾಗ!
ನವದೆಹಲಿ: ಸೋಶಿಯಲ್ ಮಿಡಿಯಾದಲ್ಲಿ ಡ್ಯಾನ್ಸಿಂಗ್ ಅಂಕಲ್ ಎಂದೇ ಪ್ರಸಿದ್ದಿ ಪಡೆದ ಸಂಜೀವ್ ಶ್ರೀವಾಸ್ತವ್ ಕೊನೆಗೂ ತಮ್ಮ ನೆಚ್ಚಿನ ಬಾಲಿವುಡ್ ನಟ ಗೋವಿಂದ್ ನನ್ನು ಭೇಟಿಯಾಗಿದ್ದಾರೆ.
ಮೂಲತಃ ಭೂಪಾಲ್ ನವರಾದ ಸಂಜೀವ ಈಗ ಗೋವಿಂದರನ್ನು ಮುಂಬೈನಲ್ಲಿ ಡ್ಯಾನ್ಸ್ ದಿವಾನೆ ಸೇಟ್ ನಲ್ಲಿ ಭೇಟಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಮಾಧುರಿ ದಿಕ್ಷಿತ್, ತುಷಾರ್ ಕಾಲಿಯಾ ಮತ್ತು ಶಶಾಂಕ್ ಖೈತಾನ್ ಅವರು ತೀರ್ಪುಗಾರರಾಗಿರುವ ಡ್ಯಾನ್ಸ್ ದೀವಾನೆಯಲ್ಲಿ ಡ್ಯಾನ್ಸಿಂಗ್ ಅಂಕಲ್ ಅವರು ಪತ್ನಿ ಸಮೇತರಾಗಿ ಗೋವಿಂದ್ ರನ್ನು ಭೇಟಿಯಾಗಿದ್ದಾರೆ.
ಫೋಟೋ ಕೃಪೆ: ಯೋಗೆನ್ ಶಾ
ಇತ್ತೀಚಿಗೆ ಡಾನ್ಸಿಂಗ್ ಅಂಕಲ್ ಮದುವೆ ಸಮಾರಂಭದಲ್ಲಿ ಬಾಲಿವುಡ್ ನಟ ಗೋವಿಂದ್ ರೀತಿಯಲ್ಲಿ ನೃತ್ಯ ಮಾಡುತ್ತಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿತ್ತು,ಆ ಮೂಲಕ ಇವರು ಎಲ್ಲರಿಗೂ ಚಿರಪರಿಚಿತರಾಗಿದ್ದರು.