ನವದೆಹಲಿ: ದಂಗಲ್ ಖ್ಯಾತಿಯ ನಟಿ ಜೈರಾ ವಾಸಿಮ್ ದೆಹಲಿಯಿಂದ ಮುಂಬೈಗೆ ತೆರಳುವ ವಿಮಾನದಲ್ಲಿ ಸಹ ಪ್ರಯಾಣಿಕನಿಂದ ಲೈಂಗಿಕ ಕಿರುಕುಳ ಅನುಭವಿಸಿದ ಘಟನೆ ನಡೆದಿದೆ.
 
ಶನಿವಾರದಂದು ಈ ಕಹಿ ಘಟನೆಯ ಕುರಿತಾಗಿ ವಿವರಿಸಿದ ಜೈರಾ ಇತ್ತೀಚಿಗೆ 'ವಿಸ್ತಾರ್' ಕಂಪನಿಯ ವಿಮಾನದಲ್ಲಿ ದೆಹಲಿಯಿಂದ ಮುಂಬೈಗೆ ಪ್ರಯಾಣ ಮಾಡುತ್ತಿದಾಗ ಅವಳ ಹಿಂಬದಿಯ ಸಿಟ್ ನಲ್ಲಿ  ಕುಳಿತಿದ್ದ ಮಧ್ಯವಯಸ್ಕನೊಬ್ಬ ಜೈರಾಗೆ ಲೈಂಗಿಕ ಕಿರುಕುಳ ನೀಡಲು ಪ್ರಯತ್ನಿಸಿದ ಎಂದು  ಸಾಮಾಜಿಕ ಜಾಲತಾಣದ ಮೂಲಕ ಹಂಚಿಕೊಂಡಿದ್ದಾರೆ.


COMMERCIAL BREAK
SCROLL TO CONTINUE READING

ಈ ಘಟನೆಯ ಕುರಿತಾಗಿ ಪ್ರತಿಕ್ರಯಿಸಿರುವ ವಿಸ್ತಾರ್ ಕಂಪನಿ "ಜೈರಾ ವಾಸಿಮ್ ರವರ ಈ ಘಟನೆಯ ಅನುಭವದ ವರದಿ ಕಂಪನಿಯ ಗಮನಕ್ಕೆ ಬಂದಿದ್ದು.ಇದಕ್ಕೆ ಸಂಬಂಧಿಸಿದಂತೆ ಈಗಾಗಲೇ ತನಿಖೆಯನ್ನು ಆರಂಭಿಸಲಾಗಿದೆ, ಅದಕ್ಕೆ ಬೇಕಾಗುವ ಪೂರಕ ಮಾಹಿತಿಯನ್ನು ಜೈರಾರವರಿಂದಲೂ ಸಹ ಪಡೆದುಕೊಳ್ಳಲಾಗುತ್ತದೆ ಎಂದು ವಿಸ್ತಾರ್ ತಿಳಿಸಿದೆ.