ಕನ್ನಡ ಸಿನಿಮಾಗಳು ಅಂದ್ರೆ ಹಾಗೇ, ಗಂಧದ ಘಮಲು ಗ್ಯಾರಂಟಿ. ಇಂತಹ ವಿಚಾರದಲ್ಲಿ ಸ್ಯಾಂಡಲ್‌ವುಡ್‌ ದೊಡ್ಡ ಹೆಸರು ಮಾಡಿದೆ. ಅದರಲ್ಲೂ ಕೆಲ ವರ್ಷಗಳಲ್ಲಿ ಹಾಲಿವುಡ್‌ ಸಿನಿಮಾಗಳಿಗೂ ನಡುಕ ಹುಟ್ಟಿಸುತ್ತಿವೆ ಕನ್ನಡಿಗರ ಸಿನಿಮಾಗಳು. ಇಂತಿಪ್ಪ ಸ್ಯಾಂಡಲ್‌ವುಡ್‌ ಇಂಡಸ್ಟ್ರಿಯಲ್ಲಿ ಸೂಪರ್‌ ಸ್ಪೆಷಲ್‌ ಟೈಟಲ್‌ ಇಟ್ಕೊಂಡು ಚಿತ್ರತಂಡವೊಂದು ಹೆಜ್ಜೆಹಾಕಿದೆ. ಟೈಟಲ್‌ ನೋಡಿದ ಪ್ರೇಕ್ಷಕರು, ಏನ್‌ ಗುರೂ ಇದು ಸ್ಪೆಷಲ್‌ ಟೈಟಲ್..?‌ ಅಂತಾ ಹುಬ್ಬೇರಿಸಿದ್ದಾರೆ.


COMMERCIAL BREAK
SCROLL TO CONTINUE READING

‘The Darwin’s in ದಂಡಿದುರ್ಗ’... ನಿಮಗೂ ಆಶ್ಚರ್ಯ ಆಯ್ತಾ..? ಡಾರ್ವಿನ್‌ ಬರೆದ ಜೀವ ವಿಕಾಸದ ಥಿಯೆರಿ ಗೊತ್ತು, ಆದರೆ ಇದೇನಿದು ‘The Darwin’s in ದಂಡಿದುರ್ಗ’ ಅಂತಾ ಯೋಚಿಸುತ್ತಿದ್ರಾ..? ಅಷ್ಟಕ್ಕೂ ನಿಮ್ಮ ಪ್ರಶ್ನೆಗೆ ಉತ್ತರ ಸಿಗುವುದು ಸಿನಿಮಾ ನೋಡಿದ ನಂತರವೇ. ಹೀಗೆ ಸೂಪರ್‌ ಸ್ಪೆಷಲ್‌ ಟೈಟಲ್‌ ಇಟ್ಕೊಂಡ ‘The Darwin’s in ದಂಡಿದುರ್ಗ’ದ ಮುಹೂರ್ತ ಅದ್ಧೂರಿಯಾಗಿ‌ ನೆರವೇರಿದೆ.


ಇದನ್ನೂ ಓದಿ: Viral Video: ಮಲಗಿದ್ದ ಮಹಿಳೆಯ ಮೇಲೆ ಹೆಡೆ ಎತ್ತಿ ಕುಳಿತ ನಾಗರಹಾವು!


ಗಣ್ಯರ ಸಾಥ್‌


ಹೊಸ ಪ್ರತಿಭೆೆಗೆ ಚಿತ್ರಕ್ಕೆ ಸಾಥ್‌ ಕೊಡಲು ಕನ್ನಡದ ಸ್ಟಾರ್ಸ್ ಸದಾ ಮುಂದೆ. ಇದೇ ರೀತಿ ‘The Darwin’s in ದಂಡಿದುರ್ಗ’ ತಂಡಕ್ಕೆ ಹಲವು ನಟರು ಸಾಥ್‌ ನೀಡಿದ್ರು. ಬೆಂಗಳೂರಿನ ಲಕ್ಷ್ಮೀ ವೆಂಕಟೇಶ್ವರ ಸ್ವಾಮಿ ದೇಗುಲದಲ್ಲಿ ಸಿನಿಮಾ ಮುಹೂರ್ತ ನೆರವೇರಿದ್ದು, ನಿರ್ದೇಶಕ ಕಂ ನಿರ್ಮಾಪಕ ಸತ್ಯಪ್ರಕಾಶ್, ನಟ ಅಜಯ್ ರಾವ್, ನಿರ್ಮಾಪಕ ಕೆ.ಮಂಜು ಹೊಸಬರ ಈ ಪ್ರಯತ್ನಕ್ಕೆ ಸಾಥ್ ನೀಡಿದ್ರು. ಸಿನಿಮಾ ತಂಡಕ್ಕೆ ಶುಭವಾಗಲಿ ಎಂದು ಹಾರೈಸಿದ್ದಾರೆ.


SBSC ಕ್ರಿಯೇಷನ್ ನಡಿ ಮಧುರಾಜ್ ನಿರ್ಮಾಣ ಮಾಡ್ತಿರುವ 2ನೇ ಸಿನಿಮಾ ಇದಾಗಿದೆ.ರಾಮ ರಾಮ ರೇ ಖ್ಯಾತಿ ಲವಿತ್ ಕ್ಯಾಮೆರಾ ಕೈಚಳಕ, ಉಮೇಶ್ ಸಂಕಲನ, ಅನಿಲ್ ಸಿಜೆ ಸಂಗೀತ ಸಿನಿಮಾಗಿದೆ. 2 ಹಂತಗಳಲ್ಲಿ ಶೂಟಿಂಗ್ ನಡೆಸುವ ಪ್ಲ್ಯಾನ್ ಹಾಕಿಕೊಂಡಿರುವ ಚಿತ್ರತಂಡ, ಮೈಸೂರು, ಮಂಡ್ಯ, ಶ್ರೀರಂಗಪಟ್ಟಣ ಸುತ್ತಮುತ್ತ ಹಾಗೂ ಬಳ್ಳಾರಿಯಲ್ಲಿ ಚಿತ್ರೀಕರಣ ನಡೆಸಲಿದೆ.


ಇದನ್ನೂ ಓದಿ: ಚಿತ್ರದುರ್ಗದ ಮಠದ ಮುರುಘಾಶರಣರ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ: ಎಫ್ಐಆರ್ ದಾಖಲು!


ಇನ್ನೊಂದು ವಿಶೇಷತೆ ಏನಪ್ಪಾ ಅಂದ್ರೆ ಕಳೆದ 8 ವರ್ಷಗಳಿಂದ ಅಸಿಸ್ಟೆಂಟ್, ಡೈರೆಕ್ಟರ್, ರೈಟರ್ ಕೆಲಸ ಮಾಡಿದ ಅನುಭವವಿರುವ ತ್ರಿಭುವನ್ ಶ್ರೀಕಾಂತ್ ಈ ಸಿನಿಮಾಗೆ ಡೈರೆಕ್ಷನ್‌ ಮಾಡಲಿದ್ದಾರೆ. ಈ ಚಿತ್ರದ ಮೂಲಕ ತ್ರಿಭುವನ್ ನಿರ್ದೇಶಕರಾಗಿ ಪ್ರಮೋಷನ್ ಪಡೆದಿದ್ದಾರೆ. ‘ಬೈ ಒನ್ ಗೆಟ್ ಒನ್’ ಮೂಲಕ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿದ್ದ ಮಿಥುನ್ & ಮಿಲನ್ ‘The Darwin’s in ದಂಡಿದುರ್ಗ’ ಚಿತ್ರದಲ್ಲಿ ಮುಖ್ಯಪಾತ್ರ ನಿರ್ವಹಿಸಲಿದ್ದಾರೆ. ಆರತಿ ನಾಯರ್ ನಾಯಕಿಯಾಗಿ ಬಣ್ಣ ಹಚ್ಚಲಿದ್ದು, ಈ ಸಿನಿಮಾ ತನ್ನ ಟೈಟಲ್‌ ಮೂಲಕವೇ ಸಿಕ್ಕಾಪಟ್ಟೆ ಕುತೂಹಲ ಕೆರಳಿಸಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.